‘ಅಬಕಾರಿ ಇಲಾಖೆ ಬಂದ್ ಆಗಬೇಕು’
‘ಹಳ್ಳಿಗಳಲ್ಲಿ ಅಕ್ರಮ ಮದ್ಯ ಮಾರಾಟ ಸಕ್ರಮದ ರೀತಿ ನಡೆಯುತ್ತಿದೆ. ಇಲಾಖೆ ಅಧಿಕಾರಿಗಳೇ ಮುಂದೆ ನಿಂತು ಗ್ರಾಮೀಣ ಭಾಗಕ್ಕೆ ಮದ್ಯ ಪೂರೈಕೆಗೆ ನೆರವಾಗುತ್ತಿದ್ದಾರೆ. ಬೇಲಿಯೇ ಎದ್ದು ಹೊಲ ಮೇಯುವ ಪರಿಸ್ಥಿತಿ ಇದೆ. ಅಂಗಡಿ ಹೋಟೆಲ್‌ಗಳನ್ನು ಪರಿಶೀಲನೆ ಮಾಡುತ್ತಿಲ್ಲ. ಅಬಕಾರಿ ಇಲಾಖೆಯ ಅಧಿಕಾರಿ ನೌಕರರಿಗೆ ಏನೇನೂ ಕೆಲಸ ಇಲ್ಲ. ಕೆಲಸ ಇಲ್ಲದ ಇಲಾಖೆಯನ್ನು ಬಂದ್ ಮಾಡಿಸಬೇಕು’ ಎಂದು ಅಕ್ರಮ ಮದ್ಯ ಮಾರಾಟದ ವಿರುದ್ಧ ಹೋರಾಟ ನಡೆಸುತ್ತಿರುವ ಪೂರ್ಣೇಶ್ ಕೆಳಕೆರೆ ಒತ್ತಾಯಿಸಿದರು.