ಶಿವಮೊಗ್ಗ: ಜಿಲ್ಲೆಯ 10 ಜನರಿಗೆ ಗುರುವಾರ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಸೋಂಕಿತರ ಸಂಖ್ಯೆ 83ಕ್ಕೇರಿದೆ.10 ಜನರಲ್ಲಿ 8 ಜನರು ಜೂನ್ 8ರಂದು ಮಹಾರಾಷ್ಟ್ರದಿಂದಬಂದಿದ್ದರು. ಉಳಿದ ಇಬ್ಬರ ಸೋಂಕಿನ ಮೂಲ ಪತ್ತೆ ಹಚ್ಚಲಾಗುತ್ತಿದೆ.

27 ವರ್ಷದ ಯುವಕ (ಪಿ-6141), 46 ವರ್ಷದ ಪುರುಷ (ಪಿ-6142), 52 ವರ್ಷದ ಪುರುಷ (ಪಿ-6143), 10 ವರ್ಷದ ಬಾಲಕ (ಪಿ-6144), 47 ವರ್ಷದ ಪುರುಷ (ಪಿ-6145), 35 ವರ್ಷದ ಮಹಿಳೆ (ಪಿ-6146), 66 ವರ್ಷದ ವೃದ್ಧ (ಪಿ-6147), 9 ವರ್ಷದ ಬಾಲಕ (ಪಿ-6148), 52 ವರ್ಷದ ಪುರುಷ (ಪಿ-6149) ಹಾಗೂ 25 ವರ್ಷದ ಯುವಕ (ಪಿ-6150)ರಲ್ಲಿ ಸೋಂಕು ಪತ್ತೆಯಾಗಿದೆ.

ಮೂರು ಭಾಗಗಳಲ್ಲಿಸೀಲ್‌ಡೌನ್:

ವಂದನಾ ಚಿತ್ರಮಂದಿರ ರಸ್ತೆ, ಭದ್ರಾವತಿ ನಗರದ ಚನ್ನಗಿರಿ ರಸ್ತೆ, ಕಲ್ಲುಗಂಗೂರು ರಾಮಕೃಷ್ಣಾಶ್ರಮಗಳನ್ನು ಸೀಲ್‌ಡೌನ್ ಮಾಡಲಾಗಿದೆ. ವಂದನಾ ಚಿತ್ರಮಂದಿರದ ಬಳಿಯ ಕ್ಯಾನ್ಸರ್ ರೋಗಿ, ಕಲ್ಲುಗಂಗೂರಿನ ಸ್ವಾಮೀಜಿ, ಭದ್ರಾವತಿಯ ಗರ್ಭಿಣಿ ಮಹಿಳೆಯಲ್ಲಿಕೊರೊನಾವೈರಸ್ ಪತ್ತೆಯಾಗಿದೆ. ಹಾಗಾಗಿ, ಮೂರು ಸ್ಥಳಗಳನ್ನು ಸೀಲ್‌ಡೌನ್ ಮಾಡಲಾಗಿದೆ.

ರಾಮಕೃಷ್ಣಾಶ್ರಮ ಮಠಕ್ಕೆ ಔಷಧ ಸಿಂಪಡಣೆ ಮಾಡಲಾಯಿತು.ಆಶ್ರಮಕ್ಕೆ ತಹಶೀಲ್ದಾರ್ ನಾಗರಾಜ್ ಭೇಟಿ ನೀಡಿ ಸ್ಯಾನಿಟೈಜೇಷನ್ ಹಾಗೂ ಇತರೆ ಕ್ರಮಗಳಕುರಿತುಪರಿಶೀಲಿಸಿದರು. ಗೇಟ್ ಬಂದ್ ಮಾಡಲಾಗಿದ್ದು, ಆಶ್ರಮಕ್ಕೆ ಬರುವ ಭಕ್ತರಿಗೆ ನಿರ್ಬಂಧ ವಿಧಿಸಲಾಗಿದೆ. ಭದ್ರಾವತಿಯ ರಂಗಪ್ಪ ವೃತ್ತದಿಂದ ಹೊಳೆಹೊನ್ನೂರು ಕ್ರಾಸ್‌ವರೆಗಿನ ರಸ್ತೆಯನ್ನು ಸೀಲ್‌ಡೌನ್ ಮಾಡಲಾಗಿದೆ. ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದ್ದು, ಪೊಲೀಸರನ್ನು ನಿಯೋಜಿಸಲಾಗಿದೆ.

ಎಲ್ಲರನ್ನೂ ಮೆಗ್ಗಾನ್ ಆಸ್ಪತ್ರೆಯ ಕೋವಿಡ್ ಚಿಕಿತ್ಸಾ ವಿಭಾಗಕ್ಕೆ ದಾಖಲಿಸಲಾಗಿದೆ. ಇದುವರೆಗೂ 31 ಜನರು ಗುಣಮುಖರಾಗಿದ್ದಾರೆ. 52 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.