ಸೋಮವಾರ, ಆಗಸ್ಟ್ 8, 2022
22 °C
ತುಮುಲ್‌ನಿಂದ ವಿತರಣೆ

ಸಬ್ಸಿಡಿ ದರದಲ್ಲಿ 70 ಟನ್ ಮೇವಿನ ಬೀಜ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಧುಗಿರಿ: ತುಮುಲ್‌ನಿಂದ ತಾಲ್ಲೂಕಿನ ಹಾಲು ಉತ್ಪಾದಕರಿಗೆ ಸಬ್ಸಿಡಿ ದರದಲ್ಲಿ ಮೇವಿನ ಬೀಜ ವಿತರಿಸಲಾಗುತ್ತಿದೆ ಎಂದು ತುಮುಲ್ ನಿರ್ದೇಶಕ ಕೊಂಡವಾಡಿ ಚಂದ್ರಶೇಖರ್ ತಿಳಿಸಿದರು.

ಪಟ್ಟಣದ ತುಮುಲ್ ಉಪಕೇಂದ್ರದಲ್ಲಿ ಮಂಗಳವಾರ ಮೇವಿನ ಬೀಜ ವಿತರಿಸಿ ಮಾತನಾಡಿದರು.

ಹಾಲು ಉತ್ಪಾದಕರು ಹಸಿರು ಮೇವು ಬೆಳೆದುಕೊಳ್ಳಲು ಉತ್ತೇಜನ ನೀಡಲು ಮತ್ತು ಗುಣಮಟ್ಟದ ಹಾಲು ಶೇಖರಣೆ ಮಾಡುವ ಉದ್ದೇಶದಿಂದ 153 ಸಂಘಗಳ 8,900 ಹಾಲು ಉತ್ಪಾದಕ ಸದಸ್ಯರಿಗೆ 70 ಟನ್ ಮೇವಿನ ಬೀಜ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ ಎಂದರು.

ತಾಲ್ಲೂಕಿನ ಹಾಲು ಉತ್ಪಾದಕರಿಗೆ 56 ಸಾವಿರ ಕೆ.ಜಿ. ದಕ್ಷಿಣಆಫ್ರಿಕಾ ಬಿತ್ತನೆ ಮೇವಿನ ಬೀಜ ವಿತರಿಸಲಾಗುತ್ತಿದೆ. ಕೇ.ಜಿ.ಗೆ ₹35 ಮೂಲ ದರವಿದ್ದು, ಒಕ್ಕೂಟದಿಂದ ₹‌17.50 ಸಬ್ಸಿಡಿ ದೊರೆಯಲಿದೆ ಎಂದರು.

10 ಸಾವಿರ ಕೇ.ಜಿ., ಎಸ್‌ಎಸ್‌ಜಿ ಮಲ್ಟಿ ಕಟ್ ಮೇವಿನ ಬೀಜ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ. ಇದಕ್ಕೆ ಕೇ.ಜಿ.ಗೆ ₹46 ಮೂಲ ದರವಿದೆ. ಒಕ್ಕೂಟ ₹23 ಸಬ್ಸಿಡಿ ನೀಡಲಿದೆ. ಇನ್ನು 3,500 ಕೇ.ಜಿ ಅಲಸಂದೆ ಕಾಳು ಬೀಜ ವಿತರಿಸಲಾಗುತ್ತಿದೆ. ಮೂಲ ದರ ಕೇಜಿಗೆ ₹72 ಇದೆ. ತುಮುಲ್‌ನಿಂದ ₹|36 ಸಬ್ಸಿಡಿ ದೊರೆಯಲಿದೆ ಎಂದು ಮಾಹಿತಿ ನೀಡಿದರು.

ತುಮುಲ್ ಸಹಾಯಕ ವ್ಯವಸ್ಥಾಪಕ ಡಾ.ದೀಕ್ಷಿತ್, ವಿಸ್ತರಣಾಧಿಕಾರಿಗಳಾದ ಶಂಕರ್ ನಾಗ್, ದರ್ಶನ್, ಧರ್ಮವೀರ್ ಇದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು