ಸಾಗರ: ಇಲ್ಲಿನ ನಗರಸಭೆ ಅಧ್ಯಕ್ಷರ ಹಾಗೂ ಆಡಳಿತ ಪಕ್ಷದ ಸದಸ್ಯರ ನಿರಾಸಕ್ತಿ ಮತ್ತು ಬೇಜವಾಬ್ದಾರಿ ತನದಿಂದ ತ್ಯಾಜ್ಯ ವಿಲೇವಾರಿ ಘಟಕ ಕಾಮಗಾರಿ ಹಲವು ವರ್ಷಗಳಿಂದ ಪೂರ್ತಿಯಾಗದೇ ಹಾಗೆಯೇ ಉಳಿದಿದೆ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ದೂರಿದರು.

ನಗರ ವ್ಯಾಪ್ತಿಯ ಹೊರ ವಲಯದಲ್ಲಿರುವ ಸಂಗಳ ಗ್ರಾಮದಲ್ಲಿ ನಗರಸಭೆ ನಿರ್ಮಿಸುತ್ತಿರುವ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಮಂಗಳವಾರ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರಸಭೆ ಅಧಿಕಾರಿಗಳು ಹಾಗೂ ಆಡಳಿತ ಪಕ್ಷದ ಸದಸ್ಯರಲ್ಲಿ ಬದ್ಧತೆ ಇಲ್ಲದ ಕಾರಣ ತ್ಯಾಜ್ಯ ವಿಲೇವಾರಿ ಘಟಕ ಅರ್ಧಂಬರ್ಧ ಆಗಿದೆ ಎಂದು ಟೀಕಿಸಿದರು.

ನಗರಸಭೆಯಲ್ಲಿ ಕಾಂಗ್ರೆಸ್ ಆಡಳಿತ ಇರುವಾಗಲೇ ತ್ಯಾಜ್ಯ ವಿಲೇವಾರಿ ಘಟಕದ ಯೋಜನೆ ರೂಪಿಸಲಾಗಿತ್ತು. ಅದಕ್ಕಾಗಿ ಸಂಗಳ ಗ್ರಾಮದಲ್ಲಿ 17 ಎಕರೆ ಪ್ರದೇಶವನ್ನು ಮೀಸಲಿಡಲಾಗಿತ್ತು. ಗ್ರಾಮಸ್ಥರು ಈ ಘಟಕಕ್ಕೆ ವಿರೋಧ ಸೂಚಿಸಿದರೂ ಹಳ್ಳಿಯ ಜನರಿಗೆ ತೊಂದರೆಯಾಗದ ರೀತಿಯಲ್ಲಿ ವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡುವುದಾಗಿ ಭರವಸೆ ನೀಡಿದ ನಂತರ ಅವರು, ಇದಕ್ಕೆ ಒಪ್ಪಿಗೆ ಸೂಚಿಸಿದ್ದರು. ಆದರೆ, ನಗರಸಭೆ ಈಗ ವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡುತ್ತಿಲ್ಲ ಎಂದು ದೂರಿದರು.

ಸಂಗಳ ಗ್ರಾಮದಲ್ಲಿ ಈಗ ಪ್ಲಾಸ್ಟಿಕ್ ಹಾಗೂ ಇತರ ತ್ಯಾಜ್ಯವನ್ನು ಬೇರ್ಪಡಿಸದೇ ಒಟ್ಟಿಗೆ ಒಂದೇ ಕಡೆ ಹಾಕಲಾಗುತ್ತಿದೆ. ಇದರಿಂದಾಗಿ ತ್ಯಾಜ್ಯ ವಿಲೇವಾರಿ ಸಮರ್ಪಕವಾಗಿ ಆಗುತ್ತಿಲ್ಲ. ದಿನಗೂಲಿ ಆಧಾರದ ಮೇಲೆ ನೌಕರರನ್ನು ನೇಮಿಸಿ ಪ್ಲಾಸ್ಟಿಕ್ನ್ನು ಇತರ ತ್ಯಾಜ್ಯದಿಂದ ಬೇರ್ಪಡಿಸುವ ಕೆಲಸವನ್ನು ನಗರಸಭೆ ಮೊದಲು ಮಾಡಬೇಕು ಎಂದು ಒತ್ತಾಯಿಸಿದರು.

ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಈಗ ತೋಡಿರುವ ಗುಂಡಿಗಳ ಜತೆಗೆ ಮತ್ತಷ್ಟು ಗುಂಡಿಗಳನ್ನು ತೋಡಿ ಒಂದೆರಡು ದಿನ ಆ ಗುಂಡಿಗಳಲ್ಲಿ ಕಸತುಂಬಿ ನಂತರ ಅದರ ಮೇಲೆ ಮಣ್ಣು ಮುಚ್ಚಿದರೆ ವಿಲೇವಾರಿ ಸಮರ್ಪಕವಾಗಿ ಆಗುತ್ತದೆ. ತದನಂತರ ಇದೇ ತ್ಯಾಜ್ಯ ಉತ್ತಮ ಗೊಬ್ಬರವಾಗಿ ಮಾರ್ಪಟ್ಟು ನಗರಸಭೆಗೆ ಆದಾಯ ಕೂಡ ಬರುತ್ತದೆ. ಈ ನಿಟ್ಟಿನಲ್ಲಿ ನಗರಸಭೆ ಆಡಳಿತ ಚಿಂತನೆ ನಡೆಸಬೇಕು ಎಂದು ಸಲಹೆ ನೀಡಿದರು.

ಪೌರಾಡಳಿತ ನಿರ್ದೇಶ ನಾಲಯದಿಂದ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಅನುದಾನ ಬಿಡುಗಡೆ ಆಗಲಿಲ್ಲ ಎಂದು ನಗರಸಭೆ ಆಡಳಿತ ನೆಪ ಹೇಳುವುದನ್ನು ಬಿಟ್ಟು ಕೂಡಲೇ ಅಗತ್ಯವಿರುವ ಅನುದಾನವನ್ನು ತರುವತ್ತ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದರು.

ಅನುದಾನ ಬಂದು ಘಟಕದಲ್ಲಿ ಯಂತ್ರಗಳು ಸ್ಥಾಪನೆ ಆಗುವವರೆಗೆ ಗ್ರಾಮಸ್ಥರಿಗೆ ತೊಂದರೆ ಆಗದಂತೆ ವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡುವತ್ತ ನಗರಸಭೆ ಗಮನಹರಿಸಬೇಕು ಎಂದು ಹೇಳಿದರು.

ನಗರ ಕಾಂಗ್ರೆಸ್ ಅಧ್ಯಕ್ಷ ಮಕ್ಬುಲ್ ಅಹಮದ್, ನಗರಸಭಾ ಸದಸ್ಯ ಸುಂದರ್ಸಿಂಗ್, ಡಿ. ದಿನೇಶ್, ಅನ್ವರ್, ಉಮೇಶ್ ಕಾಗೋಡು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.