ಬೆಂಗಳೂರು:ಹೆಣ್ಣೂರು ಸಮೀಪದ ಚಗಲಟ್ಟಿಯ ಸಿಎಂಆರ್ ವಿಶ್ವವಿದ್ಯಾಲಯದ ಮುಖ್ಯ ಆವರಣದಲ್ಲಿ ಶುಕ್ರವಾರ ಸಂಸ್ಥಾಪಕರ ದಿನ ಆಚರಿಸಲಾಯಿತು. ಇದೇ ಸಂದರ್ಭದಲ್ಲಿಸಿಎಂಆರ್ ನಾಯಕತ್ವ ಪ್ರಶಸ್ತಿ ವಿತರಿಸಲಾಯಿತಲ್ಲದೆ, ₹1.5 ಕೋಟಿ ಮೌಲ್ಯದ ಶಿಷ್ಯ ವೇತನವನ್ನು ವಿದ್ಯಾರ್ಥಿಗಳಿಗೆ ನೀಡಲಾಯಿತು.

15 ವಿದ್ಯಾರ್ಥಿಗಳು ಸಿಎಂಆರ್ ನಾಯಕತ್ವ ಪ್ರಶಸ್ತಿಗೆ ಪಾತ್ರರಾದರು.ಸಿಎಂಆರ್ ಜನಾರ್ದನ ಟ್ರಸ್ಟ್ 166 ಸಿಎಂಆರ್ ಸ್ಮಾರಕ ಶಿಷ್ಯವೇತನಗಳು ಹಾಗೂ 21 ಕ್ರೀಡಾ ಶಿಷ್ಯವೇತನಗಳನ್ನೂ ಪ್ರದಾನ ಮಾಡಲಾಯಿತು.

ಕಂದಾಯ ಸಚಿವ ಆರ್. ಅಶೋಕ್, ‘ಈಗಿನ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಗುಣಗಳನ್ನು ಹೊಂದಿದ್ದಾರೆ. ಏನಾದರೂ ಸಾಧನೆ ಮಾಡಬೇಕೆನ್ನುವ ಗುಣ ವಿದ್ಯಾರ್ಥಿಗಳಲ್ಲಿ ಕಾಣಬಹುದು. ಮಕ್ಕಳಿಗೆ ತಂದೆ ತಾಯಿ ಪೋಷಕರಿಂದ ಉತ್ತಮ ಪ್ರೋತ್ಸಾಹ ದೊಡ್ಡ ಸಾಧನೆ ಮಾಡುತ್ತಾರೆ’ ಎಂದರು.

‘ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡುವವರಿಗೆ ರಾಜ್ಯ ಸರ್ಕಾರ ವಿಶೇಷ ಸವಲತ್ತುಗಳನ್ನು ನೀಡಿ ಪ್ರೋತ್ಸಾಹಿಸುವ ಕೆಲಸ ಮಾಡುತ್ತಿದೆ. ಈ ನಿಟ್ಟಿನಲ್ಲಿ, ಸಿಎಂಆರ್ ವಿಶ್ವವಿದ್ಯಾಲಯ ಕೂಡ ಮಾದರಿ ಕೆಲಸ ಮಾಡಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುತ್ತಿದೆ’ ಎಂದರು.

ವಸತಿ ಸಚಿವ ವಿ.ಸೋಮಣ್ಣ ಮಾತನಾಡಿದರು. ಸಿಎಂಆರ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಕೆ.ಸಿ.ರಾಮಮೂರ್ತಿ, ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ, ಸಿಎಂಆರ್ ಜನಾರ್ದನ ಟ್ರಸ್ಟ್ ಅಧ್ಯಕ್ಷೆ ಸಬೀತಾ ರಾಮಮೂರ್ತಿ, ಸಿಇಒ ಕೆ.ಆರ್.ಜಯದೀಪ್, ಉಪಾಧ್ಯಕ್ಷೆ ಡಾ.ತ್ರೀಷಾ ರಾಮಮೂರ್ತಿ, ಕೆ.ಸಿ.ಜಗನ್ನಾಥ ರೆಡ್ಡಿ, ಕುಲಪತಿ ಎಂ.ಎಸ್. ಶಿವಕುಮಾರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.