ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಿಪ್ಪನ್‌ಪೇಟೆ: ಸಂಭ್ರಮದ ಗಣೇಶ ಆಚರಣೆಗೆ ಭರದ ಸಿದ್ಧತೆ

Published : 6 ಸೆಪ್ಟೆಂಬರ್ 2024, 13:06 IST
Last Updated : 6 ಸೆಪ್ಟೆಂಬರ್ 2024, 13:06 IST
ಫಾಲೋ ಮಾಡಿ
Comments

ರಿಪ್ಪನ್‌ಪೇಟೆ: ಪಂಚಮಿಯ ನಂತರ ಹೆಣ್ಣುಮಕ್ಕಳು ಸಂಭ್ರಮದಲ್ಲಿ ತೊಡಗಿಸಿಕೊಳ್ಳುವ ಗೌರಿ–ಗಣೇಶ ಹಬ್ಬದ ಮುನ್ನಾದಿನವಾದ ಶುಕ್ರವಾರ, ಬೆಳಗ್ಗಿನಿಂದಲೇ ಸಿದ್ಧತೆ ಮಾಡಿಕೊಂಡರು. 

ಮದುವೆಯಾಗಿ ಗಂಡನ ಮನೆ ಸೇರಿದ ಮಗಳು, ಪತಿರಾಯನೊಂದಿಗೆ ತವರಿಗೆ ಆಗಮಿಸುವ ಸಂಭ್ರಮ ಒಂದು ಕಡೆಯಾದರೆ, ಹಬ್ಬದ ಆಚರಣೆಗಾಗಿ ಹೂ-ಹಣ್ಣು, ಬಟ್ಟೆ, ದಿನಸಿ ಹಾಗೂ ವಿವಿಧ ಭಕ್ಷ್ಯಗಳನ್ನು ಸಿದ್ಧಪಡಿಸಲು ಆಹಾರ ಪದಾರ್ಥ ಖರೀದಿಯ ಸಲುವಾಗಿ ಅಂಗಡಿಗಳಲ್ಲಿ ಜನರ ಸಾಲು ಮತ್ತೊಂದೆಡೆ ಕಂಡುಬಂದಿತ್ತು.

ಹೆಂಗೆಳೆಯರು ಬೆಳಿಗ್ಗೆಯೇ ಮನೆಯ ಹಿರಿಯರು ಹಾಗೂ ಮಕ್ಕಳೊಂದಿಗೆ ಸಮೀಪದ ಜಲ ಮೂಲಗಳಾದ ಶರ್ಮಿಣಾವತಿ, ಕುಮುದ್ವತಿ ನದಿ, ಕೆರೆ-ಕಟ್ಟೆ, ಮನೆಯಂಗಳದ ಬಾವಿಯಿಂದ ಗಂಗೆಗೆ ಭಕ್ತಿಪೂರ್ವಕ ಪೂಜೆ ಸಲ್ಲಿಸಿ, ತಮ್ಮ ಮನೆಯಲ್ಲಿ ಗೌರಿಯನ್ನು ಪ್ರತಿಷ್ಠಾಪಿಸಿ ಸಂಭ್ರಮಿಸಿದರು.

ವಿಶೇಷವೆಂದರೆ ಪುಬ್ಬಾ ಮಳೆ (ಹುಬ್ಬೆ) ಬಿಡುವು ನೀಡಿದ್ದು, ಗೌರಿ-ಗಣೇಶ ಆಚರಣೆಯ ಸಂಭ್ರಮಕ್ಕೆ ಮತ್ತಷ್ಟು ಮೆರಗು ನೀಡುವ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಡುವ ಕಲಾವಿದರಿಗೆ ಬೇಡಿಕೆ ಹೆಚ್ಚುವಂತೆ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT