ಗುರುವಾರ, 18 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶಿವಮೊಗ್ಗ ಪಾಲಿಕೆ: ಕವಿತಾ ಯೋಗಪ್ಪನವರ ನೂತನ ಆಯುಕ್ತೆ

-
Published 18 ಜೂನ್ 2024, 16:04 IST
Last Updated 18 ಜೂನ್ 2024, 16:04 IST
ಅಕ್ಷರ ಗಾತ್ರ

ಶಿವಮೊಗ್ಗ: ಇಲ್ಲಿನ ಮಹಾನಗರ ಪಾಲಿಕೆ ನೂತನ ಆಯುಕ್ತರಾಗಿ ಕವಿತಾ ಯೋಗಪ್ಪನವರ ಮಂಗಳವಾರ ಅಧಿಕಾರ ಸ್ವೀಕರಿಸಿದರು.

ಬಿಬಿಎಂಪಿ ಶಿವರಾಮ ಕಾರಂತ ಬಡಾವಣೆ ವಿಶೇಷ ಭೂಸ್ವಾಧೀನ ಅಧಿಕಾರಿಯಾಗಿದ್ದ ಕವಿತಾ ಯೋಗಪ್ಪನವರ ಅವರನ್ನು ಸರ್ಕಾರ ಶಿವಮೊಗ್ಗ ಪಾಲಿಕೆಗೆ ವರ್ಗಾವಣೆ ಮಾಡಿದೆ. ಹಾಲಿ ಆಯುಕ್ತರಾಗಿದ್ದ ಮಾಯಣ್ಣಗೌಡ ಅಧಿಕಾರ ಹಸ್ತಾಂತರಿಸಿದರು. ಮಾಯಣ್ಣಗೌಡ ಅವರಿಗೆ ಸರ್ಕಾರ ಯಾವುದೇ ಸ್ಥಳ ನಿಯುಕ್ತಿ ಮಾಡಿಲ್ಲ.

ಕವಿತಾ ಯೋಗಪ್ಪನವರ 2006ನೇ ಬ್ಯಾಚ್‌ನ ಕೆಎಎಸ್ ಅಧಿಕಾರಿ. ಮೂಲತಃ ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲ್ಲೂಕಿನ ಬೇಲೂರು ಗ್ರಾಮದವರು. ಸಾಹಿತಿ, ಅಂಕಣಕಾರ, ನಿವೃತ್ತ ಕೆಎಎಸ್ ಅಧಿಕಾರಿ ದಿವಂಗತ ಎಸ್.ಎಫ್.ಯೋಗಪ್ಪನವರ ಅವರ ಪುತ್ರಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT