ಕೊಡಿಗೇನಹಳ್ಳಿ: ಗ್ರಾಮದ ಸರ್ವೋದಯ ಪ್ರಾಥಮಿಕ ಶಾಲೆಗೆ ಹಳೆಯ ವಿದ್ಯಾರ್ಥಿ ಸಲ್ಮಾನ್ ಹಾಗೂ ಸಹೋದರ ಇಮ್ರಾನ್ ಎರಡು ಶೌಚಾಲಯಗಳನ್ನು ಕಟ್ಟಿಸಿಕೊಟ್ಟಿದ್ದು, ಗುರುವಾರ ಪೋಷಕರೊಂದಿಗೆ ಬಂದು ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸ್ಥೆಯ ಕಾರ್ಯದರ್ಶಿ ಜಿ.ವಿ. ವೆಂಕಟರಾಮು, ಸಲ್ಮಾನ್ ಹಾಗೂ ಇಮ್ರಾನ್ ಅವರು ಇಂದು ಬೆಂಗಳೂರಿನಲ್ಲಿ ದೊಡ್ಡ ಸಂಸ್ಥೆ ನಡೆಸುವುದರ ಜೊತೆಗೆ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ ಎಂದು ಪ್ರಶಂಸಿಸಿದರು.
ಹಳೆ ವಿದ್ಯಾರ್ಥಿ ಸಲ್ಮಾನ್ ಮಾತನಾಡಿ, ವಿದ್ಯಾರ್ಥಿ ದಿಸೆಯಲ್ಲಿ ಪ್ರತಿಯೊಂದನ್ನು ಕಷ್ಟಪಡುವ ಬದಲು ಇಷ್ಟಪಟ್ಟು ಮಾಡಿದರೆ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ. ಇದಕ್ಕೆ ಪೋಷಕರ ಸಹಕಾರ ಕೂಡ ಅತ್ಯಗತ್ಯ ಎಂದರು.
ಸಂಸ್ಥೆ ಅಧ್ಯಕ್ಷ ರವಿಮೋಹನರೆಡ್ಡಿ ಮಾತನಾಡಿದರು.
ಹಳೆ ವಿದ್ಯಾರ್ಥಿಯ ಪೋಷಕರಾದ ಮುಸ್ತಾಪ, ತಹಸೀನ್, ಸಹೋದರ ಇಮ್ರಾನ್, ಪತ್ನಿ ಸಾನಿಯಾ, ಸಂಸ್ಥೆಯ ಖಜಾಂಚಿ ಪ್ರಸನ್ನಚಾರ್, ನಿರ್ದೇಶಕ ರಾಜಗೋಪಾಲ ರೆಡ್ಡಿ, ಕಾಳಪ್ಪ, ಸದಾನಂದ, ಉಪನ್ಯಾಸಕ ಓಬಳಪ್ಪ, ಮುಖ್ಯ ಶಿಕ್ಷಕಿ ಭಾರತಮ್ಮ, ಶಿಕ್ಷಕರಾದ ಗೋಪಾಲಯ್ಯ, ಪೈರೋಜ್, ಅರುಣ, ನಿಜರಾಜಯ್ಯ, ಜಗದಾಂಬ ಹಾಜರಿದ್ದರು.