ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹9.47 ಕೋಟಿ ಮೌಲ್ಯದ ವಸ್ತು ವಶ

Last Updated 8 ಡಿಸೆಂಬರ್ 2021, 4:56 IST
ಅಕ್ಷರ ಗಾತ್ರ

ತುಮಕೂರು: ಜಿಲ್ಲೆಯ ವಿವಿಧೆಡೆ ಕಳವು ಮಾಡಿದ್ದ ₹9.47 ಕೋಟಿ ಮೊತ್ತದ ಚಿನ್ನಾಭರಣ, ವಾಹನ, ಇತರೆ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. 2020–2021ರ ಅವಧಿಯಲ್ಲಿ (ಎರಡು ವರ್ಷಗಳು) ನಡೆದಿದ್ದ 507 ಪ್ರಕರಣಗಳನ್ನು ಭೇದಿಸಿದ್ದಾರೆ.

ಒಟ್ಟಾರೆ 507 ಪ್ರಕರಣಗಳಲ್ಲಿ 473 ಪ್ರಕರಣಗಳಲ್ಲಿ ವಶಪಡಿಸಿಕೊಂಡ ₹7.69 ಕೋಟಿ ಮೊತ್ತದ ಚಿನ್ನಾಭರಣ, ಬೈಕ್, ಇತರೆ ವಸ್ತುಗಳನ್ನು ನಗರದ ಚಿಲುಮೆ ಸಮುದಾಯ ಭವನದಲ್ಲಿ ಮಂಗಳವಾರ ಪ್ರದರ್ಶನಕ್ಕೆ ಇಡಲಾಗಿತ್ತು.

ಕಳೆದ ಎರಡು ವರ್ಷಗಳಲ್ಲಿ ₹2.36 ಲಕ್ಷ ನಗದು, ₹4.85 ಕೋಟಿ ಮೊತ್ತದ 11 ಕೆ.ಜಿ 968 ಗ್ರಾಂ ಚಿನ್ನಾಭರಣಗಳು, ₹13.69 ಲಕ್ಷ ಮೊತ್ತದ 17 ಕೆ.ಜಿ 122 ಗ್ರಾಂ ಬೆಳ್ಳಿ ಆಭರಣಗಳು, 147 ದ್ವಿಚಕ್ರ ವಾಹನಗಳು, 28 ಇತರೆ ವಾಹನಗಳು, 50 ಮೊಬೈಲ್ ಸೆಟ್‌ಗಳು, ₹44.68 ಲಕ್ಷ ಮೊತ್ತದ ಇತರೆ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ವಶಪಡಿ
ಸಿಕೊಂಡ ವಸ್ತುಗಳನ್ನು ಪ್ರದರ್ಶನ
ಮಾಡುವ ಮೂಲಕ ಜನರನ್ನು ಎಚ್ಚರಿ
ಸುವ ಹಾಗೂ ಜಾಗ್ರತೆ ವಹಿಸುವಂತೆ ಅರಿವು ಮೂಡಿಸಲಾಯಿತು.

ಕೇಂದ್ರ ವಲಯ ಐಜಿಪಿ ಎಂ.ಚಂದ್ರಶೇಖರ್ ವಾರಸುದಾರರಿಗೆ ಸ್ವತ್ತುಗಳನ್ನು ವಿತರಿಸಿ ಮಾತನಾಡಿ, ‘ಜಿಲ್ಲೆಯಲ್ಲಿ ನಡೆಯುತ್ತಿದ್ದ ಸರಗಳವು ಪ್ರಕರಣಗಳನ್ನು ಪೊಲೀಸರು ಚಾಣಾಕ್ಷತನದಿಂದ ಭೇದಿಸಿದ್ದಾರೆ. ತರಬೇತಿ ಅವಧಿಯಲ್ಲೇ ಸಬ್‌ಇನ್ಸ್‌ಪೆಕ್ಟರ್‌ಗಳಾದ ಟಿ.ಮೂರ್ತಿ, ಪಿ.ಮೂರ್ತಿ ಅವರು ಸರಗಳ್ಳರ ದೊಡ್ಡ ಗ್ಯಾಂಗ್ ಪತ್ತೆಮಾಡಿ ಬಂಧಿಸಿದ್ದಾರೆ. ಇದರಿಂದಾಗಿ ಸರಗಳವು ಪ್ರಕರಣಗಳು ಕಡಿಮೆಯಾಗಿವೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕೋವಿಡ್ ಲಾಕ್‌ಡೌನ್ ಸಮಯದಲ್ಲಿ ಗುಜರಾತ್, ಮಧ್ಯಪ್ರದೇಶ, ತಮಿಳುನಾಡು, ಆಂಧ್ರಪ್ರದೇಶದ ಕೆಲವೆಡೆ ಪೊಲೀಸರು ಕ್ಯಾಂಪ್ ಮಾಡಿ ಹಲವು ಕಳವು ಪ್ರಕರಣಗಳನ್ನು ಪತ್ತೆ ಮಾಡಿದ್ದಾರೆ. ನಗರಕ್ಕೆ ಗಾಂಜಾ ಪೂರೈಕೆದಾರರ ಮೇಲೆ ಶೀಘ್ರ ದಾಳಿ ಮಾಡಿ ಅವರ ಆಸ್ತಿ ಜಪ್ತಿ ಮಾಡುವ ಮೂಲಕ ಸರ್ಜಿಕಲ್ ಸ್ಟ್ರೈಕ್ ಮಾಡುವುದಾಗಿ ತಿಳಿಸಿದರು.

ಕಳ್ಳರನ್ನು ಬಂಧಿಸಿ, ನಗದು, ಚಿನ್ನಾಭರಣ, ಇತರೆ ವಸ್ತುಗಳನ್ನು ವಶಪಡಿಸಿಕೊಳ್ಳಲು ಕಾರಣರಾದ ಪೊಲೀಸ್ ಅಧಿಕಾರಿಗಳು, ಕಾನ್‌ಸ್ಟೆಬಲ್, ಇತರೆ ಸಿಬ್ಬಂದಿಗಳನ್ನು ಅಭಿನಂದಿಸುವುದಾಗಿ ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಕೆ.ಶಹಾಪೂರವಾಡ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT