ಸಾಗರ: ಅಡಿಕೆ ಬೆಳೆಗಾರರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ರಾಜ್ಯ ಸರ್ಕಾರ ಅಡಿಕೆ ಮಂಡಳಿ ಸ್ಥಾಪಿಸಬೇಕು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಒತ್ತಾಯಿಸಿದರು.

ಅಡಿಕೆ ಪರಿಷ್ಕರಣಾ ಮತ್ತು ಮಾರಾಟ ಸಹಕಾರ ಸಂಘದ ಸಂಸ್ಥಾಪಕ ಆಡಳಿತ ಮಂಡಳಿ ಹಾಗೂ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಭಾವಚಿತ್ರ ಅನಾವರಣಗೊಳಿಸುವ ಕಾರ್ಯಕ್ರಮವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.

ಅಡಿಕೆಯ ಬೆಲೆ ಏರಿಳಿತ, ಕೊಳೆರೋಗ, ಬೇರುಹುಳ ಬಾಧೆ ಇವೇ ಮೊದಲಾದ ಸಮಸ್ಯೆಗಳಿಂದ ಬೆಳೆಗಾರರು ಬಳಲುತ್ತಿದ್ದಾರೆ. ಅಡಿಕೆಗೆ ಬೆಂಬಲ ಬೆಲೆ ನೀಡಿದರೂ, ಬೆಲೆಯ ವಿಪರೀತ ಏರಿಳಿತದಿಂದ ಬೆಳೆಗಾರರಿಗೆ ಹೆಚ್ಚಿನ ಪ್ರಯೋಜನವಾಗುತ್ತಿಲ್ಲ. ಈ ಎಲ್ಲಾ ಸಮಸ್ಯೆಗಳನ್ನು ಎದುರಿಸಲು `ಸಾವಯವ ಕೃಷಿ ಮಿಷನ್~ ಸ್ಥಾಪಿಸಿದ ಮಾದರಿಯಲ್ಲೇ ಅಡಿಕೆ ಮಂಡಳಿ ಸ್ಥಾಪಿಸುವುದು ಸೂಕ್ತ ಎಂದರು.

ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡ ಮಾತನಾಡಿ, 107 ವರ್ಷಗಳ ಇತಿಹಾಸ ಹೊಂದಿರುವ ಸಹಕಾರಿ ಕ್ಷೇತ್ರದಲ್ಲಿ ರಾಜಕಾರಣಿಗಳ ಹಸ್ತಕ್ಷೇಪ ನಿಲ್ಲಬೇಕು. ಪಕ್ಷಾತೀತ ಹಾಗೂ ಜಾತ್ಯತೀತ ಮನೋಭಾವದಿಂದ ಕೆಲಸ ಮಾಡಿದಾಗ ಮಾತ್ರ ಸಹಕಾರಿ ಕ್ಷೇತ್ರ ಬೆಳವಣಿಗೆ ಕಾಣಲು ಸಾಧ್ಯ ಎಂದು ಹೇಳಿದರು.

ಅಪೆಕ್ಸ್ ಬ್ಯಾಂಕ್ ಕಳೆದ ಒಂದು ವರ್ಷದಲ್ಲಿ ್ಙ ಹತ್ತು ಕೋಟಿ ಲಾಭ ಗಳಿಸಿದೆ. ಶಿವಮೊಗ್ಗದ ಡಿಸಿಸಿ ಬ್ಯಾಂಕ್ ವತಿಯಿಂದ ಕಳೆದ ವರ್ಷ ್ಙ 110 ಕೋಟಿ ಬೆಳೆ ಸಾಲ ವಿತರಿಸಲಾಗಿದ್ದು, ಮುಂದಿನ ವರ್ಷ ರೂ 210 ಕೋಟಿ ಸಾಲ ವಿತರಿಸುವ ಗುರಿ ಇದೆ ಎಂದು ತಿಳಿಸಿದರು.

ಪ್ರಾಂತ್ಯ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಆರ್. ಜಯಂತ್ ಮಾತನಾಡಿ, ಅಡಿಕೆ ಬೆಳೆಗಾರರು ಸಂಘಟಿತರಾಗದೇ ಇರುವುದೇ ಅವರ ಬೇಡಿಕೆಗಳು ನೆನೆಗುದಿಗೆ ಬೀಳಲು ಕಾರಣವಾಗಿದೆ. ಅಡಿಕೆಗೆ ನಿರಂತರ ಬೆಂಬಲ ಬೆಲೆ, ಅಡಿಕೆ ಮಂಡಳಿ ಸ್ಥಾಪನೆ, ಅಡಿಕೆ ಆರೋಗ್ಯಕರ ಹಾನಿಕರ ಎಂಬ ಅಂಶವನ್ನು ಕಾಯ್ದೆಯಿಂದ ತೆಗೆದು ಹಾಕುವುದು ಇವೇ ಮೊದಲಾದ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಶೀಘ್ರದಲ್ಲೇ ಅಡಿಕೆ ಬೆಳೆಗಾರರ ಬೃಹತ್ ಮಾವೇಶ ನಡೆಸಲಾಗುವುದು ಎಂದರು.

ಆಪ್ಸ್ಕೋಸ್ ಅಧ್ಯಕ್ಷ ಆರ್.ಎಸ್. ಗಿರಿ ಅಧ್ಯಕ್ಷತೆ ವಹಿಸಿದ್ದರು.

ಡಿಸಿಸಿ ಬ್ಯಾಂಕ್ ನಿರ್ದೇಶಕಿ ಸರಸ್ವತಿ ನಾಗರಾಜ್, ಹಿರಿಯ ಸಹಕಾರಿಗಳಾದ ಮಹಾಬಲೇಶ್ವರ ಕಣಗಲಘಟ್ಟ, ಈಳಿ ನಾರಾಯಣಪ್ಪ, ಚಂದ್ರಶೇಖರಪ್ಪ ಗೌಡ, ಹೊಸಬಾಳೆ ಪ್ರಭಾಕರ್, ಕೆ.ಎನ್. ಶ್ರೀಧರ್, ಹಾಲಪ್ಪಗೌಡ ಹಾಜರಿದ್ದರು.

ಗೀತಾ ಸೀತಾರಾಮ್ ಪ್ರಾರ್ಥಿಸಿದರು. ಕೆ.ಎಂ. ಸೂರ್ಯ ನಾರಾಯಣ್ ಸ್ವಾಗತಿಸಿದರು. ಟಿ.ಎಸ್. ಅಶೋಕ ವಂದಿಸಿದರು. ರಾಘವೇಂದ್ರ ಕಾರ್ಯಕ್ರಮ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.