ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೌರ ಕಾರ್ಮಿಕರಿಗೆ ಗೌರವ ನೀಡಲು ಸಲಹೆ

Last Updated 1 ಅಕ್ಟೋಬರ್ 2021, 4:26 IST
ಅಕ್ಷರ ಗಾತ್ರ

ತಿಪಟೂರು: ಪೌರ ಕಾರ್ಮಿಕರು ನಗರವನ್ನು ಸ್ವಚ್ಛವಾಗಿಸುವ ಜೊತೆಗೆ ಸೌಂದರೀಕರಣದ ಭಾಗವಾಗಿದ್ದು ಅವರನ್ನು ಸಾಮಾನ್ಯರಂತೆ ನಡೆಸಿಕೊಳ್ಳುವ ಕಾರ್ಯವಾಗಬೇಕಿದೆ ಎಂದು ಕಲ್ಪತರು ವಿದ್ಯಾಸಂಸ್ಥೆಯ ಕಾರ್ಯದರ್ಶಿ ಸುಧಾಕರ್ ತಿಳಿಸಿದರು.

ನಗರದ ಕಲ್ಪತರು ವಿದ್ಯಾಸಂಸ್ಥೆಯ ಪದವಿಪೂರ್ವ ಕಾಲೇಜಿನಲ್ಲಿ ಪೌರ ಕಾರ್ಮಿಕರ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ತಿಪಟೂರು ನಗರ ಸ್ವಚ್ಛವಾಗಿರಬೇಕೆಂದರೆ ಅದು ಪೌರ ಕಾರ್ಮಿಕರಿಂದ ಮಾತ್ರ ಸಾಧ್ಯ. ಚಾಚೂತಪ್ಪದೇ ತಮ್ಮ ಕಾಯಕ ನಿಷ್ಠೆಯಿಂದ ಹಲವಾರು ವರ್ಷಗಳಿಂದಲೂ ಕಾರ್ಯ ನಿರ್ವಹಿಸಿಕೊಂಡು ಬರುತ್ತಿದ್ದಾರೆ. ಇಂತಹ ಪೌರ ಕಾರ್ಮಿಕರು ನಿಮ್ಮ ಮನೆಗಳ ಬಳಿಯೂ ಬಂದು ಕಸ ವಿಲೇವಾರಿ ಮಾಡಿಕೊಂಡು ಹೋಗುತ್ತಾರೆ. ಅಂತಹವರನ್ನು ನಿಂದಿಸಬಾರದು ಎಂದರು.

ಕೊರೊನಾ ಸಂದರ್ಭದಲ್ಲಿ ಮನೆಯಿಂದ ಹೊರಬರದಂತಹ ಸ್ಥಿತಿಯಲ್ಲಿ ಜೀವದ ಹಂಗು ತೊರೆದು ಎಲ್ಲಾ ವಾರ್ಡ್‌ನ ಮನೆಗಳ ಬಳಿಯಲ್ಲಿ ಸ್ಯಾನಿಟೈಸ್ ಮಾಡಿ ನಗರವನ್ನು ಕೊರೊನಾ ಮುಕ್ತವಾಗಿಸುವಲ್ಲಿ ಇವರ ಕೊಡುಗೆ ಅಪಾರವಾಗಿದೆ. ಇನ್ನೂ ಕೊರೊನಾದಿಂದ ಮೃತಪಟ್ಟವರ ಶವಸಂಸ್ಕಾರದಲ್ಲಿಯೂ ಧೃತಿಗೆಡದೆ ಕಾರ್ಯ ನಿರ್ವಹಿಸಿದ್ದಾರೆ. ತಮ್ಮ ಕರ್ತವ್ಯ ನಿಷ್ಠೆ ಪ್ರದರ್ಶಿಸಿರುವುದು ಹೆಮ್ಮೆಯ ವಿಚಾರ ಎಂದು ಹೇಳಿದರು.

ಕಲ್ಪತರು ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಎಲ್. ಗೀತಾಲಕ್ಷ್ಮೀ ಮಾತನಾಡಿ, ನಮ್ಮೆಲ್ಲರಂತೆಯೇ ಅವರಿಗೂ ಜೀವನವಿದೆ. ಅದನ್ನು ಅರಿತು ನಾವೆಲ್ಲ ನಡೆದುಕೊಳ್ಳಬೇಕು. ಪೌರ ಕಾರ್ಮಿಕರ ವೃತ್ತಿಯ ಬಗ್ಗೆ ಕೀಳರಿಮೆಯನ್ನು ಎಲ್ಲರ ಮನಸ್ಸಿನಿಂದ ತೊಡೆದು ಹಾಕುವಂತಹ ಕಾರ್ಯವಾಗಬೇಕು ಎಂದು ಸಲಹೆ ನೀಡಿದರು.

ಕೋವಿಡ್ ಸಂದರ್ಭದಲ್ಲಿ ಅನೇಕ ಅನಾಥ ಶವಗಳನ್ನು ಅಂತ್ಯಸಂಸ್ಕಾರ ಮಾಡಿದ್ದ ಪೌರ ಕಾರ್ಮಿಕ ರಾಜಣ್ಣ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಕಲ್ಪತರು ಸಂಸ್ಥೆಯ ಉಪಾಧ್ಯಕ್ಷ ಜಿ.ಪಿ. ದೀಪಕ್, ಅರ್ಥಶಾಸ್ತ್ರ ವಿಭಾಗದ ಉಪನ್ಯಾಸಕ ಟಿ.ಆರ್. ರಾಜಶೇಖರ್, ರಾಜ್ಯಶಾಸ್ತ್ರ ವಿಭಾಗದ ಉಪನ್ಯಾಸಕ ರೇಣುಕಸ್ವಾಮಿ, ಇತಿಹಾಸ ಉಪನ್ಯಾಸಕ ಟಿ.ಎಸ್. ಮಹದೇವಯ್ಯ, ಕನ್ನಡ ಉಪನ್ಯಾಸಕ ಇಂದ್ರೇಶ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT