ಮಂಗಳವಾರ, ಜೂನ್ 15, 2021
23 °C
108 ಮಂದಿಗೆ ಸೋಂಕು, 100 ಮಂದಿ ಬಿಡುಗಡೆ

ನಿಲ್ಲದ ಸಾವಿನ ಸರಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಾವಿನ ಸರಣಿ ಮುಂದುವರಿ ದಿದ್ದು, ಮಂಗಳವಾರ 6 ಮಂದಿ ಮೃತಪಟ್ಟಿದ್ದಾರೆ. ಇದರಿಂದಾಗಿ ಈವರೆಗೆ ಸಾವನ್ನಪ್ಪಿದವರ ಸಂಖ್ಯೆ 114ಕ್ಕೆ ಏರಿಕೆಯಾಗಿದೆ.

ಹೊಸದಾಗಿ 108 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಒಟ್ಟು ಸಂಖ್ಯೆ 3,578ಕ್ಕೆ ಏರಿಕೆಯಾಗಿದೆ.

ಮೃತಪಟ್ಟವರಲ್ಲಿ ಐವರು ಪುರುಷರು ಹಾಗೂ ಮಹಿಳೆ ಸೇರಿದ್ದಾರೆ. ನಗರದ ಸಪ್ತಗಿರಿ ಬಡಾವಣೆ 59 ವರ್ಷದ ಪುರುಷ, ಶಿರಾಗೇಟ್‌ನ 72 ವರ್ಷದ ವೃದ್ಧ, ಮಹಾಲಕ್ಷ್ಮಿನಗರದ 55 ವರ್ಷದ ವ್ಯಕ್ತಿ, ಪಿ.ಎಚ್.ಕಾಲೊನಿ 70 ವರ್ಷದ ವೃದ್ಧ, ಗುಬ್ಬಿ ತಾಲ್ಲೂಕು ಚೇಳೂರು ಗ್ರಾಮದ 68 ವರ್ಷದ ವ್ಯಕ್ತಿ, ತಿಪಟೂರು ತಾಲ್ಲೂಕು ವಿನಾಯಕನಗರ ಬಡಾವಣೆ 50 ವರ್ಷದ ಮಹಿಳೆ ಮೃತಪಟ್ಟವರು.

100 ಮಂದಿ ಗುಣಮುಖ: ಸೋಂಕಿತರಲ್ಲಿ 108 ಮಂದಿ ಗುಣಮುಖರಾಗಿ ಮನೆಗಳಿಗೆ ಹಿಂದಿರುಗಿದರು. ಈವರೆಗೆ ದಾಖಲಾದ 3,578 ಸೋಂಕಿತರಲ್ಲಿ 2,562 ಮಂದಿ ಗುಣಮುಖರಾಗಿದ್ದಾರೆ. 902 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮಂಗಳವಾರ ದೃಢಪಟ್ಟ ಸೋಂಕಿತರಲ್ಲಿ 68 ಪುರುಷರು, 40 ಮಂದಿ ಮಹಿಳೆಯರು, 5 ವರ್ಷದೊಳಗಿನ 5 ಮಕ್ಕಳು, 60 ವರ್ಷ ಮೇಲ್ಪಟ್ಟ 17 ಮಂದಿ ಇದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.