ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಡಿಯೂರಪ್ಪ ಕುಟುಂಬಕ್ಕೆ ರಾಜ್ಯದ ಚುಕ್ಕಾಣಿ ಮತ್ತೆ ಸಿಗಲಿ: ಶ್ರೀಶೈಲ ಸ್ವಾಮೀಜಿ

Last Updated 24 ಸೆಪ್ಟೆಂಬರ್ 2021, 6:39 IST
ಅಕ್ಷರ ಗಾತ್ರ

ಶಿರಾಳಕೊಪ್ಪ:ಧರ್ಮ ನಿಷ್ಠರಾದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಕುಟುಂಬಕ್ಕೆ ರಾಜ್ಯದ ಚುಕ್ಕಾಣಿ ಮತ್ತೆ ಲಭಿಸಬೇಕು ಎನ್ನುವುದು ತಮ್ಮ ಹೆಬ್ಬಯಕೆ ಎಂದು ಶ್ರೀಶೈಲ ಪೀಠದ ಚನ್ನಸಿದ್ಧರಾಮ ಪಂಡಿತಾರಾಧ್ಯ ಸ್ವಾಮೀಜಿ ಹೇಳಿದರು.

ಪಟ್ಟಣದ ಎಸ್‌ಜೆಪಿ ಗುರುಕುಲ ಟ್ರಸ್ಟ್‌ನಲ್ಲಿ ಗುರುವಾರ ಇಂಗ್ಲಿಷ್‌ ಮಾಧ್ಯಮ ಶಾಲೆ, ಸಮುದಾಯ ಭವನದ ಶಂಕುಸ್ಥಾಪನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಮುದಾಯ ಭವನ ಹಾಗೂ ವಸತಿ ಗೃಹಗಳ ನಿರ್ಮಾಣಕ್ಕೆ ಯಡಿಯೂರಪ್ಪ ಅವರು ಮುಖ್ಯಮುಂತ್ರಿ ಗದ್ದುಗೆಯಿಂದ ಇಳಿಯುವ ಎರಡು ದಿನ ಮುನ್ನ ₹ 5 ಕೋಟಿ ಅನುದಾನ ಬಿಡುಗಡೆ ಮಾಡಲು ಆದೇಶಿಸಿದ್ದರು ಎಂದರು.

ಸಂಸದ ಬಿ.ವೈ. ರಾಘವೇಂದ್ರ, ‘ಶ್ರೀಶೈಲಕ್ಕೂ, ಶಿಕಾರಿಪುರಕ್ಕೂ 12ನೇ ಶತಮಾನದಿಂದ ಬಾಂಧವ್ಯ ಇದೆ. ಇದಕ್ಕೆ ಮೂಲ ಕಾರಣೀ‌ಭೂತರು ಶಿವಶರಣೆ ಅಕ್ಕಮಹಾದೇವಿ ಹಾಗೂ ಬಳ್ಳಿಗಾವಿಯ ಅಲ್ಲಮ ಪ್ರಭುಗಳು. ಉಡುತಡಿಯ ಕ್ಷೇತ್ರದ ಅಭಿವೃದ್ಧಿಗೆ ₹ 50 ಕೋಟಿ ವೆಚ್ಚದಲ್ಲಿ ಕಾಮಗಾರಿಗಳು ನಡೆಯುತ್ತಿವೆ ಎಂದು ಹೇಳಿದರು.

ತೊಗರ್ಸಿ ಮಳೆಮಠದ ಮಹಾಂತ ದೇಶಿಕೇಂದ್ರ ಸ್ವಾಮೀಜಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಸ್ಥೆ ಕಾರ್ಯದರ್ಶಿ ಡಾ. ಮುರುಘರಾಜ್ ಮಾಹಿತಿ ನೀಡಿದರು. ಸಹ ಕಾರ್ಯದರ್ಶಿ ನಿವೇದಿತಾ ರಾಜು ಸ್ವಾಗತಿಸಿದರು. ಉಪನ್ಯಾಸಕ ವೆಂಕಟೇಶ್ ನಿರೂಪಿಸಿದರು.

ತೊಗರ್ಸಿ ಅಭಿನವ ಮಹಾಂತ ಸ್ವಾಮೀಜಿ, ವೈ. ವೀರೇಂದ್ರ, ಕೊಳಗಿ ರೇವಣಪ್ಪ, ಸವಿತಾ ಶಿವಕುಮಾರ, ಮಂಜುಳಾ ರಾಜು, ರಾಜೇಶ್ವರಿ ವಸಂತ, ಮಕ್ಬೂಲ್ ಸಾಬ್, ಎಚ್.ಎಂ. ಗಂಗಮ್ಮ, ಡಾ. ಶಿವಕುಮಾರ್, ಪ್ರಾಂಶುಪಾಲ ರುದ್ರಯ್ಯ, ಮಠಾಧೀಶರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT