ಕುಂಸಿ: ಸಮೀಪದ ಚೋರಡಿ ಬಳಿ ಹಾದು ಹೋಗಿರುವ ಕುಮದ್ವತಿ ನದಿ ಹಿನ್ನೀರಿನ ಪ್ರದೇಶ ದೊಡ್ಡಿಮಟ್ಟಿ ಗ್ರಾಮದಲ್ಲಿ ಮೂಲಸೌಕರ್ಯ ಮರೀಚಿಕೆಯಾಗಿದೆ.

ಮೂರು ತಲೆಮಾರುಗಳಿಂದ ವಾಸಿಸುತ್ತಿರುವ ಇಲ್ಲಿನ ಜನರ ಸಮಸ್ಯೆ ಕೇಳುವವರಿಲ್ಲ. ಕುಂಸಿಯಿಂದ 3 ಕಿ.ಮೀ. ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗಿದರೆ ಅಲ್ಲಿಂದ ದೊಡ್ಡಿಮಟ್ಟಿಗೆ ಹೋಗಲು 7 ಕಿ. ಮೀ ದೂರದ ಕಲ್ಲುಮಣ್ಣಿನಿಂದ ಕೂಡಿದ ದಟ್ಟ ಕಾಡಿನ ರಸ್ತೆಯೇ ಆಸರೆ.

ಒಂದೆಡೆ ಸರಿಯಾದ ರಸ್ತೆ ಇಲ್ಲ. ಮಳೆ ಬಂದರಂತೂ ಇರುವ ರಸ್ತೆಯೇ ನದಿಯಾಗಿ ಹರಿಯುತ್ತದೆ. ಮತ್ತೊಂದೆಡೆ ಕಾಡು ಪ್ರಾಣಿಗಳ ಹಾವಳಿ. ದಶಕಗಳೇ ಕಳೆದರೂ ಅಧಿಕಾರಕ್ಕೆ ಬಂದವರು ನಮ್ಮ ಬೇಡಿಕೆ ಈಡೇರಿಸಿಲ್ಲ. ಕಾಡು ಪ್ರಾಣಿಗಳಿಂದ ಬೆಳೆ ಕೈಗೆ ಸಿಗುತ್ತಿಲ್ಲ ಎಂಬುದು ಇಲ್ಲಿನ ಗ್ರಾಮಸ್ಥರ ಅಳಲು.

‘ರಾಷ್ಟ್ರೀಯ ಹೆದ್ದಾರಿಯಿಂದ 7 ಕಿ.ಮೀ. ಸರಿಯಾದ ರಸ್ತೆ ಇಲ್ಲದೆ. ಕಾಡು ಪ್ರಾಣಿಗಳ ಹಾವಳಿ ನಡುವೆ ಜೀವ ಕೈಯಲ್ಲಿ ಹಿಡಿದು ನಡೆದುಕೊಂಡೇ ಊರು ಸೇರುವ ಸ್ಥಿತಿ ನಮ್ಮದು. ಇಂತಹ ಕಾಡಿನಲ್ಲಿ ಬದುಕಿರುವುದಾದರೂ ಏಕೆ ಎಂಬ ಪ್ರಶ್ನೆ ಕಾಡುತ್ತದೆ‘ ಎಂದು ಅಳಲು ತೋಡಿಕೊಂಡರು ಗ್ರಾಮದ ಪವನ್.

ದೊಡ್ಡಿಮಟ್ಟಿ ಊರು ಕುಂಸಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಪುಟ್ಟ ಹಳ್ಳಿ. ಈ ಊರಿನಲ್ಲಿ ಒಟ್ಟು 70 ಮನೆಗಳಿದ್ದು, 500 ಜನಸಂಖ್ಯೆ ಇದೆ. ಆದರೆ ಇದು ಕಂದಾಯ ಗ್ರಾಮವಾಗಿ ಇದುವರೆಗೂ ಘೋಷಣೆಯಾಗಿಲ್ಲ. ಮತ ಕೇಳಲು ಈ ಊರಿಗೆ ಬರುವ ರಾಜಕಾರಣಿಗಳೂ ಈ ಗ್ರಾಮವನ್ನು ಕಂದಾಯ ಗ್ರಾಮವನ್ನಾಗಿ ಮಾಡುವ ಭರವಸೆ ನೀಡುತ್ತಿದ್ದಾರೆಯೇ ವಿನಾ ಕಾರ್ಯಗತವಾಗಿಲ್ಲ. ಈ ಗ್ರಾಮದಲ್ಲಿ ವಿದ್ಯಾಭ್ಯಾಸ ಮಾಡಿಕೊಂಡಿರುವ ಯುವಕರು ಯಾರೊಬ್ಬರೂ ಸರ್ಕಾರಿ ನೌಕರಿಯಲ್ಲಿಲ್ಲ. ಇಬ್ಬರೂ ಮಾತ್ರ ಸೈನಿಕರಾಗಿದ್ದರು ಎನ್ನುತ್ತಾರೆ ಗ್ರಾಮಸ್ಥರು.

ಕುಮದ್ವತಿ ನದಿ ಈ ಊರಿನ ಹಿಂದೆಯೆ ಹಾದು ಹೋಗಿದ್ದು ನದಿ ನೀರು ಆಗಾಗ ಊರಿಗೆ ನುಗ್ಗುತ್ತದೆ. ದನಕರುಗಳು ಹಾಗೂ ಎಷ್ಟೋ ಜನರು ನದಿಯಲ್ಲಿ ಕೊಚ್ಚಿಹೋಗಿದ್ದಾರೆ. ಆದರೂ ನದಿಗೆ ತಡೆಗೋಡೆ ಮಾತ್ರ ನಿರ್ಮಿಸಿಲ್ಲ ಎಂಬುದು ಗ್ರಾಮಸ್ಥರ ಆರೋಪವಾಗಿದೆ.

ಊರಿಗೆ ಪ್ರಾಥಮಿಕ ಶಾಲೆ ಇದೆ. ಅದು 2 ಕೊಠಡಿ ಮಾತ್ರ. ಅದರಲ್ಲಿ ಒಂದು ಕೊಠಡಿ ಅಂಗನವಾಡಿಗೆ ನೀಡಿದ್ದು, ಒಂದೇ ಕೊಠಡಿಯಲ್ಲಿ ಪಾಠ ನಡೆಯುತ್ತಿದೆ. ಅದು ಕೂಡ ಧರ್ಮಸ್ಥಳದ ವೀರೇಂದ್ರ ಹೆಗ್ಗಡೆಯವರ ನೆರವಿನಿಂದ ಶಾಲೆ ನಿರ್ಮಿಸಲಾಗಿದೆ.

ರಸ್ತೆ ಸರಿಯಿರದ ಕಾರಣ ಬಂದ ಶಿಕ್ಷಕರೆಲ್ಲರೂ ನಾಲ್ಕೂ ದಿನವೂ ನಿಲ್ಲದೆ ವರ್ಗಾವಣೆ ಮಾಡಿಕೊಂಡು ಹೋಗುತ್ತಾರೆ. ಅದರಲ್ಲೂ ಮಳೆಗಾಲ ಬಂತೆಂದರೆ ಶಿಕ್ಷಕರು ಶಾಲೆಗೆ ಬರುವುದು ಕಷ್ಟಸಾಧ್ಯ. ಮಳೆಗಾದಲ್ಲಿ ಇಲ್ಲಿನ ವಿದ್ಯಾರ್ಥಿಗಳು ಬೇರೆ ಊರಿಗೆ ಹೋಗಿ ವಿದ್ಯಾಭ್ಯಾಸ ಮಾಡಬೇಕು. ಅದು ಸಾಧ್ಯವಿಲ್ಲದ ಮಾತು. ಕಾಡು ರಸ್ತೆಯಲ್ಲಿ ನದಿಯಂತೆ ಹರಿಯುವ ನೀರು ಕಡಿಮೆಯಾದ ಮೇಲೆಯೆ ವಿದ್ಯಾಭ್ಯಾಸಕ್ಕೆ ಬೇರೆ ಊರಿಗೆ ತೆರಳುವ ಪರಿಸ್ಥಿತಿ ಇಲ್ಲಿನ ಮಕ್ಕಳದ್ದು ಎಂದು ನೊಂದರು ನುಡಿದರು ಗ್ರಾಮದ ಆಂಜನೇಯ.

ಜಮೀನು ಕೊಟ್ಟ ಸರ್ಕಾರ, ಕಸಿದ ಅರಣ್ಯ ಇಲಾಖೆ: ಈ ಹಿಂದೆ ಸರ್ಕಾರ ಇಲ್ಲಿನ ಜನರಿಗೆ ಒಟ್ಟು 204 ಎಕರೆ ಜಮೀನು ಮಂಜೂರು ಮಾಡಿತ್ತು. ಆದರೆ ಸಿಕ್ಕಿದ್ದು ಮಾತ್ರ 140 ಎಕರೆ. ಇನ್ನುಳಿದ ಜಮೀನು ಅರಣ್ಯ ಇಲಾಖೆ ತನ್ನ ಸುಪರ್ದಿಗೆ ವಶಪಡಿಸಿಕೊಂಡಿತು. ಅದರಲ್ಲಿಯೂ 40 ಎಕರೆ ಜಮೀನು ಕುಮದ್ವತಿ ನದಿಯೇ ಬರುತ್ತದೆ. ಅದಕ್ಕೆ ಸರ್ಕಾರ ಬೆಳೆ ಪರಿಹಾರ ಘೋಷಿಸಿತೇ ಹೊರತು ಜಮೀನಿನ ಪರಿಹಾರ ಇನ್ನೂ ಸಿಕ್ಕಿಲ್ಲ, ಇಲ್ಲಿರುವ ಜನರಲ್ಲಿ ಕಾಲು ಭಾಗ ಮಾತ್ರ ಜಮೀನು ಮಾಡುತ್ತಿದ್ದು, ಉಳಿದ ಮುಕ್ಕಾಲು ಭಾಗ ಜನರು ಕೂಲಿಯನ್ನು ಆಶ್ರಯಿಸಿ ಬೇರೆ ಊರುಗಳಿಗೆ ಹೋಗುತ್ತಾರೆ. ಆದರೆ ಬೆಳೆ ಬೆಳೆದ ರೈತರಿಗೆ ಬೆಳೆಯನ್ನು ಸಾಗಿಸುವುದು ಸವಾಲು ಎಂದು ಹೇಳಿದರು ಆಂಜನೇಯ.

‘ಇಲ್ಲಿ ರಸ್ತೆ ಸರಿಯಿರದ ಕಾರಣ ಬೆಳೆಯನ್ನು ಖರೀದಿ ಮಾಡುವವರು ಊರಿಗೆ ವಾಹನ ಕಳಿಸದೆ ಮುಖ್ಯ ರಸ್ತೆಗೆ ನೀವೇ ಬೆಳೆಯನ್ನು ತರಬೇಕು. ನಮ್ಮ ವಾಹನ ಊರಿಗೆ ತಂದರೆ ಬೆಳೆಗೆ ಕಡಿಮೆ ಹಣ ನೀಡುತ್ತೇವೆ‘ ಎನ್ನುತ್ತಾರೆ ಎಂಬುದು ರೈತರ ಅಳಲು.

ಕರೆ ಮಾಡಿದರೂ ಆಂಬುಲೆನ್ಸ್ ಬರುವುದಿಲ್ಲ: ದೊಡ್ಡಿಮಟ್ಟಿಗೆ ಹೋಗುವ ರಸ್ತೆ ಕಲ್ಲು ಮಣ್ಣಿನ ರಸ್ತೆ. ಗುಂಡಿ ಬಿದ್ದು ಹಾಳಾಗಿರುವುದರಿಂದ ಹೆರಿಗೆ ನೋವು, ಕಾಡು ಪ್ರಾಣಿಗಳ ದಾಳಿಗೆ ಒಳಗಾಗಿ ಗಾಯಗೊಂಡ ಸಂದರ್ಭ ಸೇರಿ ತುರ್ತು ಸಂದರ್ಭದಲ್ಲಿ ಕರೆ ಮಾಡಿದರೆ ಆಂಬುಲೆನ್ಸ್ಗಳೂ ಬರುವುದಿಲ್ಲ. ಮುಖ್ಯ ರಸ್ತೆಗೆ ಕರೆತನ್ನಿ ಎನ್ನುತ್ತಾರೆ. ಊರಿನಲ್ಲಿ ವೈದ್ಯರು, ಆಂಬುಲೆನ್ಸ್ ಕಂಡಿಲ್ಲ ಎಂದು ಬೇಸರಿಸಿದರು ಪವನ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.