ಶಿವಮೊಗ್ಗ: ವಯೋ ಸಹಜ ಕಾಯಿಲೆಯಿಂದ ತೀವ್ರ ಅಸ್ವಸ್ಥಗೊಂಡಿದ್ದ ಶಿವಮೊಗ್ಗದ ತ್ಯಾವರೆಕೊಪ್ಪ ಹುಲಿ-ಸಿಂಹ ಧಾಮದ ಗಂಡು ಸಿಂಹ ಆರ್ಯ ಸೋಮವಾರ ಮೃತಪಟ್ಟಿದೆ.
ಬಹುಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಆರ್ಯನಿಗೆ ಹುಲಿ-ಸಿಂಹಧಾಮದ ವೈದ್ಯ ಡಾ.ಮುರಳಿ ಮನೋಹರ್ ನೇತೃತ್ವದಲ್ಲಿ ಕಳೆದ ಮೂರು ದಿನಗಳಿಂದ ಚಿಕಿತ್ಸೆ ನೀಡಲಾಗುತ್ತಿತ್ತು.
18.5 ವರ್ಷದ ಆರ್ಯ ಹುಲಿ-ಸಿಂಹ ಧಾಮದಲ್ಲಿರುವ ಸಿಂಹಗಳಲ್ಲಿಯೇ ಅತ್ಯಂತ ಹಿರಿಯ. 2008ರಲ್ಲಿ ಮೈಸೂರು ಮೃಗಾಲಯದಿಂದ ಆರ್ಯನನ್ನು ಶಿವಮೊಗ್ಗಕ್ಕೆ ಕರೆತರಲಾಗಿತ್ತು.
'ವಯಸ್ಸಿನ ಕಾರಣಕ್ಕೆ ಆರ್ಯ ಚಿಕಿತ್ಸೆಗೆ ನಿರೀಕ್ಷಿತ ಮಟ್ಟದಲ್ಲಿ ಸ್ಪಂದಿಸುತ್ತಿರಲಿಲ್ಲ. ಆಹಾರ ಸೇವಿಸುವುದು ನಿಲ್ಲಿಸಿತ್ತು' ಎಂದು ಹುಲಿ-ಸಿಂಹಧಾಮದ ಕಾರ್ಯನಿರ್ವಾಹಕ ನಿರ್ದೇಶಕ ಅಮರಾಕ್ಷರ "ಪ್ರಜಾವಾಣಿ'ಗೆ ಪ್ರತಿಕ್ರಿಯಿಸಿದರು.