ಶಿವಮೊಗ್ಗದ ಜಿಲ್ಲಾಧಿಕಾರಿ ಕಚೇರಿ ಎದುರು ಮನರೇಗಾ ಪರ ಶನಿವಾರ ಜಿಲ್ಲಾ ಕಾಂಗ್ರೆಸ್ ವತಿಯಿಂದ ನಡೆದ ಪ್ರತಿಭಟನೆಯ ನೋಟ
ವಿಬಿ–ಜಿ–ರಾಮ್‌ಜಿಯ ಅನುದಾನದಲ್ಲಿ ಶೇ 40ರಷ್ಟು ಹಣ ರಾಜ್ಯವೇ ಭರಿಸಬೇಕಾಗಿದೆ. ಯೋಜನೆಯಲ್ಲಿ ರಾಜ್ಯಕ್ಕೆ ಯಾವುದೇ ಅಧಿಕಾರ ಇಲ್ಲದಿದ್ದರೂ ವೃಥಾ ಆರ್ಥಿಕ ಹೊರೆ ಹಾಕಲಾಗಿದೆ. ಹೊಸ ಯೋಜನೆಯ ಬಾಧಕಗಳ ಬಗ್ಗೆ ಕಾರ್ಯಕರ್ತರು ಗ್ರಾಮೀಣರಿಗೆ ಮನದಟ್ಟು ಮಾಡಿ
ಆರ್.ಪ್ರಸನ್ನಕುಮಾರ್ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ
ಮನರೇಗಾದಲ್ಲಿ ಎಸ್‌ಟಿ ಒಬಿಸಿ ಪರಿಶಿಷ್ಟ ಜಾತಿ ಸಮುದಾಯಗಳಿಗೆ ಇದ್ದ ಕಡ್ಡಾಯ ಪ್ರಾತಿನಿಧ್ಯದ ಅಧಿಕಾರವನ್ನು ನೂತನ ಕಾಯ್ದೆಯಲ್ಲಿ ರದ್ದುಗೊಳಿಸಲಾಗಿದೆ. ಕೂಡಲೇ ಹೊಸ ಯೋಜನೆ ರದ್ದು ಮಾಡಿ ಮನರೇಗಾ ಮರುಜಾರಿಗೊಳಿಸಿ.
ಕೆ.ಚೇತನ್ ರಾಜ್ಯ ಜವಳಿ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ
ಬಿಜೆಪಿ ಕಾರ್ಯಕರ್ತರು ನಿತ್ಯ ದೇವರ ಪೂಜೆ ತಡವಾದರೂ ಪರವಾಗಿಲ್ಲ. ವಿಬಿ–ಜಿ–ರಾಮ್‌ಜಿ ಯೋಜನೆಯ ಸೌಲಭ್ಯಗಳ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವ ಸಂಕಲ್ಪ ಮಾಡಬೇಕು. ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ಪ್ರತ್ಯೇಕ ಗ್ರಾಮೀಣ ಬಜೆಟ್ ಮಂಡನೆಯಾಗಲಿದೆ.
ಬಿ.ವೈ.ರಾಘವೇಂದ್ರ ಶಿವಮೊಗ್ಗ ಸಂಸದ
ವಿಬಿ–ಜಿ–ರಾಮ್‌ಜಿ ವಿಚಾರದಲ್ಲಿ ಕಾಂಗ್ರೆಸ್‌ನವರು ಸತ್ಯವನ್ನು ಮರೆಮಾಚಿ ಜನರಿಗೆ ನಿರಂತರ ಸುಳ್ಳು ಹೇಳುತ್ತಾ ಸುಳ್ಳನ್ನೇ ಸತ್ಯವಾಗಿಸುವ ಪ್ರಯತ್ನ ಮಾಡುತ್ತಿದ್ದಾರೆ. ನಮ್ಮ ಕಾರ್ಯಕರ್ತರು ಈ ಯೋಜನೆಯ ಸತ್ಯದರ್ಶನವನ್ನು ಜನರಿಗೆ ಮಾಡಿಸಬೇಕಾಗಿದೆ.