ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ಯಾಂಕರ್‌ ಟೈರ್ ಸ್ಫೋಟ: ತಪ್ಪಿದ ಅನಾಹುತ

Last Updated 27 ಏಪ್ರಿಲ್ 2022, 4:50 IST
ಅಕ್ಷರ ಗಾತ್ರ

ಹೊಸನಗರ: ಪಟ್ಟಣದ ಮಾವಿನಕೊಪ್ಪ ಬಳಿ ಸೋಮವಾರ ಮಂಗಳೂರಿನಿಂದ ಶಿವಮೊಗ್ಗ ಮಾರ್ಗವಾಗಿ ಬಳ್ಳಾರಿಗೆ ಹೊರಟಿದ್ದ ಡೀಸೆಲ್ ಟ್ಯಾಂಕರ್‌ನ ಟೈರ್ ಸ್ಫೋಟಗೊಂಡು, ಡಿವೈಡರ್ ಗುದ್ದಿದ್ದು ಭಾರಿ ಅನಾಹುತ ತಪ್ಪಿದೆ.

ಮುಂಜಾನೆ 4.30ರ ಸಮಯದಲ್ಲಿ ಶಿವಮೊಗ್ಗ ಮಾರ್ಗವಾಗಿ ಚಲಿಸುತ್ತಿದ್ದ ಟ್ಯಾಂಕರ್ ಟೈರ್ ಸ್ಫೋಟಗೊಂಡು ಚಾಲಕನ ನಿಯಂತ್ರಣ ತಪ್ಪಿದ ರಸ್ತೆ ವಿಭಜಕಕ್ಕೆ ಗುದ್ದಿದೆ. ಲಾರಿಯ ಟೈರ್‌ಗಳು ಬೇರ್ಪಟ್ಟು ರಸ್ತೆಯ ಸಮೀಪ ಇದ್ದ ಅಂಗಡಿಯ ಬಾಗಿಲಿಗೆ ಬಡಿದಿದೆ. ಬೆಳಗಿನ ಜಾವ ಆದ ಕಾರಣ ಅಂಗಡಿ ಮುಚ್ಚಿದ್ದ ಕಾರಣ ಯಾವುದೇ ಅನಾಹುತವಾಗಿಲ್ಲ.

ಅಗ್ನಿಶಾಮಕ ದಳ ಸಿಬ್ಬಂದಿ ಮತ್ತು ಪೊಲೀಸರು ವಾಹನ ತೆರವುಗೊಳಿಸುವ ಕಾರ್ಯ ಕೈಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT