ತುಮರಿ: ಸಾಗರ ತಾಲ್ಲೂಕಿನ ಹೊಳೆಬಾಗಿಲಿನಲ್ಲಿ ನಿರ್ಮಾಣ ಹಂತದಲ್ಲಿರುವ ಸಿಗಂದೂರು ಸೇತುವೆ ಕಾಮಗಾರಿ ವೇಳೆ ಮಂಗಳವಾರ ಆಕಸ್ಮಿಕವಾಗಿ ಕ್ರೈನ್ ಕ್ಲಾಂಪ್ ಕಳಚಿ ಬಿದ್ದು ಓರ್ವ ಕಾರ್ಮಿಕ ಮೃತಪಟ್ಟಿದ್ದಾರೆ.

ಅಸ್ಸಾಂನ ಗುವಾಹಟಿ ನಿವಾಸಿ ಖಾಸಿಮ್ ಆಲಿ (31) ಮೃತರು.

ಸೇತುವೆ ಕಾಮಗಾರಿ ಕೆಲಸ ಮಾಡುವ ವೇಳೆ ಗಾಳಿಯ ರಭಸಕ್ಕೆ ಕ್ರೈನ್ ಕ್ಲಾಂಪ್ ಕಳಚಿ ಕಾರ್ಮಿಕನ ತಲೆಯ ಮೇಲೆ ಬಿದ್ದು ತಲೆಗೆ ಗಂಭೀರವಾಗಿ ಗಾಯವಾಗಿತ್ತು. ಸಾಗರ ಉಪ ವಿಭಾಗೀಯ ಆಸ್ಪತ್ರೆಗೆ ದಾಖಲಿಸುವ ವೇಳೆ ಕಾರ್ಮಿಕ ಮೃತಪಟ್ಟಿರುವುದು ದೃಢವಾಗಿದೆ.

ಮೃತದೇಹವನ್ನು ಬುಧವಾರ ಬೆಳಿಗ್ಗೆ ಬೆಂಗಳೂರು ವಿಮಾನದ ಮೂಲಕ ಅಸ್ಸಾಂ ರಾಜ್ಯದ ಗುವಾಹಟಿಗೆ ಕಳುಹಿಸಲಾಗಿದೆ ಎಂದು ಸೇತುವೆ ಉಸ್ತುವಾರಿ ಎಂಜಿನಿಯರ್ ಪೀರ್ಪಾಷ ‘ಪ್ರಜಾವಾಣಿ’ಗೆ ತಿಳಿಸಿದರು.

ಸಾಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.