ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರೈಲ್ವೆ ಪ್ರಯಾಣಿಕರ ವೇದಿಕೆಗೆ ದಶಕದ ಸಂಭ್ರಮ

‘ಸ್ಮರಣ ಸಂಚಿಕೆ’ ಬಿಡುಗಡೆಗೆ ನಿರ್ಧಾರ
Published 17 ಮೇ 2024, 7:20 IST
Last Updated 17 ಮೇ 2024, 7:20 IST
ಅಕ್ಷರ ಗಾತ್ರ

ತುಮಕೂರು: ಜಿಲ್ಲಾ ರೈಲ್ವೆ ಪ್ರಯಾಣಿಕರ ವೇದಿಕೆಯ ದಶಮಾನೋತ್ಸವ ಸಮಾರಂಭದ ಪ್ರಯುಕ್ತ ನಗರದಲ್ಲಿ ಈಚೆಗೆ ಪೂರ್ವಭಾವಿ ಸಭೆ ನಡೆಯಿತು.

ವೇದಿಕೆ ಅಧ್ಯಕ್ಷೆ ಬಾ.ಹ.ರಮಾಕುಮಾರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ದಶಮಾನೋತ್ಸವ ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ಚರ್ಚಿಸಲಾಯಿತು. ಸ್ಮರಣ ಸಂಚಿಕೆ ಹೊರತರುವ ನಿರ್ಧಾರ ಕೈಗೊಳ್ಳಲಾಯಿತು. ಜಿಲ್ಲೆಯ ರೈಲ್ವೆ ಇತಿಹಾಸ, ಪ್ರಮುಖ ರೈಲ್ವೆ ಯೋಜನೆಗಳ ಮಾಹಿತಿ ದಾಖಲಿಸಬೇಕು. ಇದರ ಜತೆಗೆ ಪ್ರಯಾಣಿಕರಿಂದ ರೈಲು ಪ್ರಯಾಣದ ಅನುಭವ, ಸ್ಮರಣೀಯ ಘಟನೆಗಳನ್ನು ಆಹ್ವಾನಿಸಿ ಪ್ರಕಟಿಸಲು ತೀರ್ಮಾನಿಸಲಾಯಿತು.

ದಶಮಾನೋತ್ಸವದ ಅಂಗವಾಗಿ ಸಚಿವರು, ಜನಪ್ರತಿನಿಧಿಗಳು ಮತ್ತು ರೈಲ್ವೆ ಅಧಿಕಾರಿಗಳ ಜತೆಗೆ ವಿಚಾರ ಸಂಕಿರಣ ಏರ್ಪಡಿಸಲಾಗುವುದು. ಜಿಲ್ಲೆಯಲ್ಲಿ ಪ್ರಸ್ತುತ ಆಗುತ್ತಿರುವ ರೈಲ್ವೆ ಯೋಜನೆ, ಮುಂದಿನ ವರ್ಷಗಳಲ್ಲಿ ಆಗಬೇಕಿರುವ ರೈಲ್ವೆ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಚರ್ಚಿಸುವ ಕುರಿತು ನಿರ್ಧಾರ ತೆಗೆದುಕೊಳ್ಳಲಾಯಿತು.

ಪ್ರಯಾಣಿಕರು ರೈಲ್ವೆ ಪ್ರಯಾಣದ ಅನುಭವ, ಸ್ವಾರಸ್ಯಕರ ಘಟನೆಗಳ ಬಗ್ಗೆ ತಮ್ಮ ಅನಿಸಿಕೆ ಹಂಚಿಕೊಳ್ಳಬಹುದು. 100 ಪದ ಮೀರದಂತೆ ಅನಿಸಿಕೆ ಬರೆದು tdrpv2014@gmail.com ಕಳುಹಿಸಬಹುದು. ಮಾಹಿತಿಗೆ ಮೊ 9844614015, 9902939030 ಸಂಪರ್ಕಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT