ಸಾಗರ: ಇಲ್ಲಿನ ಜನ್ನತ್ ನಗರ ಬಡಾವಣೆಯಲ್ಲಿ ಭಾನುವಾರ ಬುರ್ಖಾ ಧರಿಸಿ ಬಂದಿದ್ದ ಯುವಕನಿಗೆ ಮಕ್ಕಳ ಕಳ್ಳನೆಂದು ಭಾವಿಸಿ ಥಳಿಸಿದ್ದಾರೆ.

ಬುರ್ಖಾ ಧರಿಸಿದ ವ್ಯಕ್ತಿಯ ಅಸಹಜ ನಡವಳಿಕೆ ನೋಡಿದ ಸ್ಥಳೀಯರು ಅನುಮಾನಗೊಂಡು ವಿಚಾರಿಸಿದಾಗ ಆತ ಯುವಕ ಎಂಬುದು ತಿಳಿದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಮಕ್ಕಳ ಕಳ್ಳರ ಸುದ್ದಿ ಹರಿದಾಡುತ್ತಿರುವುದನ್ನು ಗಮನಿಸಿದ್ದ ಸ್ಥಳೀಯರು ಈತ ಮಕ್ಕಳ ಕಳ್ಳನಿರಬೇಕು ಎಂದು ಭಾವಿಸಿ ಕಂಬಕ್ಕೆ ಕಟ್ಟಿ ಹೊಡೆದಿದ್ದಾರೆ.

ಪೊಲೀಸರು ಸ್ಥಳಕ್ಕೆ ಆಗಮಿಸಿ ವಿಚಾರಿಸಿದಾಗ ಈ ಯುವಕ ತನ್ನ ಪ್ರೇಯಸಿಯನ್ನು ಭೇಟಿಯಾಗಲು ಅಲ್ಲಿಗೆ ಬುರ್ಖಾ ಧರಿಸಿ ಬಂದಿದ್ದ ಎಂಬ ವಿಷಯ ಬೆಳಕಿಗೆ ಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.