ಮುದಿಗೆರೆಯಲ್ಲಿ ಸಂಭ್ರಮದ ದೀಪೋತ್ಸವ

ತುಮಕೂರು: ತಾಲ್ಲೂಕಿನ ಬೆಳ್ಳಾವಿ ಹೋಬಳಿ ಮುದಿಗೆರೆಯ ಚಿಕ್ಕಾಪುರ ದಮ್ಮದೇವಿ ಮತ್ತು ಭೂತರಾಯಸ್ವಾಮಿ ಅವರ ಕಾರ್ತಿಕ ಮಾಸದ ಲಕ್ಷ ದೀಪೋತ್ಸವ ಮತ್ತು 13 ಶಕ್ತಿ ದೇವರುಗಳ ಮರವಣಿಗೆ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.
ಮುದಿಗೆರೆ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಭಕ್ತರು ದೀಪಗಳನ್ನು ಹಚ್ಚುವ ಮೂಲಕ ಇಷ್ಟಾರ್ಥ ಸಿದ್ಧಿಗಾಗಿ ಬೇಡಿಕೊಂಡರು. ಲಕ್ಷ ದೀಪೋತ್ಸವ ಪ್ರಯುಕ್ತ ದೇವರಿಗೆ ಪಂಚಾಮೃತ ಅಭಿಷೇಕ, ಅಲಂಕಾರ, ಕುಂಕುಮಾರ್ಚನೆ, ಪುಷ್ಪಾರ್ಚನೆ, ಪಂಚಭಕ್ತಫಲ, ನಿವೇದನೆ, ದೀಪಾರಾಧನೆ, ಮಹಾಮಂಗಳಾರತಿ ಮತ್ತು ತೀರ್ಥಪ್ರಸಾದ ವಿನಿಯೋಗ ಕಾರ್ಯಕ್ರಮ ನಡೆಯಿತು.
ಎತ್ತೇನಹಳ್ಳಿಯ ಮಾರಮ್ಮದೇವಿ, ದೊಡ್ಡಮ್ಮ, ಚಿಕ್ಕಮ್ಮ, ಕಡಬ ಗ್ರಾಮದ ದಾಳಿಯಮ್ಮ, ಕೊಲ್ಲಾಪುರದಮ್ಮ ಮತ್ತು ಭದ್ರಕಾಳಮ್ಮ, ಎತ್ತೇನಹಳ್ಳಿಯ ಕೆಂಚರಾಯಸ್ವಾಮಿ ದೇವರುಗಳನ್ನು ಕರೆತಂದು ಮುದಿಗೆರೆಯ ಸೋಮೇಶ್ವರಸ್ವಾಮಿ, ಆಂಜನೇಯಸ್ವಾಮಿ, ನರಸಿಂಹಸ್ವಾಮಿ, ಕೊಲ್ಲಾಪುರದಮ್ಮ, ಮಹೇಶ್ವರಮ್ಮ ಮತ್ತು ದುರ್ಗಾಪರಮೇಶ್ವರಿ ದೇವರುಗಳೊಂದಿಗೆ ಗ್ರಾಮದಲ್ಲಿ ಮೆರವಣಿಗೆ ಮಾಡಲಾಯಿತು. ವೀರಗಾಸೆ, ಕರಡಿವಾದ್ಯ ಸೇರಿದಂತೆ ವಿವಿಧ ಜನಪದ ಕಲಾಮೇಳಗಳು ಮೆರವಣಿಗೆಗೆ ಮೆರುಗು ತಂದಿದ್ದವು.
ಪ್ರಜಾವಾಣಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.