ಸಂವಿಧಾನದ ಅನ್ವಯ ಅಸ್ಪೃಶ್ಯತೆ ರದ್ದು ಮಾಡಲಾಗಿದೆ. ವರದಕ್ಷಿಣೆ ಪಡೆಯುವುದು ಅಪರಾಧ. ಅದನ್ನು ಗೌರವಿಸುತ್ತಿದ್ದೇವೆಯೇ? ಹಾಗಿದ್ದ ಮೇಲೆ ನಮ್ಮ ಸಮಾಜ ಹೇಗೆ ಸಂತೋಷವಾಗಿರುತ್ತದೆ. ಸಮಾಜ ಆರೋಗ್ಯಕರವಾಗಿರಬೇಕು ಅಂದರೆ ಕಾನೂನನ್ನು ಗೌರವಿಸಬೇಕು.
ಎಚ್.ಬಿಲ್ಲಪ್ಪ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ
ಕೂಡು ಕುಟುಂಬದ ನಿರ್ಮೂಲನೆಯ ಪರಿಣಾಮ ಮದುವೆ ಇಂದು ಒಪ್ಪಂದ ಆಗಿದೆ. ಅಹಂಭಾವ ಮಾಧ್ಯಮಗಳ ದುರ್ಬಳಕೆ ಪ್ರತಿಷ್ಠೆಯಿಂದಾಗಿ ಕೌಟುಂಬಿಕ ಸಂಬಂಧಗಳು ದುರ್ಬಲಗೊಳ್ಳುತ್ತಿವೆ.ತಾಳ್ಮೆ ತ್ಯಾಗ ಮನೋಭಾವ. ಹೊಂದಾಣಿಕೆಯಿಂದ ಸಂಸಾರ ಚೆನ್ನಾಗಿರುತ್ತವೆ. ಮಕ್ಕಳ ಬೆಳವಣಿಗೆ ಚೆನ್ನಾಗಿರುತ್ತದೆ
ಕೆ.ಬಿ.ವಾಣಿಗೌಡ. ದೇವನಹಳ್ಳಿ ಸಹಾಯಕ ಸರ್ಕಾರಿ ಅಭಿಯೋಜಕಿ
ನಮ್ಮ ವಿವೇಚನೆಯನ್ನು ಹೊರಗುತ್ತಿಗೆ ಕೊಟ್ಟ ಪರಿಣಾಮ ಇಂದು ವ್ಯಾಜ್ಯಗಳು ಹೆಚ್ಚಳಗೊಂಡಿವೆ. ಸಮಾಜ ನ್ಯಾಯಾಲಯ ಬೇರೆ ಅಲ್ಲ. ನ್ಯಾಯಾಧೀಶರು ವಕೀಲರು ಬೇರೆ ಗ್ರಹದಿಂದ ಬಂದವರು ಅಲ್ಲ. ಸಮಾಜದ ಪ್ರತಿಫಲವೇ ನ್ಯಾಯಾಲಯ. ವಿಳಂಬಕ್ಕೆ ನ್ಯಾಯಾಲಯವನ್ನು ದೂಷಣೆ ಮಾಡುವುದು ಸಲ್ಲ