ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ: ಚರಕದಿಂದ ಮಹಿಳಾ ಕೈದಿಗಳಿಗೆ ಕೈಮಗ್ಗ ಸೀರೆ ವಿತರಣೆ

Last Updated 20 ಸೆಪ್ಟೆಂಬರ್ 2020, 12:28 IST
ಅಕ್ಷರ ಗಾತ್ರ

ಶಿವಮೊಗ್ಗ: ಇಲ್ಲಿನ ಕೇಂದ್ರ ಕಾರಾಗೃಹದ ಮಹಿಳಾ ಕೈದಿಗಳಿಗೆ ಚರಕ ಮಹಿಳಾ ವಿವಿಧೋದ್ದೇಶ ಕೈಗಾರಿಕಾ ಸಂಘದಿಂದ ಶನಿವಾರ ಕೈಮಗ್ಗ ಸೀರೆಗಳ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಹೆಗ್ಗೋಡು ಚರಕ ಸಂಸ್ಥೆ ಸಂಸ್ಥಾಪಕ ಪ್ರಸನ್ನ ಮಾತನಾಡಿ, ‘ಗ್ರಾಮೀಣ ಮಹಿಳೆಯರ ಚರಕ ಸಂಸ್ಥೆಯುಸಂಕಷ್ಟದಲ್ಲಿದ್ದರೂ ಬಡವರಿಗೆ, ಬಟ್ಟೆಯ ಅವಶ್ಯಕತೆ ಇರುವವರಿಗೆ ಬಟ್ಟೆಗಳನ್ನು ಹಂಚುವ ಕೆಲಸ ಮಾಡುತ್ತಿದೆ. ಸರ್ಕಾರದ ತಪ್ಪುಗಳಿಂದಾಗಿ ಚರಕ ನಷ್ಟದಲ್ಲಿದ್ದು, ಸ್ಟಾಕ್ ಇರುವ ಬಟ್ಟೆಗಳನ್ನು ಉಚಿತವಾಗಿ ವಿತರಿಸುವ ಮೂಲಕ ಪ್ರತಿಭಟನೆ ದಾಖಲಿಸುತ್ತಿದ್ದೇವೆ’ ಎಂದರು.

ಕಾರಾಗೃಹದ ಮಹಿಳಾ ಕೈದಿಗಳಿಗೆ ನೂಲು ತಯಾರಿಸುವ ಕೆಲಸ ನೀಡಲು ಚರಕ ಸಂಸ್ಥೆ ಸಿದ್ಧವಿದೆ. ಹಾಗೆಯೇ ತಯಾರಾದ ನೂಲನ್ನು ಚರಕ ಸಂಸ್ಥೆಯೇ ಖರೀದಿಸಲಿದೆ. ಇದು ದೇಶದಲ್ಲೇ ಮೊದಲ ಪ್ರಯೋಗ. ಮಹಿಳೆಯರ ಸಬಲೀಕರಣಕ್ಕೆ ಚರಕ ಸಂಸ್ಥೆ ಜೋಡಿಸಲಿದೆ ಎಂದು ಹೇಳಿದರು.

ಚರಕದ ಕಾರ್ಯದರ್ಶಿ ಎಂ.ವಿ. ಪ್ರತಿಭಾ, ಗ್ರಾಮೀಣ ಮಹಿಳೆಯರಿಗೆ ಉದ್ಯೋಗ ನೀಡಿರುವ ಚರಕ ಸಂಸ್ಥೆ ಇಂದು ಸಂಕಷ್ಟ ಅನುಭವಿಸುತ್ತಿದೆ. ಮಹಿಳಾ ಸಶಕ್ತೀಕರಣದ ಬಗ್ಗೆ ಮಾತನಾಡುವ ಸರ್ಕಾರಗಳು ವಾಸ್ತವವಾಗಿ ಅದರ ವಿರುದ್ಧವಾಗಿ ಕೆಲಸ ಮಾಡುತ್ತಿರುವುದು ದುರಂತ. ಇಷ್ಟಾಗಿಯೂ ಚರಕದ ಮಹಿಳೆಯರು ಸ್ವಸಾಮರ್ಥ್ಯದಿಂದಲೇ ಆರ್ಥಿಕ ಸಂಕಷ್ಟದಿಂದ ಹೊರಬರಲಿದ್ದಾರೆ ಎಂದು ಹೇಳಿದರು.

ಕೇಂದ್ರ ಕಾರಾಗೃಹದ ಅಧೀಕ್ಷಕ ರಂಗನಾಥ್, ಮಹಿಳಾ ಕಾರಾಗೃಹದ ಅಧೀಕ್ಷಕಿ ಅನಿತಾ, ಚರಕ ಸಂಸ್ಥೆಯಿಂದ ಮಹಿಳಾ ಕೈದಿಗಳಿಗೆ ಉಚಿತವಾಗಿ ಬಟ್ಟೆ ವಿತರಿಸಿದ್ದನ್ನು ಶ್ಲಾಘಿಸಿದರು.ಚರಕ ಸಂಸ್ಥೆಯ ಮುಖ್ಯಸ್ಥೆ ಮಹಾಲಕ್ಷ್ಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT