ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮರನಾಥನ ದರ್ಶನಕ್ಕೆ ತೆರಳಿದ್ದ ಶಿವಮೊಗ್ಗದ 16 ಮಹಿಳೆಯರು ಸುರಕ್ಷಿತ

ಪೆಹಲ್‌ಗಾಂವ್‌ನಿಂದ ವಾಪಸ್ ಮರಳಿದ ತಂಡ
Last Updated 9 ಜುಲೈ 2022, 9:56 IST
ಅಕ್ಷರ ಗಾತ್ರ

ಶಿವಮೊಗ್ಗ: ’ಹವಾಮಾನ ವೈಪರಿತ್ಯದ ಕಾರಣ ನಮಗೆ ಪೆಹಲ್‌ಗಾಂವ್‌ನ ಬೇಸ್‌ ಕ್ಯಾಂಪ್‌ನಿಂದ ಮುಂದೆ ಅಮರನಾಥನ ಸನ್ನಿಧಾನಕ್ಕೆ ಹೋಗಲು ಸಾಧ್ಯವಾಗಲಿಲ್ಲ. ಹೀಗಾಗಿ ವಾಪಸ್ ಮರಳುತ್ತಿದ್ದೇವೆ. ಎಲ್ಲರೂ ಸುರಕ್ಷಿತವಾಗಿದ್ದೇವೆ‘ ಎಂದು ಶಿವಮೊಗ್ಗ ಮಹಾನಗರ ಪಾಲಿಕೆ ಮಾಜಿ ಉಪಮೇಯರ್ ಸುರೇಖಾ ಮುರಳೀಧರ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಸುರೇಖಾ ಸೇರಿದಂತೆ ಶಿವಮೊಗ್ಗದ 16 ಮಂದಿ ಮಹಿಳೆಯರ ತಂಡ ಅಮರನಾಥ ಯಾತ್ರೆಗೆ ತೆರಳಿತ್ತು. ಜುಲೈ 4ರಂದು ಈ ತಂಡ ಶಿವಮೊಗ್ಗದಿಂದ ಹೊರಟಿತ್ತು. ವೈಷ್ಣೋದೇವಿ ದರ್ಶನ ಪಡೆದು ಅಲ್ಲಿಂದ ಅಮರನಾಥದತ್ತ ಹೊರಟಿದ್ದರು.

‘ಜುಲೈ 5ರಂದೇ ನಾವು ಅಮರನಾಥನ ಸನ್ನಿಧಾನಕ್ಕೆ ಹೋಗಬೇಕಿತ್ತು. ಅಲ್ಲಿ ಹವಾಮಾನ ವೈಪರೀತ್ಯವಿದ್ದ ಕಾರಣ ಜುಲೈ 9ಕ್ಕೆ ನಿಗದಿ ಮಾಡಿದ್ದರು. ನಮಗಿಂತ ಒಂದು ದಿನ ಮೊದಲು ಹೊರಟಿದ್ದ ತಂಡ ಅಲ್ಲಿ ಪ್ರಕೃತಿ ವಿಕೋಪಕ್ಕೆ ಸಿಲುಕಿ ಸಂಕಷ್ಟಕ್ಕೆ ತುತ್ತಾಯಿತು‘ ಎಂದು ಸುರೇಖಾ ತಿಳಿಸಿದರು.

’ಅಮರನಾಥದಲ್ಲಿ ದುರ್ಘಟನೆ ಸಂಭವಿಸಿದಾಗ ನಾವು ಪೆಹಲ್‌ಗಾಂವ್‌ನ ಹೆಲಿಪ್ಯಾಡ್‌ನಲ್ಲಿದ್ದೆವು. ನಮಗೆ ಜೋರಾದ ಶಬ್ಧ ಕೇಳಿಸಿತು. ಮಿಲಿಟರಿಯವರು ತಕ್ಷಣ ನಮ್ಮನ್ನು ಹೆಲಿಪ್ಯಾಡ್‌ನಿಂದ ನಾವು ಉಳಿದಿದ್ದ ಕೊಠಡಿಗೆ ಕಳುಹಿಸಿದರು‘ ಎಂದು ಸುರೇಖಾ ನೆನಪಿಸಿಕೊಂಡರು.

‘ಮೇಲೆ (ಅಮರನಾಥ) ಡೇರೆಗಳು ಸಂಪೂರ್ಣ ಹಾಳಾಗಿವೆ. ಸದ್ಯ ಅಲ್ಲಿಗೆ ಹೋಗಲು ಅವಕಾಶವಿಲ್ಲ ಎಂದು ಮಿಲಿಟರಿಯವರು ಹೇಳಿದರು. ಹೀಗಾಗಿ ಅಮರನಾಥನ ದರ್ಶನ ಮಾಡದೇ ವಾಪಸ್ ಮರಳುತ್ತಿದ್ದೇವೆ. ಈಗ ಅನಂತನಾಗ್ ದಾಟಿ ಶ್ರೀನಗರದತ್ತ ಹೊರಟಿದ್ದೇವೆ. ಸೋಮವಾರ ಶಿವಮೊಗ್ಗಕ್ಕೆ ಮರಳಲಿದ್ದೇವೆ‘ ಎಂದು ಸುರೇಖಾ ತಿಳಿಸಿದರು.

ಇವನ್ನೂ ಓದಿ..

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT