ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು | ಸೈಬರ್‌ ಬಲೆಗೆ ಬಿದ್ದು ₹6.93 ಲಕ್ಷ ಕಳೆದುಕೊಂಡ ವಿಜ್ಞಾನಿ

Published 8 ಫೆಬ್ರುವರಿ 2024, 4:40 IST
Last Updated 8 ಫೆಬ್ರುವರಿ 2024, 4:40 IST
ಅಕ್ಷರ ಗಾತ್ರ

ತುಮಕೂರು: ನಗರದ ವಿಜ್ಞಾನಿಯೊಬ್ಬರು ಸೈಬರ್‌ ಕಳ್ಳರು ಬೀಸಿದ ಬಲೆಗೆ ಬಿದ್ದಿದ್ದಾರೆ. ಪಾರ್ಟ್‌ಟೈಮ್‌ ಕೆಲಸದ ಆಮಿಷಕ್ಕೆ ಒಳಗಾಗಿ ₹6.93 ಲಕ್ಷ ಕಳೆದುಕೊಂಡಿದ್ದಾರೆ.

ಜ. 18ರಂದು ವಾಟ್ಸ್‌ ಆ್ಯಪ್‌ ಮುಖಾಂತರ ವಿಜ್ಞಾನಿಯನ್ನು ಪರಿಚಯಿಸಿಕೊಂಡ ಸೈಬರ್‌ ಕಳ್ಳರು, ‘ಟ್ರೇಡಿಂಗ್‌ ಮಾಡಿ ಹೆಚ್ಚಿನ ಹಣ ಗಳಿಸಬಹುದು’ ಎಂದು ತಿಳಿಸಿದ್ದಾರೆ. ನಂತರ ಕೆಲವು ಲಿಂಕ್‌ಗಳನ್ನು ಕಳುಹಿಸಿ, ₹2 ಸಾವಿರ ಪಾವತಿಸಿ ನೋಂದಣಿ ಮಾಡಿಕೊಳ್ಳುವಂತೆ ಹೇಳಿದ್ದಾರೆ. ನೋಂದಣಿಯ ನಂತರ ವಿಜ್ಞಾನಿಯ ಖಾತೆಗೆ ₹2,800 ವಾಪಸ್‌ ಹಾಕಿದ್ದಾರೆ.

ವಿವಿಧ ಟಾಸ್ಕ್‌ಗಳನ್ನು ಪೂರ್ಣಗೊಳಿಸಿ ಹೆಚ್ಚಿನ ಲಾಭ ಗಳಿಸಬಹುದು. ಟಾಸ್ಕ್‌ಗಳನ್ನು ನೀಡಲು ಹಣ ಹೂಡಿಕೆ ಮಾಡಬೇಕು ಎಂದೂ ತಿಳಿಸಿದ್ದಾರೆ. ಇದನ್ನು ನಂಬಿ ಹಂತ ಹಂತವಾಗಿ ₹6,95,800 ಹೂಡಿಕೆ ಮಾಡಿದ್ದಾರೆ. ಇದರಲ್ಲಿ ವಿಜ್ಞಾನಿಯ ಖಾತೆಗೆ ₹2,800 ಮಾತ್ರ ವರ್ಗಾವಣೆಯಾಗಿದೆ. ಮತ್ತೆ ಸಂಪರ್ಕಿಸಿದ ಸೈಬರ್‌ ವಂಚಕರು ಇನ್ನೂ ₹5 ಲಕ್ಷ ಹೂಡಿಕೆ ಮಾಡುವಂತೆ ತಿಳಿಸಿದ್ದಾರೆ. ಇದರಿಂದ ಅನುಮಾನಗೊಂಡು ಸೈಬರ್‌ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT