ಶಿವಮೊಗ್ಗ: ‘ಸಿರಿಗೆರೆ ತರಳಬಾಳು ಬೃಹನ್ಮಠದ ಪೀಠಾಧಿಪತಿ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರಿಂದ ಬೆಳೆದವರು ಇದೀಗ ಅವರ ವಿರುದ್ಧವೇ ಮಾತನಾಡುತ್ತಿದ್ದಾರೆ. ತಾಲ್ಲೂಕಿನ 70 ಹಳ್ಳಿಗಳ ಸುಮಾರು 1 ಸಾವಿರಕ್ಕೂ ಅಧಿಕ ಭಕ್ತರು ಗುರುವಾರ ಸ್ವಾಮೀಜಿಯನ್ನು ಭೇಟಿ ಮಾಡುತ್ತಿದ್ದೇವೆ’ ಎಂದು ಶಿವಮೊಗ್ಗ ತಾಲ್ಲೂಕು ಗ್ರಾಮಾಂತರ ಶ್ರೀ ತರಳಬಾಳು ಸೇವಾ ಸಮಿತಿ ಅಧ್ಯಕ್ಷ ಎಸ್.ಎಚ್. ಷಣ್ಮುಖಪ್ಪ ಹೇಳಿದರು.