ಗುರುವಾರ , ಸೆಪ್ಟೆಂಬರ್ 23, 2021
24 °C

ಹುಳಿಯಾರು ಪೊಲೀಸ್‌ ಠಾಣೆ ಮೇಲೆ ಎಸಿಬಿ ದಾಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಳಿಯಾರು: ಪಟ್ಟಣದ ಖಾಸಗಿ ಹಣಕಾಸು ಕಂಪನಿಯಲ್ಲಿ ನಡೆದಿದ್ದ ಅವ್ಯವಹಾರದ ವಸೂಲಾತಿ ಹಣದ ವಿಷಯವಾಗಿ ಪೊಲೀಸರ ವಿರುದ್ಧ ನೀಡಿದ ದೂರಿನ ಮೇರೆಗೆ ಭ್ರಷ್ಟಾಚಾರ ನಿಗ್ರಹ ದಳದ ತಂಡ ಶುಕ್ರವಾರ ಹುಳಿಯಾರು ಪೊಲೀಸ್‌ ಠಾಣೆ ಮೇಲೆ ದಾಳಿ ನಡೆಸಿ ತನಿಖೆ ನಡೆಸಿತು.

ಪಟ್ಟಣದಲ್ಲಿ ಹಣಕಾಸು ಸಂಸ್ಥೆಯೊಂದರ ವ್ಯವಸ್ಥಾಪಕ ಸುಮಾರು ₹50 ಲಕ್ಷವನ್ನು ಅವ್ಯವಹಾರ ಮಾಡಿದ್ದರು. ಹಣವನ್ನು ಕ್ರಿಕೆಟ್‌ ಬೆಟ್ಟಿಂಗ್‌ನಲ್ಲಿ ತೊಡಗಿಸಿದ್ದರು. ಬೆಟ್ಟಿಂಗ್‌ ಹಣವನ್ನು ವ್ಯಕ್ತಿಯಿಂದ ವಸೂಲಾತಿ ಮಾಡುವ ವೇಳೆ ಹಣವನ್ನು ಪಟ್ಟಣದ ಮೊಬೈಲ್‌ ಅಂಗಡಿಯೊಂದರಲ್ಲಿ ಕೊಡುವಂತೆ ಹುಳಿಯಾರು ಪೊಲೀಸ್‌ ಠಾಣೆ ಪಿಎಸ್‌ಐ ಹೇಳಿದ್ದಾರೆ ಎನ್ನಲಾದ ಅಡಿಯೊ ಜಾಡು ಹಿಡಿದ ಎಸಿಬಿ ತಂಡ ಶುಕ್ರವಾರ ತಡ ರಾತ್ರಿವರೆಗೂ ತನಿಖೆ ನಡೆಸಿತು. ಮಧ್ಯಾಹ್ನ ಆರಂಭವಾದ ತನಿಖೆ ಸಂಜೆಯವರೆಗೂ ಮುಂದುವರೆದಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.