ಕರ್ನಾಟಕ ಅತೀ ದೊಡ್ಡ ಜಾತ್ರೆಗಳಲ್ಲಿ ಒಂದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಮೂರು ವರ್ಷಗಳಿಗೊಮ್ಮೆ ನಡೆಯುವ ಇಲ್ಲಿನ ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವದಲ್ಲಿ ಸರ್ವ ಜನಾಂಗದವರೂ ಪಾಲ್ಗೊಳ್ಳುವುದು ವಿಶೇಷ ಸಂಗತಿಯಾಗಿದೆ.

ಅಪರೂಪದ ಜನಪದೀಯ ಹಿನ್ನಲೆಯ ಧಾರ್ಮಿಕ ಆಚರಣೆಗಳೊಂದಿಗೆ ಊರಿಗೆ ಊರೇ ಸಿಂಗಾರಗೊಂಡು ಸಂಭ್ರಮಿಸುವ ಹಬ್ಬದ ವಾತಾವರಣದಲ್ಲಿ ನಡೆಯುವ ಜಾತ್ರೆ ಇದಾಗಿದೆ. ಮೂಲತಃ ಸಾಗರದವರಾಗಿದ್ದು ಪ್ರಸ್ತುತ ಬೇರೆಡೆ ನೆಲೆಸಿರುವ ಹೆಣ್ಣು ಮಕ್ಕಳು ಜಾತ್ರೆ ವೇಳೆ ತಪ್ಪದೆ ಇಲ್ಲಿಗೆ ಬಂದು ದೇವಿಗೆ ಉಡಿ ತುಂಬುವ ಶಾಸ್ತ್ರದಲ್ಲಿ ಪಾಲ್ಗೊಂಡು ತವರು ಮನೆಯ ಸತ್ಕಾರ ಸ್ವೀಕರಿಸುತ್ತಾರೆ.

ಜಾತ್ರೆಗೆ ಮುನ್ನ ಬರುವ ಶೂನ್ಯ ಮಾಸದಲ್ಲಿ ಮರ ಕಡಿಯುವ ಶಾಸ್ತ್ರದೊಂದಿಗೆ ಜಾತ್ರೆ ವಿಧಿ ವಿಧಾನಗಳು ಆರಂಭಗೊಳ್ಳುತ್ತವೆ. ಈ ಮೊದಲು ಪ್ರತಿ ಜಾತ್ರೆ ವೇಳೆ ಈ ಶಾಸ್ತ್ರದಲ್ಲಿ ಪೋತರಾಜ ಗುರುತಿಸುವ ಮರದಿಂದಲೆ ನೂತನ ದೇವಿಯ ವಿಗ್ರಹ ನಿರ್ಮಿಸಿ ಪೂಜಿಸುವ ಪದ್ದತಿ ಇತ್ತು. ಮರದ ಅಭಾವದ ಕಾರಣಕ್ಕೆ ಕೆಲವು ವರ್ಷಗಳಿಂದ ಸಿದ್ದಪಡಿಸಿರುವ ದೇವಿಯ ವಿಗ್ರಹಕ್ಕೆ ಬಣ್ಣ ಬಳಿದು ಸಿಂಗರಿಸಿ ಪೂಜಿಸುವ ಪದ್ದತಿ ಚಾಲ್ತಿಗೆ ಬಂದಿದೆ.

ಜಾತ್ರೆಯ ಒಂದು ವಾರದ ಮುನ್ನ ಅಂಕೆ ಹಾಕುವ ಶಾಸ್ತ್ರ ನಡೆಯುತ್ತದೆ. ಹೀಗೆ ಅಂಕೆ ಹಾಕಿದ ನಂತರ ಜಾತ್ರೆ ಮುಗಿಯುವವರೆಗೆ ಊರಿನಲ್ಲಿ ಯಾವುದೆ ಶುಭ ಕಾರ್ಯಗಳು ನಡೆಯುವುದಿಲ್ಲ. ಬೇರೆ ಊರಿಗೆ ತೆರಳಿದರೆ ರಾತ್ರಿಯೊಳಗೆ ಮನೆ ಸೇರಬೇಕು ಎಂಬ ಪ್ರತೀತಿ ಇದೆ.

ಜಾತ್ರೆಯ ಹಿಂದಿನ ದಿನ ರಾತ್ರಿ ಚಿಕ್ಕಮ್ಮನನ್ನು ಹೊರಡಿಸುವ ಕಾರ್ಯಕ್ರಮ ನಡೆಯುತ್ತದೆ. ಜಾತ್ರೆಯ ದಿನ ತವರು ಮನೆ ದೇವಸ್ಥಾನದಲ್ಲಿ ಬೆಳಿಗ್ಗೆ 5 ಕ್ಕೆ ದೇವಿಯ ವಿಗ್ರಹಕ್ಕೆ ದೃಷ್ಟಿ ಬೊಟ್ಟು ಇಡುವ ಮೂಲಕ ದೇವಿಯ ಪ್ರತಿಷ್ಠಾಪನೆ ನಡೆದು ಪೂಜೆ ಆರಂಭಗೊಳ್ಳುತ್ತದೆ.

ಅಂದು ರಾತ್ರಿ 10.30 ಕ್ಕೆ ಪೋತರಾಜನಿಂದ ಚಾಟಿ ಸೇವೆಯ ನಂತರ ದೇವಿಯ ವಿಗ್ರಹವನ್ನು ರಾಜಬೀದಿ ಉತ್ಸವದ ಮೂಲಕ ಗಂಡನ ಮನೆ ದೇವಸ್ಥಾನಕ್ಕೆ ಕರೆದೊಯ್ಯಲಾಗುತ್ತದೆ. ಈ ವೇಳೆ ಗಂಡನ ಮನೆಗೆ ಹೊರಡಲು ವಿಳಂಬ ಮಾಡಬಾರದು ಎಂದು ದೇವಿಯನ್ನು ನಿಂದಿಸುವ ಸಲುವಾಗಿಯೆ ಅಸಾದಿಯರು ಎಂಬ ಜನಾಂಗದ ಮಹಿಳೆಯರನ್ನು ಕರೆಸಲಾಗುತ್ತದೆ.

ಜಾತ್ರೆಯ ಎರಡನೆ ದಿನದಿಂದ ಕೊನೆಯ ದಿನದವರೆಗೂ ಗಂಡನ ಮನೆ ದೇವಾಲಯದ ಎದುರು ದೇವಿಯ ಪೂಜೆ ನಡೆಯುತ್ತದೆ. ಹರಕೆ ಹೊತ್ತವರು ವಿವಿಧ ರೀತಿಯ ಸೇವೆಗಳನ್ನು ಸಲ್ಲಿಸುತ್ತಾರೆ. ಜಾತ್ರೆಯ ನಾಲ್ಕನೆ ದಿನ ‘ಗಾವುಗುರಿ’ ಕಾರ್ಯಕ್ರಮ ನಡೆಯುತ್ತದೆ.

ಈ ಹಿಂದೆ ಕೋಣದ ಬಲಿ ನೀಡುವ ಸಂಪ್ರದಾಯವಿತ್ತು. ಆದರೆ ಈಗ ಅದಕ್ಕೆ ನಿಷೇಧ ಹೇರಿರುವುದರಿಂದ ಸಿರಿಂಜಿನಿಂದ ಕೋಣದ ರಕ್ತವನ್ನು ತೆಗೆದು ದೇವಿಯ ವಿಗ್ರಹಕ್ಕೆ ಸಿಂಪಡಿಸಲಾಗುತ್ತದೆ. ಜಾತ್ರೆಯ ಕೊನೆಯ ದಿನ ರಾಜಬೀದಿ ಉತ್ಸವದೊಂದಿಗೆ ದೇವಿಯನ್ನು ವನಕ್ಕೆ ಬಿಡುವ ಶಾಸ್ತ್ರ ನಡೆಯುತ್ತದೆ.

ಹೀಗೆ ವನಕ್ಕೆ ಬಿಡುವ ಮುನ್ನ ದೇವಿಯ ವಿಗ್ರಹವನ್ನು ಹೊತ್ತ ರಥವನ್ನು ಒಮ್ಮೆ ಊರಿಗೆ ಮುಖ ಮಾಡಿ ತಿರುಗಿಸಿ ‘ನಮ್ಮ ಕೈಲಾದ ಸೇವೆ ಮಾಡಿದ್ದೇವೆ. ಮೂರು ವರ್ಷಗಳ ನಂತರ ಮತ್ತೆ ನಿನ್ನನ್ನು ಕರೆಸಿಕೊಳ್ಳುತ್ತೇವೆ. ಅಲ್ಲಿಯವರೆಗೂ ಊರಿಗೆ ತೊಂದರೆಯಾಗದಂತೆ ನೋಡಿಕೋ’ ಎಂದು ಭಕ್ತರು ದೇವಿಯನ್ನು ಪ್ರಾರ್ಥಿಸುವ ಸಂಪ್ರದಾಯ ನಡೆಯುತ್ತದೆ.

ಉಪ್ಪಾರರು, ಚೆಲುವಾದಿ, ಗಂಗಾಮತ, ಕೆಂಚಿಗಾರ, ಚಮ್ಮಾರ, ಮಡಿವಾಳ, ಗುಡಿಗಾರ, ಚಾರೋಡಿ ಕೊಂಕಣಿ ಆಚಾರ್, ದೈವಜ್ಞ ಬ್ರಾಹ್ಮಣ, ಕುರುಬ ಹೀಗೆ ವಿವಿಧ ಸಮುದಾಯದವರು ತಮಗೆ ನಿಗದಿಪಡಿಸಿದ ಸಂಪ್ರದಾಯಗಳ ಆಚರಣೆಗಳನ್ನು ನೆರವೇರಿಸುತ್ತಾರೆ. ಹೀಗಾಗಿ ಸರ್ವರನ್ನೂ ಒಳಗೊಂಡ ಜಾತ್ರೆ ಎಂಬ ಹೆಗ್ಗಳಿಕೆ ಇಲ್ಲಿನದ್ದು.

ಜಾತ್ರೆಯ ಎರಡನೆ ದಿನದಿಂದ ಊರಿನ ಮನೆಗಳಲ್ಲಿ ಅತಿಥಿಗಳನ್ನು ಆಹ್ವಾನಿಸಿ ಔತಣಕೂಟವನ್ನು ಏರ್ಪಡಿಸಲಾಗುತ್ತದೆ. ಮಾಂಸದೂಟದ ಜೊತೆಗೆ ಸಿಹಿ ಊಟದ ವ್ಯವಸ್ಥೆಯನ್ನೂ ಮಾಡಲಾಗುತ್ತದೆ.

ವಿವಿಧ ಊರುಗಳಿಂದ ಬರುವ ಜಾತ್ರೆಯ ಮಳಿಗೆಗಳಲ್ಲಿನ ವ್ಯಾಪಾರಸ್ಥರಿಂದ ವಸ್ತುಗಳ ಖರೀದಿಯ ಭರಾಟೆ ಜೋರಾಗಿಯೆ ಇರುತ್ತದೆ. ಅಮ್ಯೂಸ್ ಮೆಂಟ್ ಪಾರ್ಕ್ ನಲ್ಲಿನ ಆಟಿಕೆಗಳಲ್ಲಿ ಮಹಿಳೆಯರು, ಮಕ್ಕಳು, ವೃದ್ಧರಾದಿಯಾಗಿ ಎಲ್ಲರೂ ಸಂಭ್ರಮದಿಂದ ಪಾಲ್ಗೊಳ್ಳುತ್ತಾರೆ. ಇಲ್ಲಿ ಜಾತಿ, ಮತ, ವಯಸ್ಸಿನ ಅಂತರಗಳಿಲ್ಲದೆ ಬದುಕಿನ ದುಃಖ, ದುಮ್ಮಾನ, ದುಗುಡಗಳನ್ನು ಮರೆತು ಎಲ್ಲರೂ ಜಾತ್ರೆಯ ಭಾಗವಾಗುವುದು ಸಹಬಾಳ್ವೆ ಸಂಕೇತವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.