ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವ ಪರಿಸರ ದಿನ: ಬೀದಿ ನಾಟಕದೊಂದಿಗೆ ಪರಿಸರ ಕಾಳಜಿ

Published 6 ಜೂನ್ 2023, 12:30 IST
Last Updated 6 ಜೂನ್ 2023, 12:30 IST
ಅಕ್ಷರ ಗಾತ್ರ

ಶಿವಮೊಗ್ಗ: ಭದ್ರಾವತಿ ತಾಲ್ಲೂಕಿನ ಡಿಬಿ ಹಳ್ಳಿಯ ಪದ್ಮ ದೀಪ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿಗಳು ಸೋಮವಾರ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಮಾರ ಶೆಟ್ಟಿಹಳ್ಳಿ ವೃತ್ತದಲ್ಲಿ ‘ಹಸಿರು ಉಸಿರು ಉಳಿಸಿ’ ಎಂಬ ಬೀದಿ ನಾಟಕದ ಮೂಲಕ ಜನರಲ್ಲಿ ಪರಿಸರ ಜಾಗೃತಿ ಮೂಡಿಸಿದರು.

ಪ್ರಕೃತಿ ಉಳಿಸುವುದು ಮಾನವನ ಆದ್ಯ ಕರ್ತವ್ಯ. ಭವಿಷ್ಯದಲ್ಲಿ ಕಾಡು ಉಳಿದರೆ ಮಾತ್ರ ನಾಡಿನಲ್ಲಿ ಉತ್ತಮ ಜೀವನ ನಡೆಸಲು ಸಾಧ್ಯ ಎಂದು ಪದ್ಮ ದೀಪ ಪಬ್ಲಿಕ್ ಸ್ಕೂಲ್ ಅದ್ಯಕ್ಷ ಕಿರಣ್ ತಿಳಿಸಿದರು.

ಅರಣ್ಯ ನಾಶದಿಂದ ವನ್ಯಜೀವಿ ಹಾಗೂ ಮನುಷ್ಯರ ನಡುವೆ ಸಂಘರ್ಷ ಹೆಚ್ಚುತ್ತಿದೆ. ಸಮಾಜ ಎದುರಿಸುತ್ತಿರುವ ಸವಾಲಿನ ಕುರಿತಾದ ಸಂದೇಶ ನಾಟಕದಲ್ಲಿ ಅಡಕವಾಗಿದೆ ಎಂದು ನಾಟಕ ನಿರ್ದೇಶಕ ಆರ್. ಸಜಿ ಹೇಳಿದರು.

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ತಮ್ಮ ಸ್ವಂತ ಹಣದಲ್ಲಿ ಗ್ರಾಮಸ್ಥರಿಗೆ ಗಿಡಗಳನ್ನು ವಿತರಿಸಿದರು‌. ಪ್ರಾಂಶುಪಾಲ ತಂಗರಾಜು, ಶಾಲಾ ಸಲಹಾ ಸಮಿತಿ ಮುಖ್ಯಸ್ಥ ಡಾ.ಕೆ. ವೆಂಕಟೇಶ್ವರ, ನಾಟಕದ ಸಂಗೀತ ಸಂಯೋಜಕಿ ಎಸ್.ಆರ್. ಸಂಗೀತ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT