ಮುಳ್ಳುಸಜ್ಜೆಯಿಂದ ಇಳುವರಿ ಕುಂಠಿತ
ಮೆಕ್ಕೆಜೋಳ ಬೆಳೆಯಲ್ಲಿ ಮುಳ್ಳು ಸಜ್ಜೆ (ಕಳೆ) ಹೆಚ್ಚಾಗಿ ಬೆಳೆಯುತ್ತಿದೆ. ಈ ಹುಲ್ಲು ವರ್ಷದಿಂದ ವರ್ಷಕ್ಕೆ ಹೊಲದಲ್ಲಿ ರೈತ ಬೆಳೆದ ಬೆಳೆಗಿಂತ ಹುಲುಸಾಗಿ ಬೆಳೆಯುತ್ತಾ ಹೋಗುತ್ತದೆ. ಇದಕ್ಕೆ ಇದುವರೆಗೂ ಯಾವುದೇ ಕಳೆನಾಶಕ ಇಲ್ಲ. ಲಾಡಿಸ್‌ನಿಂದಲೂ (ಕಳೆನಾಶಕ) ಇದರ ನಿಯಂತ್ರಣ ಸಾಧ್ಯವಾಗುತ್ತಿಲ್ಲ. ಆರಂಭದಲ್ಲಿಯೇ ಹೂಟಿ ನಡೆಸಿಯೂ ಇದನ್ನು ಹತೋಟಿಗೆ ತರಬಹುದು. ಆದರೆ ಸಂಪೂರ್ಣ ನಾಶ ಪಡಿಸಲು ರೈತರು ಪರ್ಯಾಯ ಬೆಳೆಗೆ ಒತ್ತು ನೀಡಬೇಕು ಎಂದು ಎಂ.ಕಿರಣ್ ಕುಮಾರ್ ಸಲಹೆ ನೀಡಿದರು.