ಶಿವಮೊಗ್ಗ: ನಗರ ಪಾಲಿಕೆ ವ್ಯಾಪ್ತಿಯ ಎಲ್ಲ ವಾರ್ಡ್‌ಗಳಲ್ಲೂತಿಂಗಳ ಅಂತ್ಯದ ಒಳಗಾಗಿವಿಂಗಡಿಸಿದ ಕಸಸಂಗ್ರಹಿಸುವವ್ಯವಸ್ಥೆ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿಸಚಿವ ಕೆ.ಎಸ್.ಈಶ್ವರಪ್ಪ ಸೂಚಿಸಿದರು.

ಪ್ರವಾಸಿ ಮಂದಿರದಲ್ಲಿ ಗುರುವಾರ ನಡೆದವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

11 ವಾರ್ಡ್‍ಗಳಲ್ಲಿ ಈಗಾಗಲೇ ಸಂಗ್ರಹಿಸಲಾಗುತ್ತಿದೆ.ಉಳಿದ 24ವಾರ್ಡ್‍ಗಳಲ್ಲಿ ವಿಂಗಡಿಸಿದ ಕಸ ಸಂಗ್ರಹಿಸಬೇಕಿದೆ. ವಾರ್ಡ್‍ಗಳಲ್ಲೇ ಆಧುನಿಕಕಸ ವಿಲೇವಾರಿ ಘಟಕ ಸ್ಥಾಪಿಸಲೂಕ್ರಮ ಕೈಗೊಳ್ಳಲಾಗುವುದು ಎಂದರು.

ಘನತ್ಯಾಜ್ಯ ಘಟಕಕ್ಕೆ ಭೂಮಿ:ಜಿಲ್ಲೆಯ250 ಗ್ರಾಮ ಪಂಚಾಯಿತಿಗಳಲ್ಲಿ ಘನತ್ಯಾಜ್ಯ ಘಟಕ ಸ್ಥಾಪಿಸಲುತಕ್ಷಣ ಭೂಮಿ ಗುರುತಿಸಬೇಕು.ಜಿಲ್ಲೆಯ ನಾಲ್ಕು ಗ್ರಾಮ ಪಂಚಾಯತಿಗಳಲ್ಲಿಘನತ್ಯಾಜ್ಯ ವಿಲೇವಾರಿ ಘಟಕಗಳಿವೆ.17 ಪಂಚಾಯತಿಗಳು ಜಮೀನು ಗುರುತಿಸಿ ಅನುಮತಿಗಾಗಿ ಪ್ರಸ್ತಾವ ಸಲ್ಲಿಸಿವೆ. 250ಗ್ರಾಮ ಪಂಚಾಯತಿಗಳಲ್ಲಿ ತಿಂಗಳ ಅಂತ್ಯದ ಒಳಗಾಗಿ ಜಮೀನು ಗುರುತಿಸಬೇಕು. ಘಟಕ ಸ್ಥಾಪನೆಯ ಪ್ರಸ್ತಾವ ಸಲ್ಲಿಸಬೇಕು ಎಂದು ತಾಕೀತು ಮಾಡಿದರು.

ಘನ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಗೆ 2ರಿಂದ 5ಎಕರೆ ಜಮೀನು ಅಗತ್ಯವಿದೆ. ಘಟಕ ಸ್ಥಾಪಿಸಲು ಕೇಂದ್ರ ಸರ್ಕಾರಪ್ರತಿ ಪಂಚಾಯಿತಿಗೂ₨20 ಲಕ್ಷ ಅನುದಾನನೀಡುತ್ತಿದೆ.ಅಗತ್ಯ ಜಮೀನು ಲಭ್ಯವಿಲ್ಲದಿದ್ದರೆಮೂರು ನಾಲ್ಕು ಗ್ರಾಮ ಪಂಚಾಯತಿಗಳು ಸೇರಿ ಕ್ಲಸ್ಟರ್ ಮಾದರಿ ಘಟಕ ಸ್ಥಾಪಿಸಬಹುದು.ಭೂಮಿ ಒದಗಿಸಲು ತಹಶೀಲ್ದಾರ್ಸಹಕರಿಸಬೇಕು ಎಂದರು.

ಸೋಲಾರ್ ದೀಪಗಳ ಅಳವಡಿಕೆ: ಎಲ್ಲಾ ಗ್ರಾಮ ಪಂಚಾಯಿತಿ ಕಟ್ಟಡಗಳ ಮೇಲೆಸೋಲಾರ್ ದೀಪ ಅಳವಡಿಸಲುಸೂಚನೆ ನೀಡಲಾಗಿದೆ. ಅಂದಾಜು ಪಟ್ಟಿ ಸಲ್ಲಿಸಬೇಕು ಎಂದು ಸೂಚಿಸಿದರು.

ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ 63 ಶಾಲೆಗಳ ದುರಸ್ತಿಗೆ ಅನುದಾನ ಬಿಡುಗಡೆಯಾಗಿದೆ.ಒಂದು ವಾರದ ಒಳಗೆಕಾಮಗಾರಿ ಆರಂಭಿಸಬೇಕು ಎಂದುಸೂಚಿಸಿದರು.

ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಜಿಲ್ಲಾ ಪಂಚಾಯಿತಿ ಸಿಇಒ ಎಂ.ಎಲ್.ವೈಶಾಲಿ, ನಗರ ಪಾಲಿಕೆ ಆಯುಕ್ತ ಚಿದಾನಂದ ವಟಾರೆ, ನಗರ ಯೋಜನಾ ನಿರ್ದೇಶಕ ಡಾ.ನಾಗೇಂದ್ರ ಹೊನ್ನಳ್ಳಿ, ಉಪ ಮೇಯರ್ ಎಸ್.ಎನ್.ಚನ್ನಬಸಪ್ಪ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.