ಶನಿವಾರ, ಅಕ್ಟೋಬರ್ 24, 2020
28 °C

ಚಿಕಿತ್ಸೆಗಾಗಿ ಚಾರ್ಮಾಡಿ ಘಾಟ್‌ ಮುೂಲಕ ಪಯಣ: 3 ತಾಸಿನಲ್ಲಿ ಮಂಗಳೂರು ತಲುಪಿದ ಮಗು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಹೃದಯ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದ ಎರಡು ವರ್ಷದ ಮಗುವನ್ನು ಚಿಕ್ಕಮಗಳೂರು, ಚಾರ್ಮಾಡಿ ಘಾಟ್ ಮೂಲಕ ಮಂಗಳೂರಿಗೆ ಮೂರು ತಾಸುಗಳ ಅವಧಿಯಲ್ಲಿ ತಲುಪಿಸಲಾಗಿದೆ.

ಶಿಕಾರಿಪುರ ತಾಲ್ಲೂಕು ಶಿರಾಳಕೊಪ್ಪದ ದಾಸರ ಕಾಲೊನಿಯ ದಾದಾಪೀರ್ ಅವರ ಎರಡು ವರ್ಷದ ಮಗುವಿಗೆ ಮಂಗಳೂರಿನಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಬೇಕಿತ್ತು. ಶಿರಾಳಕೊಪ್ಪದ ಜಾಫರ್ ಯಾಬ್ ಅವರ ನೇತೃತ್ವದಲ್ಲಿ ಯುವಕರು ದೇಣಿಗೆ ಎತ್ತಿ ಚಿಕಿತ್ಸೆಗೆ ನೆರವು ನೀಡಿದ್ದರು. ಚಿಕ್ಕಮಗಳೂರಿನ ಟ್ರಸ್ಟ್‌ವೊಂದು ಆಂಬುಲೆನ್ಸ್‌ ವ್ಯವಸ್ಥೆ ಮಾಡಿತ್ತು. 

‘ಶಿವಮೊಗ್ಗದಿಂದ ಬುಧವಾರ ಬೆಳಿಗ್ಗೆ 10.30ಕ್ಕೆ ಹೊರಟ ವಾಹನಕ್ಕೆ ಕಡೂರು ಮಾರ್ಗದಲ್ಲಿ ವಾಹನದಟ್ಟಣೆ ಹೆಚ್ಚಾದ ಕಾರಣ ಚಿಕ್ಕಮಗಳೂರು ಪೊಲೀಸರ ಸಹಾಯ ಪಡೆದು ಅಲ್ಲಿಂದ ಜೀರೊ ಟ್ರಾಫಿಕ್‌ನಲ್ಲಿ ಮಧ್ಯಾಹ್ನ ಮಂಗಳೂರು ತಲುಪಿದೆವು’ ಎಂದು ಜಾಫರ್ ಮಾಹಿತಿ ನೀಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.