ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ತಾಂತ್ರಿಕ ಸೌಲಭ್ಯ ಕಲ್ಪಿಸಲು ಗ್ರಾಮ ಲೆಕ್ಕಿಗರ ಆಗ್ರಹ

Published : 26 ಸೆಪ್ಟೆಂಬರ್ 2024, 20:08 IST
Last Updated : 26 ಸೆಪ್ಟೆಂಬರ್ 2024, 20:08 IST
ಫಾಲೋ ಮಾಡಿ
Comments

ತೀರ್ಥಹಳ್ಳಿ: ಕಂದಾಯ ಇಲಾಖೆಯಿಂದ ಅಭಿವೃದ್ಧಿಪಡಿಸಿರುವ ಹಲವಾರು ತಂತ್ರಾಶವನ್ನು ಬಳಕೆ ಮಾಡಲು ಸರ್ಕಾರ ತಾಂತ್ರಿಕ ಸೌಲಭ್ಯ ನೀಡಿಲ್ಲ. ಹುದ್ದೆಗೆ ಅಗತ್ಯ ಮೂಲಸೌಕರ್ಯ ಸೇರಿ ವಿವಿಧ ಭೇಡಿಕೆ ಈಡೇರಿಸಬೇಕು ಎಂದು ಆಗ್ರಹಿಸಿ ತಾಲ್ಲೂಕು ಕಚೇರಿ ಮುಂಭಾಗ ಗ್ರಾಮ ಆಡಳಿತ ಅಧಿಕಾರಿಗಳು ಗುರುವಾರ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸಿದರು.

ಅರಳೀಮರ, ಅಂಗನವಾಡಿ, ರಸ್ತೆ, ಮರದ ನೆರಳಿನಲ್ಲಿ ಕರ್ತವ್ಯ ನಿರ್ವಹಿಸಬೇಕಿದೆ. ಸುಸಜ್ಜಿತ ಕಚೇರಿ, ಉತ್ತಮ ಗುಣಮಟ್ಟದ ಟೇಬಲ್‌, ಅಲ್ಮೆರಾ, ಲ್ಯಾಪ್‌ ಟಾಪ್‌, ಪ್ರಿಂಟರ್‌, ಸ್ಕ್ಯಾನರ್‌ ಸೌಲಭ್ಯ ಕಲ್ಪಿಸಬೇಕು ಎಂದು ತಹಶೀಲ್ದಾರ್‌ ಜಿ.ಬಿ.ಜಕ್ಕನಗೌಡ ಅವರಿಗೆ ಮನವಿ ಸ್ವೀಕರಿಸಿದರು.

ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ಅಧ್ಯಕ್ಷ ಸುಧಾಕರ ಎಸ್‌.ಎಸ್.‌, ಪ್ರಧಾನ ಕಾಯದರ್ಶಿ ಬಿ.ಲೋಕೇಶ್‌, ಖಜಾಂಚಿ ವರ್ಷಿಣಿ ಕೆ., ಉಪಾಧ್ಯಕ್ಷೆ ಆಶಾ ಕೆ.ಸಿ., ಕಂದಾಯ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಸುಧೀರ್‌ ಬಿ.ವಿ., ಕಾರ್ಯದರ್ಶಿ ಸಂದೀಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT