ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶಿಕಾರಿಪುರ | ಆಂಬುಲೆನ್ಸ್-ಬೈಕ್ ಡಿಕ್ಕಿ: ಮೂವರು ಯುವಕರ ಸಾವು

Published 29 ಜೂನ್ 2024, 16:12 IST
Last Updated 29 ಜೂನ್ 2024, 16:12 IST
ಅಕ್ಷರ ಗಾತ್ರ

ಶಿಕಾರಿಪುರ/ನ್ಯಾಮತಿ: ತಾಲ್ಲೂಕಿನ ತರಲಘಟ್ಟ ಗ್ರಾಮದ ಸಮೀಪ ಶುಕ್ರವಾರ ರಾತ್ರಿ ಆಂಬುಲೆನ್ಸ್ ಹಾಗೂ ಬೈಕ್ ಮಧ್ಯೆ ಡಿಕ್ಕಿ ಸಂಭವಿಸಿ ದಾವಣಗೆರೆ ಜಿಲ್ಲೆ ನ್ಯಾಮತಿ ತಾಲ್ಲೂಕಿನ ಹೊಸಜೋಗ ಗ್ರಾಮದ ಪ್ರಸನ್ನ (27), ಅಜಯ್ (22) ಹಾಗೂ ಕಾರ್ತಿಕ್ (21) ಮೃತಪಟ್ಟರು.

ಮೂವರು ಸ್ನೇಹಿತರು ಶಿಕಾರಿಪುರದಲ್ಲಿ ವಿವಾಹ ಆರತಕ್ಷತೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಊರಿಗೆ ಮರಳುತ್ತಿದ್ದರು. ಹಾವೇರಿ ಜಿಲ್ಲೆ ಮಾಸೂರು ಸರ್ಕಾರಿ ಆಸ್ಪತ್ರೆಯ ಆಂಬುಲೆನ್ಸ್ ಶಿವಮೊಗ್ಗದ ಆಸ್ಪತ್ರೆಗೆ ರೋಗಿಯನ್ನು ಬಿಟ್ಟು ಹಿಂತಿರುಗುವಾಗ ಡಿಕ್ಕಿ ಸಂಭವಿಸಿದೆ’. ಈ ಬಗ್ಗೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT