ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಂಬಾಳೆ ಕೀಳುವಾಗ ವಿದ್ಯುತ್‌ ಸ್ಪರ್ಶ

ಸ್ನೇಹಿತನ ಮದುವೆಗೆ ಬಂದಿದ್ದ ಯುವಕ ಸಾವು
Published 26 ಮೇ 2024, 3:32 IST
Last Updated 26 ಮೇ 2024, 3:32 IST
ಅಕ್ಷರ ಗಾತ್ರ

ತುಮಕೂರು: ತಾಲ್ಲೂಕಿನ ಬೆಳ್ಳಾವಿ ಹೋಬಳಿಯ ಕನ್ನೇನಹಳ್ಳಿ ಬಳಿ ಶನಿವಾರ ತೆಂಗಿನ ಮರದಿಂದ ಹೊಂಬಾಳೆ ಕೀಳುವಾಗ ವಿದ್ಯುತ್‌ ತಂತಿ ತಗುಲಿ ಎಂ.ರವಿ (38) ಎಂಬುವರು ಮೃತಪಟ್ಟಿದ್ದಾರೆ.

ರವಿ ನಗರದ ತೋಟದ ಸಾಲು ಅಗ್ರಹಾರದ ನಿವಾಸಿ. ತನ್ನ ಸ್ನೇಹಿತನ ಮದುವೆಗಾಗಿ ಕನ್ನೇನಹಳ್ಳಿಗೆ ಹೋಗಿದ್ದರು. ಮದುವೆಗೆ ಹೊಂಬಾಳೆ ತರಲು ತೋಟಕ್ಕೆ ತೆರಳಿದ್ದರು. ಬಿದಿರಿನ ಕಟ್ಟಿಗೆಗೆ ಕುಡುಗೋಲು ಕಟ್ಟಿ ಹೊಂಬಾಳೆ ಕೀಳುವಾಗ ತೆಂಗಿನ ಮರದ ಮೇಲೆ ಹಾದು ಹೋಗಿರುವ ವಿದ್ಯುತ್‌ ತಂತಿ ತಗುಲಿದೆ. ಮಳೆಗೆ ಬಿದಿರು ನೆಂದಿದ್ದರಿಂದ ವಿದ್ಯುತ್‌ ಸ್ಪರ್ಶಿಸಿದೆ. ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ರವಿ ಸಾವನ್ನಪ್ಪಿದ್ದಾರೆ. ಬೆಳ್ಳಾವಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT