ಪಾವಗಡ: ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ವೈ.ಎನ್ ಹೊಸಕೋಟೆ ಗ್ರಾಮದ ಕೆಇಬಿ ವಸತಿ ಗೃಹ, ಪೊಲೀಸ್ ವಸತಿ ಗೃಹ, ಸರ್ಕಾರಿ ಆಸ್ಪತ್ರೆ ಪಾಳುಬಿದ್ದು ಭೂತ ಬಂಗಲೆಯಂತಾಗಿವೆ. ಈ ಸ್ಥಳಗಳು ಇದೀಗ ಅಕ್ರಮ ಮತ್ತು ಅನೈತಿಕ ಚಟುವಟಿಕೆಗಳ ತಾಣಗಳಾಗಿವೆ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಇದೇ ಸ್ಥಳಗಳಲ್ಲಿ ಅಡಿ ಜಾಗಕ್ಕೆ ಚಿನ್ನಕ್ಕಿಂತ ಹೆಚ್ಚು ಬೆಲೆ ಇದೆ. ಕಟ್ಟಡ ನಿರ್ಮಾಣಕ್ಕೆ ಸಾರ್ವಜನಿಕರ ತೆರಿಗೆ ಹಣ ವಿನಿಯೋಗಿಸಲಾಗಿದೆ. ಜನತೆ ಬೆವರು ಸುರಿಸಿ ದುಡಿದು ಪ್ರತ್ಯಕ್ಷವಾಗಿ, ಪರೋಕ್ಷವಾಗಿ ತೆರಿಗೆ ಮೂಲಕ ಸರ್ಕಾರಕ್ಕೆ ಪಾವತಿಸಿದ ಹಣದಿಂದ ನಿರ್ಮಿಸಲಾದ ಕಟ್ಟಡಗಳು ವ್ಯರ್ಥವಾಗಿರುವ ಬಗ್ಗೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಸಾವಿರಾರು ಚದರಡಿಯಲ್ಲಿ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಸರ್ಕಾರಿ ವಸತಿ ಗೃಹ ವ್ಯರ್ಥವಾಗಿ, ಕಣ್ಣೆದುರಲ್ಲಿಯೇ ಬಿದ್ದು ಹೋಗುತ್ತಿರುವುದು ಜನರ ಮನಸ್ಸಿಗೆ ಘಾಸಿಯುಂಟು ಮಾಡುತ್ತಿದೆ. ಇಂತಹ ನಿರುಪಯುಕ್ತ ಕಟ್ಟಡಗಳನ್ನು ಗ್ರಂಥಾಲಯ, ಶಾಲೆ, ಕಾಲೇಜುಗಳು ಸೇರಿದಂತೆ ಸಾರ್ವಜನಿಕ ಉದ್ದೇಶಗಳಿಗೆ ಬಳಸಿಕೊಳ್ಳಬಹುದು. ಇಲ್ಲವಾದರೆ ಗುಡಿಸಲಿನಲ್ಲಿ ವಾಸಿಸುತ್ತಾ ತುತ್ತು ಅನ್ನಕ್ಕಾಗಿ ಕಷ್ಟ ಪಡುವ ನಿರ್ಗತಿಕರಿಗೆ ನೀಡಿದರೆ ಸಂಬಂಧಿಸಿದವರನ್ನು ನೆನೆಯುತ್ತಾರೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ.

ಹೋಬಳಿ ಕೇಂದ್ರದ ಹೃದಯಭಾಗದಲ್ಲಿ ಹಲವು ವರ್ಷಗಳ ಹಿಂದೆ ನಿರ್ಮಾಣವಾಗಿ ಕೆಲಕಾಲ ಮಾತ್ರ ಉಪಯೋಗಿಸಲ್ಪಟ್ಟು ಪ್ರಸ್ತುತ ಖಾಲಿಯಾಗಿರುವ ಸಮುದಾಯ ಆರೋಗ್ಯ ಕೇಂದ್ರದ ಕಟ್ಟಡ ಅವಸಾನದ ಅಂಚಿಗೆ ತಲುಪಿದೆ.

ಕಟ್ಟಡದಲ್ಲಿ ಶಸ್ತ್ರಚಿಕಿತ್ಸಾ ಕೊಠಡಿ, ಸಾಮಾನ್ಯ ಚಿಕಿತ್ಸಾ ಕೊಠಡಿ, ಪರೀಕ್ಷಾಕೇಂದ್ರ, ಔಷಧಿ ಮಳಿಗೆ, ವೈದ್ಯರ ಕೊಠಡಿ, ರೋಗಿಗಳ ವಾರ್ಡ್ ಇತ್ಯಾದಿಗಳಿವೆ. ಇದಕ್ಕೆ ಹೊಂದಿಕೊಂಡು ಒಂದೆರಡು ಹಳೆಯ ಕಟ್ಟಡದ ಕೊಠಡಿಗಳನ್ನು ಕಾಣಬಹುದು. ಇವೆಲ್ಲವೂ ಉಪಯೋಗವಿಲ್ಲದೆ ಶಿಥಿಲಗೊಳ್ಳುತ್ತಿವೆ. ಎಲ್ಲಡೆ ದೂಳು ಮತ್ತು ಕಸ ಆವರಿಸಿ ಸ್ವಚ್ಛ ಮಾಡುವವರಿಲ್ಲದೆ ಕಟ್ಟಡ ಶಿಥಿಲಾವಸ್ಥೆ ತಲುಪಿದೆ. ಕೆಲವೊಂದು ಭಾಗದ ಚಾವಣಿ ಬೀಳುತ್ತಿದ್ದು ಕಬ್ಬಿಣ ಕಾಣುತ್ತಿದೆ.

ರಕ್ಷಣೆ ಇಲ್ಲದ ಕಟ್ಟಡ ಆಗಿರುವುದರಿಂದ ಹಿಂಭಾಗವೆಲ್ಲಾ ಮೂತ್ರ ವಿಸರ್ಜನೆಗೆ ಬಳಸಿಕೊಳ್ಳಲಾಗುತ್ತಿದೆ. ಮತ್ತೊಂದು ಭಾಗದಲ್ಲಿ ಕಾಫಿ-ಟೀ ಅಂಗಡಿ ಮತ್ತು ಬೀದಿಬದಿ ಅಂಗಡಿಗಳ ತ್ಯಾಜ್ಯ, ವ್ಯರ್ಥ ನೀರು ಚೆಲ್ಲುವ ಕೊಳಚೆ ಕೇಂದ್ರವಾಗಿದೆ. ಪ್ರವೇಶ ಭಾಗವನ್ನು ಸಾರ್ವಜನಿಕರು ದ್ವಿಚಕ್ರವಾಹನ ನಿಲ್ದಾಣವಾಗಿ ಪರಿವರ್ತಿಸಿಕೊಂಡು ಜೂಜು, ದುಶ್ಚಟಗಳ ಮತ್ತು ಅವ್ಯವಹಾರಗಳ ತಾಣವನ್ನಾಗಿ ಮಾಡಿಕೊಂಡಿದ್ದಾರೆ.

ಊರ ಹೊರಗಿನ ನೂತನ ಕಟ್ಟಡಕ್ಕೆ ಸರ್ಕಾರಿ ಆಸ್ಪತ್ರೆಯು ಸ್ಥಳಾಂತರಗೊಂಡ ನಂತರ ಸುಸಜ್ಜಿತವಾಗಿದ್ದ ಈ ಸಮುದಾಯ ಆರೋಗ್ಯ ಕೇಂದ್ರವು ಖಾಲಿಯಾಗಿ ಅನೈತಿಕ ಮತ್ತು ಅವ್ಯವಹಾರಗಳ ತಾಣವಾಗುತ್ತಾ, ಗ್ರಾಮದ ಸ್ವಾಸ್ಥ್ಯವನ್ನು ಹಾಳುಮಾಡುವ ಕೇಂದ್ರವಾಗಿ ಮಾರ್ಪಟ್ಟಿದೆ. ಇಂತಹ ಕಟ್ಟಡವು ಗ್ರಾಮದ ಮುಖ್ಯಸ್ಥಳದಲ್ಲಿದ್ದು ಹಲವು ಸಮಸ್ಯೆಗಳಿಗೆ ಕಾರಣ ಆಗುತ್ತಿರುವುದರಿಂದ ಇಲ್ಲಿ ಇಲಾಖೆಯ ಚಟುವಟಿಕೆಗಳು ಸದಾ ನಡೆಯುತ್ತಿರಬೇಕು. ಇಲ್ಲವೇ ಕಟ್ಟಡವನ್ನು ಉಪಯೋಗಕ್ಕಾಗಿ ಮತ್ತೊಂದು ಇಲಾಖೆಗೆ ವರ್ಗಾಯಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯ.

ಕೂಗಳತೆ ದೂರದಲ್ಲಿ ಅಂಧ್ರದ ಗಡಿ ಹೊಂದಿರುವ ಹೋಬಳಿ ಕೇಂದ್ರ ವೈ.ಎನ್ ಹೊಸಕೋಟೆ ವಾಣಿಜ್ಯ ಕೇಂದ್ರವೂ ಹೌದು. ಪೊಲೀಸ್ ಠಾಣೆಯ ಅಧಿಕಾರಿಗಳು, ಸಿಬ್ಬಂದಿಗಾಗಿ ನಿರ್ಮಿಸಲಾದ ವಸತಿ ಗೃಹ ಪಾಳು ಬಿದ್ದಿವೆ. ಇಲ್ಲಿ ಕರ್ತವ್ಯ ನಿರ್ವಹಿಸುವವರು ಅನಿವಾರ್ಯವಾಗಿ ಬಾಡಿಗೆ ಮನೆಗಳಲ್ಲಿ ವಾಸಿಸಬೇಕು. ಇಲ್ಲವಾದರೆ ಬೇರೆಡೆಯಿಂದ ಪ್ರಯಾಣಿಸಿ ಇಲ್ಲಿ ಕರ್ತವ್ಯ ನಿರ್ವಹಿಸಬೇಕು. ಸುಮಾರು 20 ರಿಂದ 30 ವರ್ಷಗಳಿಂದ ಇಲ್ಲಿ ಯಾರೂ ವಾಸಿಸುತ್ತಿಲ್ಲ. ಪೊಲೀಸ್ ವಸತಿ ಗೃಹ ಶಿಥಿಲಾವಸ್ಥೆ ತಲುಪಿ ಪಳೆಯುಳಿಕೆಗಳಂತೆ ಮಾರ್ಪಟ್ಟಿವೆ.

ಪೊಲೀಸ್ ಇಲಾಖೆಯವರ ವಸತಿ ಸೌಕರ್ಯಕ್ಕಾಗಿ ಗ್ರಾಮದ ಹೊರವಲಯದಲ್ಲಿ ಸುಸಜ್ಜಿತವಾಗಿ ಹಲವು ದಶಕಗಳ ಹಿಂದೆ ನಿರ್ಮಾಣ ಮಾಡಿರುವ ಕಟ್ಟಡ ಉಪಯೋಗಿಸಲ್ಪಡದೆ ನಿರರ್ಥಕವಾಗಿದೆ. ಸುತ್ತಲೂ ಆವರಣ, ಪೊಲೀಸ್ ಇನ್ಸ್ಪೆಕ್ಟರ್ಗಾಗಿ ಪ್ರತ್ಯೇಕ ಮನೆ ಹಾಗೂ ಪೊಲೀಸರಿಗೆ ವಸತಿ ಸಮುಚ್ಚಯ ನಿರ್ಮಿಸಲಾಗಿದೆ. ಕಟ್ಟಡ ನಿರ್ಮಾಣವಾದ ನಂತರ ಒಂದೆರಡು ವರ್ಷ ವಾಸವಿದ್ದ ಸಬ್ ಇನ್ಸ್ಪೆಕ್ಟರ್ ಕುಟುಂಬ ಹೊರತುಪಡಿಸದರೆ ನಂತರ ಯಾವುದೇ ಪೊಲೀಸ್ ಕುಟುಂಬಗಳು ಈ ಕಟ್ಟಡದಲ್ಲಿ ವಾಸ ಮಾಡಿರುವ ಉದಾಹರಣೆಗಳಿಲ್ಲ.

ಎಲ್ಲ ಸೌಲಭ್ಯಗಳಿದ್ದರೂ ಈ ಕಟ್ಟಡಕ್ಕೆ ಇಲಾಖೆಯವರು ಹೋಗದಿರುವ ಕಾರಣ ಕಟ್ಟಡ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ. ಕಿಟಕಿ, ಬಾಗಿಲುಗಳ ಗಾಜು ಒಡೆದು ಹೋಗಿವೆ. ಕೊಠಡಿಯ ಬಾಗಿಲುಗಳು ತುಕ್ಕು ಹಿಡಿಯುತ್ತಿವೆ. ಜಾನುವಾರುಗಳು ನುಗ್ಗುತ್ತಿವೆ. ಈ ಬಗ್ಗೆ ಸಂಬಂಧಿಸಿದವರು ಪರಿಶೀಲಿಸಿ ಕಟ್ಟಡವು ಪುನರ್ ಬಳಕೆಗೆ ಬರುವ ರೀತಿಯಲ್ಲಿ ವ್ಯವಸ್ಥೆ ಮಾಡಿ ಸಾರ್ವಜನಿಕ ಆಸ್ತಿಯ ನಷ್ಟ ಆಗದಂತೆ ತಡೆಯಬೇಕು ಎಂಬುವುದು ಈ ಭಾಗದ ಜನತೆ ಒತ್ತಾಯವಾಗಿದೆ.

ಕೆಲ ಕಟ್ಟಡಗಳು ಗಟ್ಟಿ ಮುಟ್ಟಾಗಿದ್ದರೂ ನಿರ್ವಹಣೆ ಕೊರತೆಯಿಂದ ಪಾಳು ಬಿದ್ದಿವೆ. ಬಳಕೆ, ನಿರ್ವಹಣೆ ಮಾಡದ ಪರಿಣಾಮ ಶಿಥಿಲಾವಸ್ಥೆ ತಲುಪಿವೆ. ಸೀಮೆ ಜಾಲಿ, ಇತ್ಯಾದಿ ಗಿಡಗಳು ಬೆಳೆದು ಯಾರೂ ಪ್ರವೇಶಿಸದ ಸ್ಥಿತಿ ತಲುಪಿದೆ.

ಕೆಇಬಿ ವಸತಿ ನಿಲಯಗಳು ಬಳಕೆಯಾಗದೆ ಹಾವು, ಚೇಳುಗಳಿಗೆ ಆಶ್ರಯವಾಗಿವೆ. ಈ ಕಟ್ಟಡಗಳು ಬಳಕೆಗೆ ಅನುಕೂಲವಾಗುವಂತೆ ಸಂಬಂಧಿಸಿದ ಇಲಾಖೆಗಳು ಕ್ರಮ ತೆಗೆದುಕೊಳ್ಳಬೇಕು ಎಂದು ಜನತೆ ಒತ್ತಾಯಿಸಿದ್ದಾರೆ. ಕಟ್ಟಡಗಳ ಬಾಗಿಲುಗಳು ಹಾಳಾಗಿವೆ. ಕಟ್ಟಡಗಳು ಕಸದ ತೊಟ್ಟಿಯಾಗಿದೆ.

ಶಿಥಿಲಾವಸ್ಥೆ ತಲುಪಿರುವ ಕಟ್ಟಡಗಳನ್ನು ತೆರವುಗೊಳಿಸಬೇಕು ಇಲ್ಲವಾದಲ್ಲಿ ಮತ್ತೆ ಉಪಯೋಗಕ್ಕೆ ಬರುವಂತೆ ದುರಸ್ತಿ ಮಾಡಿ ಸಾರ್ವಜನಿಕರ ಹಣ ವ್ಯರ್ಥವಾಗದಂತೆ ನೋಡಿಕೊಳ್ಳಬೇಕು ಎಂಬುದು ಜನರ ಒತ್ತಾಸೆ.

ಕಟ್ಟಡ ಉಪಯೋಗಕ್ಕೆ ಸಿಗುವಂತೆ ಆಗಲಿ

ಹಲವು ವರ್ಷಗಳಿಂದ ಖಾಲಿಯಾಗಿ ಉಳಿದುಕೊಂಡಿರುವ ಸಮುದಾಯ ಆರೋಗ್ಯ ಕೇಂದ್ರದ ಕಟ್ಟಡವನ್ನು ಆರೋಗ್ಯ ಇಲಾಖೆ ಬಳಸುತ್ತಿಲ್ಲ. ಬೇರೊಂದು ಇಲಾಖೆ ಬಳಸಿಕೊಳ್ಳಲು ಅವಕಾಶ ನೀಡುತ್ತಿಲ್ಲ. ಸಂಬಂಧಿಸಿದವರು ಈ ಬಗ್ಗೆ ತಕ್ಷಣ ಕ್ರಮ ಕೈಗೊಂಡು ಕಟ್ಟಡ ಸಾರ್ವಜನಿಕ ಉಪಯೋಗಕ್ಕೆ ಸಿಗುವಂತೆ ನೋಡಿಕೊಳ್ಳಬೇಕು.

- ಎ.ಓ.ನಾಗರಾಜು, ಕನ್ನಡ ಕಲಾ ಮತ್ತು ಸಾಂಸ್ಕೃತಿಕ ಮಂಡಳಿ ಅಧ್ಯಕ್ಷ

ಕಟ್ಟಡ ದುರಸ್ತಿ ಮಾಡಿಸಿ

ಹೋಬಳಿ ಕೇಂದ್ರದಲ್ಲಿ ಹಲವು ಸರ್ಕಾರಿ ನೌಕರರು ಇದ್ದಾರೆ. ಅವರಿಗೆ ಅಗತ್ಯವಾದ ವಸತಿ ಸೌಕರ್ಯ ದೊರೆಯುತ್ತಿಲ್ಲ. ಪಾಳುಬಿದ್ದಿರುವ ಕಟ್ಟಡವನ್ನು ದುರಸ್ತಿ ಮಾಡಿಸಿ ವಸತಿ ಸೌಕರ್ಯಕ್ಕೆ ಬಳಸಿಕೊಂಡರೆ ನೌಕರರಿಗೆ ಅನುಕೂಲವಾಗುತ್ತದೆ.

- ಷೇಕ್ಜಮೀಲ್ ಅಹಮದ್, ವೈ.ಎನ್ ಹೊಸಕೋಟೆ

ನಿರುಪಯುಕ್ತವಾಗಿದೆ

ಕೆಇಬಿ ವಸತಿ ಗೃಹಗಳಲ್ಲಿ ಸಿಬ್ಬಂದಿ ವಾಸಿಸುತ್ತಿಲ್ಲ. ಈ ಕಟ್ಟಡವೂ ಶೀಘ್ರ ಶಿಥಿಲಾವಸ್ಥೆಗೆ ತಲುಪಲಿದೆ. ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ಕಟ್ಟಡ ನಿರುಪಯುಕ್ತವಾಗಿದೆ.

- ಜಗದೀಶ್, ವೈ.ಎನ್ ಹೊಸಕೋಟೆ

ಪ್ರಯೋಜನವಾಗುತ್ತಿಲ್ಲ

ಪೊಲೀಸರಿಗಾಗಿ ನಿರ್ಮಾಣವಾಗಿರುವ ವಸತಿ ಸಮುಚ್ಚಯ ವ್ಯರ್ಥವಾಗಿದೆ. ಕಟ್ಟಡ ಇದ್ದರೂ ಪ್ರಯೋಜನವಾಗುತ್ತಿಲ್ಲ. ಕಟ್ಟಡ ಮತ್ತೆ ಪ್ರಯೋಜನವಾಗುವಂತೆ ಮಾಡಬೇಕಿದೆ.

- ಯರ್ರಪ್ಪ, ವೈ.ಎನ್ ಹೊಸಕೋಟೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.