ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನವಮಿ ಪಾನಕ ಸೇವನೆ: 42 ಮಂದಿ ಅಸ್ವಸ್ಥ

Published 18 ಏಪ್ರಿಲ್ 2024, 16:14 IST
Last Updated 18 ಏಪ್ರಿಲ್ 2024, 16:14 IST
ಅಕ್ಷರ ಗಾತ್ರ

ಪ್ರಜಾವಾಣಿ ವಾರ್ತೆ

ಕುಣಿಗಲ್ (ತುಮಕೂರು): ರಾಮನವಮಿ ಪಾನಕ ಸೇವನೆ ನಂತರ ತಾಲ್ಲೂಕಿನ ಮಂಗಳ ಗೊಲ್ಲರಹಟ್ಟಿ ಸುತ್ತಮುತ್ತಲಿನ 42 ಮಂದಿ ವಾಂತಿ, ಭೇದಿಯಿಂದ ಗುರುವಾರ ಅಸ್ವಸ್ಥಗೊಂಡಿದ್ದಾರೆ. ಅವರನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗಿದೆ. 

ರಾಮನವಮಿ ಪ್ರಯುಕ್ತ ತಾಲ್ಲೂಕಿನ ಕೊಡವತ್ತಿ ಗ್ರಾಮದ ಸಮೀಪದ ಸುಬ್ರಹ್ಮಣ್ಯ ದೇವಾಲಯದಲ್ಲಿ ಬುಧವಾರ ನೀರು ಮಜ್ಜಿಗೆ, ಪಾನಕ ವಿತರಿಸಲಾಗಿತ್ತು. ಅವನ್ನು ಸೇವಿಸಿದ ಕೆಲವರಿಗೆ ಸಂಜೆಯಾಗುತ್ತಿದ್ದಂತೆ ವಾಂತಿ, ಭೇದಿ ಆರಂಭವಾಗಿದೆ. ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಗುರುವಾರ ಮತ್ತಷ್ಟು ಜನರು ಅಸ್ವಸ್ಥಗೊಂಡು ತಾಲ್ಲೂಕು ಆಸ್ಪತ್ರೆಗೆ ದಾಖಲಾಗಿದ್ದಾರೆ.

‘ದೋಷ ಪೂರಿತ ಪಾನಕ ಸೇವನೆಯೇ ಅನಾರೋಗ್ಯಕ್ಕೆ ಕಾರಣ’ ಎಂದು ವೈದ್ಯ ಮರಿಯಪ್ಪ ತಿಳಿಸಿದರು. ಶಾಸಕ ಡಾ.ರಂಗನಾಥ್‌  ಆಸ್ಪತ್ರೆಗೆ ಭೇಟಿ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT