ರಿಪ್ಪನ್‌ಪೇಟೆ ಸಂತೆ ಮಾರುಕಟ್ಟೆ ಪ್ರಾಂಗಣದಲ್ಲಿ ಬೀಡು ಬಿಟ್ಟಿರುವ ವಲಸೆ ವ್ಯಾಪಾರಿಗಳ ಕುಟುಂಬ
ಚುನಾಯಿತ ಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆ ಹಣಕಾಸು ಯೋಜನೆ ಮೇಲ್ವಿಚಾರಣೆ ಮತ್ತು ನೀತಿ ಅನುಷ್ಠಾನಕ್ಕೆ ಆಡಳಿತ ವರ್ಗ ಹಿಂದೇಟು ಹಾಕುತ್ತಿರುವುದು ದುರದೃಷ್ಟಕರ
ರಾಜೇಂದ್ರ ಗೌಡ ಸ್ಥಳೀಯ ನಿವಾಸಿ
ಮಾರುಕಟ್ಟೆಯ ಸ್ವಚ್ಛ ಆರೋಗ್ಯಕರ ಪರಿಸರ ಕಾಳಜಿಗೆ ಸ್ಥಳೀಯ ಆಡಳಿತ ವರ್ಗ ತುರ್ತು ಗಮನಹರಿಸಲಿ
ಆರ್.ಎಚ್. ಶ್ರೀನಿವಾಸ್ ಸ್ಥಳೀಯ ನಿವಾಸಿ
ಸ್ವಚ್ಛತೆ ಕೊರತೆ ಕುರಿತು ದೂರುಗಳು ಬಂದಿದ್ದು ಈ ಬಗ್ಗೆ ಕಾರ್ಮಿಕರಿಗೆ ನೋಟಿಸ್ ನೀಡಲಾಗಿದೆ. ರಸ್ತೆ ಇಕ್ಕೆಲಗಳಲ್ಲಿ ಇರುವ ಅಂಗಡಿ ತೆರೆವುಗೊಳಿಸಿ ಪ್ರಾಂಗಣದಲ್ಲಿ ವ್ಯವಸ್ಥೆ ಕಲ್ಪಿಸಲಾಗುವುದು
ನಾಗರಾಜ್ ಪಿಡಿಒ
ರಸ್ತೆಬದಿ ವ್ಯಾಪಾರಕ್ಕೆ ಬೇಕು ಅಂಕುಶ
ಪ್ರತಿ ಸೋಮವಾರದಂದು ಸಂತೆ ಮಾರುಕಟ್ಟೆಯ ಪ್ರಾಂಗಣದ ಕಟ್ಟೆಗಳು ಖಾಲಿ ಇದ್ದರೂ ವ್ಯಾಪಾರಸ್ಥರು ರಸ್ತೆ ಬದಿಯಲ್ಲಿ ಅಂಗಡಿ ತೆರೆಯುತ್ತಾರೆ. ರಸ್ತೆಯ ಇಕ್ಕೆಲ ಹಾಗೂ ಬೀದಿ ಬದಿಯಲ್ಲಿ ವ್ಯಾಪಾರ ಮಾಡುತ್ತಾ ವಾಹನ ಸಂಚಾರಕ್ಕೆ ಅಡಚಣೆ ಮಾಡುತ್ತಿದ್ದಾರೆ. ಇದು ಅಪಘಾತ ಅವಘಡಗಳಿಗೆ ಆಹ್ವಾನ ನೀಡುತ್ತಿದೆ. ಸಂತೆಯ ದಿನ ರಸ್ತೆ ಪಕ್ಕದ ಅಂಗಡಿ ಮುಂಗಟ್ಟುಗಳನ್ನು ತೆರವುಗೊಳಿಸಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ನೀಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.