ಶಿವಮೊಗ್ಗ: ಜಿಲ್ಲಾ ಸರ್ಕಾರಿ ನೌಕರರ ಸಂಘದ ನೂತನ ಕಟ್ಟಡದ ಉದ್ಘಾಟನೆ ಇದೇ 20ರಂದು ಬೆಳಿಗ್ಗೆ 10.30ಕ್ಕೆ ನಡೆಯಲಿದೆ.ವಿಧಾನಸಭಾ ಅಧ್ಯಕ್ಷ ಕಾಗೋಡು ತಿಮ್ಮಪ್ಪ ಅಂದು ಕಟ್ಟಡ ಉದ್ಘಾಟಿಸುವರು ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಘುರಾಂ ದೇವಾಡಿಗ ತಿಳಿಸಿದರು.

ನಗರದ ಆರ್ಟಿಓ ಕಚೇರಿ ರಸ್ತೆಯಲ್ಲಿ ಒಟ್ಟುರೂ 2.40 ಕೋಟಿ ವೆಚ್ಚದಲ್ಲಿಈ ಕಟ್ಟಡ ನಿರ್ಮಾಣಗೊಂಡಿದೆ. ಉದ್ಘಾಟನಾ ಸಮಾರಂಭ ನೆಹರೂ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

ಈ ಕಟ್ಟಡ ನಿರ್ಮಾಣಕ್ಕೆ ಜಿಲ್ಲೆಯ ಸರ್ಕಾರಿ ನೌಕರರ ಒಂದು ದಿನದ ವೇತನದಿಂದರೂ 96.50 ಲಕ್ಷ, ರಾಜ್ಯ ಸರ್ಕಾರದಿಂದರೂ 50 ಲಕ್ಷ, ಶಾಸಕರ ನಿಧಿಯಿಂದರೂ 13 ಲಕ್ಷ, ಸಂಸದರ ನಿಧಿಯಿಂದರೂ 15 ಲಕ್ಷ, ರಾಜ್ಯಸಭಾ ಸದಸ್ಯರ ನಿಧಿಯಿಂದರೂ 5 ಲಕ್ಷ ಹಾಗೂ ಡಿ.ಎಚ್.ಶಂಕರಮೂರ್ತಿ ಅವರ ನಿಧಿಯಿಂದರೂ 2 ಲಕ್ಷ ಪಡೆದುಕೊಳ್ಳಲಾಗಿದೆ ಎಂದರು.

ಅಂದು ಸರ್ಕಾರಿ ನೌಕರರ ಜಿಲ್ಲಾ ಸಮ್ಮೇಳನವನ್ನೂ ಏರ್ಪಡಿಸಲಾಗಿದ್ದು, ವಿಧಾನ ಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ ಅವರು ಸಮ್ಮೇಳನ ಉದ್ಘಾಟಿಸುವರು. ಕಟ್ಟಡದಲ್ಲಿ ನಿರ್ಮಿಸಿರುವ ಭೋಜನ ಶಾಲೆಯನ್ನು ಸಚಿವ ಕಿಮ್ಮನೆ ರತ್ನಾಕರ್, ಮುಖ್ಯ ಸಭಾಂಗಣವನ್ನು ಕೆಜೆಪಿಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ವಸತಿ ಸಮುಚ್ಛಯವನ್ನು, ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ, ಗ್ರಂಥಾಲಯವನ್ನು ಸಂಸತ್ ಸದಸ್ಯ ಬಿ.ವೈ.ರಾಘವೇಂದ್ರ ಹಾಗೂ ಸಮುಚ್ಛಯ ಕೊಠಡಿಗಳನ್ನು ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್ ಉದ್ಘಾಟಿಸುವರು.

ಇದೇ ಸಂದರ್ಭದಲ್ಲಿ ಜಿಲ್ಲೆಯ ವಿಶೇಷಗಳ ಕುರಿತು ಆಯ್ದ ಬರಹಗಾರರು ಹಾಗೂ ಸರ್ಕಾರಿ ನೌಕರರು ಬರೆದ ಲೇಖನಗಳ ಸ್ಮರಣ ಸಂಚಿಕೆಯನ್ನು ಸರ್ಕಾರಿ ನೌಕರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಎಲ್.ಭೈರಪ್ಪ ಬಿಡುಗಡೆಗೊಳಿಸುವರು ಎಂದು ಹೇಳಿದರು.

ಇದೇ ಕಾರ್ಯಕ್ರಮದಲ್ಲಿ ಶಾಸಕರಾದ ಪ್ರಸನ್ನಕುಮಾರ್, ಅಪ್ಪಾಜಿಗೌಡ, ಮಧು ಬಂಗಾರಪ್ಪ ಹಾಗೂ ಶಾರದಾ ಪೂರ್ಯನಾಯ್ಕ ಮತ್ತು ಈ ಹಿಂದೆ ಜಿಲ್ಲೆಯಲ್ಲಿ ಸಂಘದ ಕಟ್ಟಡ ನಿರ್ಮಾಣಕ್ಕೆ ಸಹಕರಿಸಿದ ಅಧಿಕಾರಿಗಳಾದ ಪೊನ್ನುರಾಜ್, ಹೇಮಚಂದ್ರ, ರಮಣಗುಪ್ತ, ಡಾ.ಸಂಜಯ್ ಬಿಜ್ಜೂರ್, ಜತೆಗೆ ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಕೆ. ಶ್ರೀರಂಗಯ್ಯ ಸೇರಿದಂತೆ ಅನೇಕ ಗಣ್ಯರನ್ನು ಅಭಿನಂದಿಸಲಾಗುವುದು ಎಂದರು.

ಅಂದು ಮಧ್ಯಾಹ್ನ 2.30ಕ್ಕೆ `ಪ್ರಜಾಸ್ನೇಹಿ ಆಡಳಿತ ವ್ಯವಸ್ಥೆ' ಕುರಿತು ವಿಚಾರಸಂಕಿರಣ ಏರ್ಪಡಿಸಲಾಗಿದ್ದು, ಬರಹಗಾರ ಪ್ರೊ.ನಟೇಶ್ಉಪನ್ಯಾಸ ನೀಡುವರು ಎಂದು ಹೇಳಿದರು.

ಈ ನೂತನ ಕಟ್ಟಡದಲ್ಲಿ 350 ಆಸನಗಳುಳ್ಳ ಸುಸಜ್ಜಿತವಾದ ಹವಾ ನಿಯಂತ್ರಿತ ಸಭಾಂಗಣ, ಸಾರ್ವಜನಿಕರು ಹಾಗೂ ನೌಕರರ ಅನುಕೂಲಕ್ಕಾಗಿ ಗ್ರಂಥಾಲಯ ಹಾಗೂ ವಸತಿ ಸಮುಚ್ಛಯಗಳನ್ನು ನಿರ್ಮಿಸಲಾಗಿದೆ ಎಂದು ಮಾಹಿತಿ ನೀಡಿದರು.

ರಾಜ್ಯ ಸರ್ಕಾರಿ ನೌಕರರ ಜಿಲ್ಲಾ ಶಾಖೆಯ ಪದಾಧಿಕಾರಿಗಳ ಆಯ್ಕೆಗೆ ಚುನಾವಣೆ ನಡೆಯಲಿದ್ದು, ಜುಲೈ 11ರಂದು ನಾಮಪತ್ರ ಸಲ್ಲಿಕೆ, ಜುಲೈ 22ರಂದು ಮತದಾನ ನಡೆಯಲಿದೆ ಎಂದರು.

ಸಂಘದ ಕಾರ್ಯದರ್ಶಿ ಫಾಲಾಕ್ಷಪ್ಪ, ಖಜಾಂಚಿ ಹಾಲಪ್ಪ, ಪದಾಧಿಕಾರಿಗಳಾದ ಮಾ.ಸ. ನಂಜುಂಡಸ್ವಾಮಿ, ಹೇರಂಬ, ಶಾಂತರಾಜ್, ಈಶ್ವರ, ಬಸವನಗೌಡ, ಮೋಹನ್ಕುಮಾರ್, ಪ್ರವೀಣ್ ಮಹಿಷಿ ಉಪಸ್ಥಿತರಿದ್ದರು.

ಅರ್ಜಿ ಆಹ್ವಾನ
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯವು ಮೈಸೂರು, ಬೆಂಗಳೂರು ಮತ್ತು ಧಾರವಾಡದ ಪರೀಕ್ಷಾ ಕೇಂದ್ರಗಳಲ್ಲಿ ಪಿ.ಜಿ. ಡಿಪ್ಲೊಮಾ ಮತ್ತು ಸರ್ಟಿಫಿಕೇಟ್ ಕೋರ್ಸ್ಗಳ ಪರೀಕ್ಷೆಯನ್ನು ನಡೆಸಲಿದೆ.

ಪರೀಕ್ಷೆಗಳಿಗೆ ದಂಡವಿಲ್ಲದೇ ಶುಲ್ಕ ಪಾವತಿಸಲು ಜೂನ್ 26 ಕೊನೆ ದಿನ. ಹಾಗೂರೂ 200 ದಂಡದೊಂದಿಗೆ ಶುಲ್ಕ ಪಾವತಿಸಲು ಜುಲೈ 5 ಕೊನೆಯ ದಿನವಾಗಿರುತ್ತದೆ.

ಪರೀಕ್ಷಾರ್ಥಿಗಳು ನಿಗದಿತ ನಮೂನೆಯ ಅರ್ಜಿಯನ್ನು ಅಂತರ್ಜಾಲ ತಾಣ  www.ksoumysore.edu.in  ನಿಂದ ಅಥವಾ ಸಮೀಪದ ಪ್ರಾದೇಶಿಕ ಕಚೇರಿಯಿಂದ ಪಡೆಯಬಹುದು.

ಹೆಚ್ಚಿನ ವಿವರಗಳಿಗೆ ಪರೀಕ್ಷಾಂಗ ಕುಲಸಚಿವರು, ದೂರವಾಣಿ 0821 2515169, 0821 2519942 ಸಂಪರ್ಕಿಸಬಹುದು ಎಂದು ಪ್ರಾದೇಶಿಕ ನಿರ್ದೇಶಕ ಮೋಹನ್ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.