ಶಿವಮೊಗ್ಗ: ಜಿಲ್ಲಾ ಪಂಚಾಯ್ತಿಯ ವಿವಿಧ ಸ್ಥಾಯಿ ಸಮಿತಿಗಳ ರಚನೆಯಾಗಿದ್ದು, ಅದರ ಅಧ್ಯಕ್ಷರು, ಸದಸ್ಯರ ನೇಮಕಾತಿ ಮಾಡಲಾಗಿದೆ. ಈ ಸಂಬಂಧ ಸದ್ಯದಲ್ಲೇ ಅಧಿಕೃತ ಆದೇಶ ಹೊರಬೀಳಲಿದೆ.ಇತ್ತೀಚೆಗೆ ನಡೆದ ಜಿ.ಪಂ. ಸಭೆಯಲ್ಲಿ ಸ್ಥಾಯಿ ಸಮಿತಿಗಳ ನೇಮಕದ ಸಂಪೂರ್ಣ ಅಧಿಕಾರವನ್ನು ಜಿ.ಪಂ. ಅಧ್ಯಕ್ಷರಿಗೆ ನೀಡಲಾಗಿತ್ತು. ಅದರಂತೆ ಅಧ್ಯಕ್ಷೆ ಶುಭಾ ಕೃಷ್ಣಮೂರ್ತಿ, ತಮ್ಮದೇ ಪಕ್ಷದ ಹಿರಿಯ ಸದಸ್ಯರ ಸಲಹೆ ಮೇರೆಗೆ ಸ್ಥಾಯಿ ಸಮಿತಿಗಳಿಗೆ ಅಧ್ಯಕ್ಷರು, ಸದಸ್ಯರ ನೇಮಕ ಮಾಡಿದ್ದಾರೆ.

ಇದೇ ಸಭೆಯಲ್ಲಿ ವಿರೋಧ ಪಕ್ಷದ ಸದಸ್ಯರು, ವಿರೋಧ ಪಕ್ಷದ ಸದಸ್ಯರನ್ನು ಯಾವುದಾದರೂ ಸಮಿತಿಗೆ ಅಧ್ಯಕ್ಷರನ್ನಾಗಿ ಮಾಡಿ, ರಾಜ್ಯದಲ್ಲೇ ಹೊಸ ಸಂಪ್ರದಾಯ ಆರಂಭಿಸಿ ಎಂಬ ಸಲಹೆಗಳನ್ನು ನೀಡಿದ್ದರು. ಆದರೆ, ಎಂದಿನಂತೆ ಆಡಳಿತ ಪಕ್ಷದ ಸದಸ್ಯರೇ ಸಮಿತಿಗಳ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ವಿಶೇಷ ಎಂದರೆ ಈ ಬಾರಿ ಎರಡು ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ ಮಹಿಳೆಯರನ್ನೇ ಆಯ್ಕೆ ಮಾಡಲಾಗಿದೆ.

ಸಾಮಾನ್ಯ ಸ್ಥಾಯಿ ಸಮಿತಿ: ಈ ಸಮಿತಿಗೆ ಜಿ.ಪಂ. ಉಪಾಧ್ಯಕ್ಷರೇ ಯಾವಾಗಲೂ ಅಧ್ಯಕ್ಷರಾಗಿರುತ್ತಾರೆ. ಅದರಂತೆ ಎಚ್.ಬಿ. ಗಂಗಾಧರಪ್ಪ ಅಧ್ಯಕ್ಷರಾಗಿದ್ದಾರೆ. ಮಲ್ಲಮ್ಮ, ಶಾಂತಮ್ಮ ಪ್ರೇಮ್ಕುಮಾರ್, ಟಿ.ಎಲ್. ಸುಂದರೇಶ್, ಎಚ್.ಎಲ್. ಷಡಾಕ್ಷರಿ, ಜ್ಯೋತಿ ಚಂದ್ರಮೌಳಿ ಹಾಗೂ ಲಲಿತಾ ನಾರಾಯಣ ಅವರನ್ನು ಸದಸ್ಯರನ್ನಾಗಿ ನೇಮಿಸಲಾಗಿದೆ. ಜಿ.ಪಂ. ಸಿಇಒ ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ.

ಹಣಕಾಸು ಲೆಕ್ಕ ಪರಿಶೋಧನೆ ಮತ್ತು ಯೋಜನಾ ಸ್ಥಾಯಿ ಸಮಿತಿ: ಈ ಸಮಿತಿಗೆ ಜಿ.ಪಂ. ಅಧ್ಯಕ್ಷೆ ಶುಭಾ ಕೃಷ್ಣಮೂರ್ತಿ ಅಧ್ಯಕ್ಷರಾಗಿದ್ದಾರೆ. ಸದಸ್ಯರಾಗಿ ರುದ್ರಪ್ಪ ದಾನೇರ, ಹೇಮಾ ಪಾವನಿ, ಬಿ.ಎಸ್. ಯಲ್ಲಪ್ಪ, ಕಲಗೋಡು ರತ್ನಾಕರ, ವೈ.ಡಿ. ಉಷಾ ಹಾಗೂ ಜೆ. ಸುಜಾತಾ ಅವರನ್ನು ನೇಮಿಸಲಾಗಿದೆ. ಜಿ.ಪಂ. ಉಪ ಕಾರ್ಯದರ್ಶಿ (ಅಭಿವೃದ್ಧಿ) ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ.

ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ: ಅಧ್ಯಕ್ಷರಾಗಿ ಕೆ.ಬಿ. ಅಶೋಕ್ ಅವರನ್ನು ನೇಮಿಸಲಾಗಿದೆ. ಸದಸ್ಯರಾಗಿ ಎಂ.ಬಿ. ರೇಣುಕಮ್ಮ, ಎಂ. ಪ್ರೇಮಾ, ಬಿ.ಎಸ್. ಯಲ್ಲಪ್ಪ, ಪದ್ಮಾವತಿ ಚಂದ್ರಕುಮಾರ, ಕಲಗೋಡು ರತ್ನಾಕರ ಹಾಗೂ ಎ.ಸಿ. ಸುಮಂಗಲಾ ಅವರು ನೇಮಕಗೊಂಡಿದ್ದಾರೆ. ಜಿ.ಪಂ. ಉಪ ಕಾರ್ಯದರ್ಶಿ (ಆಡಳಿತ) ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ.

ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ: ಅಧ್ಯಕ್ಷರಾಗಿ ಎಚ್. ಈಶ್ವರಪ್ಪ ನೇಮಕವಾಗಿದ್ದಾರೆ. ಸದಸ್ಯರಾಗಿ ಕೋಮಲಾ ನಿರಂಜನ, ಬಂಗಾರಿ ನಾಯ್ಕ, ಎಚ್.ಎಲ್. ಷಡಾಕ್ಷರಿ, ಈಸೂರು ಬಸವರಾಜಪ್ಪ, ಎಚ್.ಬಿ. ಪದ್ಮನಾಭ ಹಾಗೂ ರತ್ನಾಕರ ಹೊನಗೋಡು ಅವರನ್ನು ನೇಮಿಸಲಾಗಿದೆ. ಜಿ.ಪಂ. ಉಪ ಕಾರ್ಯದರ್ಶಿ (ಅಭಿವೃದ್ಧಿ) ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ.

ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ: ಅಧ್ಯಕ್ಷರಾಗಿ ಗೀತಾ ಬಿ. ಮಲ್ಲಿಕಾರ್ಜುನ ಅವರನ್ನು ನೇಮಿಸಲಾಗಿದೆ. ಗಾಯತ್ರಿ, ಎಂ. ಪ್ರೇಮಾ, ಗುರು ಕುಮಾರ ಎಸ್. ಪಾಟೀಲ, ಎಸ್. ಕುಮಾರ್, ಶ್ರುತಿ ವೆಂಕಟೇಶ್ ಹಾಗೂ ಎಸ್.ಟಿ. ಕೃಷ್ಣೇಗೌಡ ಅವರನ್ನು ಸದಸ್ಯರನ್ನಾಗಿ ನೇಮಿಸಲಾಗಿದೆ. ಜಿ.ಪಂ. ಉಪ ಕಾರ್ಯದರ್ಶಿ (ಆಡಳಿತ) ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.