ಶಿಕಾರಿಪುರ: ಅಸಮರ್ಪಕ ವಿದ್ಯುತ್ ಪೂರೈಕೆ ವಿರೋಧಿಸಿ ತಾಲ್ಲೂಕಿನ ಈಸೂರು ಮತ್ತು ಸುತ್ತಲಿನ ಗ್ರಾಮದ ರೈತರು ಮಂಗಳವಾರ ಮೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಮುಖಂಡ ಡಿ.ಎಸ್.ಈಶ್ವರಪ್ಪ ಮಾತನಾಡಿ, ತಾಲ್ಲೂಕಿನ ಹಿತ್ತಲ, ಮಾಡ್ರವಳ್ಳಿ, ಅರಷಿಣಗೆರೆ, ಈಸೂರು ಗ್ರಾಮದ ರೈತರ ಬೋರ್ವೆಲ್ಗಳಿಗೆ ಅಸಮರ್ಪಕ ವಿದ್ಯುತ್ ಪೂರೈಕೆ ಆಗುತ್ತಿದೆ. ಈಸೂರಿನಿಂದ ಅಂಜನಾಪುರವರೆಗೆ 110/11ಕೆವಿ ಸ್ಟೇಷನ್ಗೆ ವಿದ್ಯುತ್ ಮಾರ್ಗ ನಿರ್ಮಾಣಕ್ಕೆ ರೈತರು ವಿರೋಧ ವ್ಯಕ್ತಪಡಿಸಿ ನ್ಯಾಯಾಲದ ಮೊರೆ ಹೋಗಿರುವ ಕಾರಣಕ್ಕೆ ಈ ಭಾಗದ ರೈತರಿಗೆ ಉದ್ದೇಶಪೂರ್ವಕವಾಗಿ ತೊಂದರೆ ನೀಡಲಾಗುತ್ತಿದೆ ಎನ್ನುವ ಗುಮಾನಿ ರೈತರಿಗೆ ಬಂದಿದೆ.

ಬೇಸಿಗೆ ಬೆಳೆಗೆ ಬೋರ್ವೆಲ್ ನೀರು ಅಗತ್ಯವಿದ್ದು, ಸರ್ಕಾರ ಹೇಳಿರುವ ರೀತಿ ಅಥವಾ ತಾಲ್ಲೂಕಿನ ಇತರೆ ಭಾಗದಲ್ಲಿ ನೀಡುತ್ತಿರುವ ನಿಯಮಿತ ವಿದ್ಯುತ್ ರೀತಿಯಲ್ಲಿ ಪೂರೈಕೆ ಆಗುತ್ತಿಲ್ಲ. ವಾರದಲ್ಲಿ ಮೂರು ದಿನ ಸಮರ್ಪಕವಾಗಿ ವಿದ್ಯುತ್ ನೀಡಿದರೆ ಇನ್ನುಳಿದ ದಿನ ನಿಗದಿಯಂತೆ ವಿದ್ಯುತ್ ದೊರೆಯುತ್ತಿಲ್ಲ. ಹಗಲು 4 ಗಂಟೆ, ರಾತ್ರಿ 3 ಗಂಟೆ ವಿದ್ಯುತ್ ನೀಡಬೇಕು ಆದರೆ ಮೇನ್ಸಪ್ಲೆ ಇಲ್ಲ, ಲೈನ್ ಟ್ರಬಲ್ ಎನ್ನುವ ಸಬೂಬು ಹೇಳಿ ವಿದ್ಯುತ್ ಪೂರೈಕೆ ವ್ಯತ್ಯಾಸ ಆಗುತ್ತಿದೆ, ಒಮ್ಮೊಮ್ಮೆ ನಿರಂತರವಾಗಿ 5-6 ಗಂಟೆ ವಿದ್ಯುತ್ ನೀಡುತ್ತಿದ್ದು ಮೋಟರ್ಗೆ ತೊಂದರೆ ಆಗುತ್ತಿದೆ ಈ ಎಲ್ಲ ಸಮಸ್ಯೆ ಈ ಭಾಗದ ರೈತರಿಗೆ ಮಾತ್ರ ಎನ್ನುವುದು ಇಲ್ಲಿನ ವಿಶೇಷ ಅಧಿಕಾರಿಗಳು ಕೂಡಲೆ ಸಮಸ್ಯೆ ಪರಿಹಾರ ಮಾಡಬೇಕು ಇಲ್ಲವಾದರೆ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸುವುದಾಗಿ ಎಚ್ಚರಿಸಿದರು.

ರೈತ ಮುಖಂಡ ಸಂತೋಷ್, ಬಸವರಾಜ್ ರೋತೆ, ತಾ.ಪಂ. ಮಾಜಿ ಅಧ್ಯಕ್ಷ ಎ.ಪರಮೇಶ್ವರಪ್ಪ, ಬಿ.ಎಂ.ಮಂಜಪ್ಪ, ಪಿ.ಸಿ.ಸುಭಾಷ್ಚಂದ್ರ, ಹೆಚ್.ವೀರಪ್ಪ, ಬೇಗೂರು ರೇವಪ್ಪ, ತಾರಕೇಶ, ಎಂ.ಮಂಜುನಾಥ, ಕೇಶವಮೂರ್ತಿ, ರುದ್ರಪ್ಪ, ವಿ.ಲೋಕಪ್ಪ, ಕರಿಬಸಪ್ಪ ಇತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.