ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುಭವ ಮಂಟಪ ವಿಶ್ವಕ್ಕೆ ಮಾದರಿ: ಬಿ.ಜೆ. ಪ್ರಭುಸ್ವಾಮಿ

‘ಶರಣವಾಣಿ’ ಸ್ಮರಣ ಸಂಚಿಕೆ ಬಿಡುಗಡೆ ಸಮಾರಂಭದಲ್ಲಿ ಬಿ.ಜೆ.ಪ್ರಭುಸ್ವಾಮಿ
Last Updated 8 ಫೆಬ್ರುವರಿ 2021, 3:19 IST
ಅಕ್ಷರ ಗಾತ್ರ

ತಿಪಟೂರು: 12ನೇ ಶತಮಾನದ ವಚನ ಕ್ರಾಂತಿಯ ಸಂದರ್ಭದಲ್ಲಿ ಬಸವಣ್ಣ ಕಟ್ಟಿದ ಅನುಭವ ಮಂಟಪ ವಿಶ್ವಕ್ಕೆ ಮಾದರಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಜೆ.ಪ್ರಭುಸ್ವಾಮಿ ತಿಳಿಸಿದರು.

ತಾಲ್ಲೂಕಿನ ಕಿಬ್ಬನಹಳ್ಳಿ ಹೋಬಳಿಯ ಕೆ.ಬಿ.ಕ್ರಾಸ್‍ನ ಗೋಡೆಕೆರೆ ರಂಭಾಪುರಿ ವಿದ್ಯಾಸಂಸ್ಥೆಯಲ್ಲಿ ಸ್ಥಿರಪಟ್ಟಾಧ್ಯಕ್ಷ ಲಿಂ.ಸಿದ್ದರಾಮದೇಶೀಕೇಂದ್ರ ಸ್ವಾಮೀಜಿ ‌ಸ್ಮರಣೆ ಹಾಗೂ ‘ಶರಣವಾಣಿ’ ಸ್ಮರಣ ಸಂಚಿಕೆ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.

ವಚನಗಳು ಹಾಗೂ ಶರಣರ ವಾಣಿಗಳು ಅಂದಿನ ಸಮಾಜದಲ್ಲಿ ಬೇರೂರಿದ್ದ ಲಿಂಗಬೇಧ, ಜಾತಿ ಪದ್ಧತಿಗಳನ್ನು ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಜಾಗೃತಿ ಮೂಡಿಸಿದವು. ಶರಣ ತತ್ವಗಳು ಸಮಸ್ತ ಸಮಾಜದ ಬಂಧುಗಳನ್ನು ಒಂದೆಡೆ ಸೇರಿಸುವ ಪ್ರಯತ್ನವನ್ನು ಮಾಡಿದವು. ಆಧುನಿಕ ಸಮಾಜ ಶರಣ ಸಾಹಿತ್ಯ ಹಾಗೂ ವಚನಗಳನ್ನು ಆಳವಾಗಿ ಅಧ್ಯಯನ ಮಾಡುವ ಮೂಲಕ ಶರಣ ಪರಂಪರೆ ಹಾಗೂ ಪೂರ್ವಿಕರ ಆದರ್ಶಗಳನ್ನು ಅಳವಡಿಸಿ ಜೀವನದಲ್ಲಿ ಸಂಸ್ಕಾರವಂತರಾಗಿ ಬಾಳುವ ಕಲೆಯನ್ನು ಕರಗತ ಮಾಡಿಕೊಳ್ಳಬೇಕಾಗಿದೆ ಎಂದರು.

ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎನ್.ಪರಮೇಶ್ವರಯ್ಯ ಮಾತನಾಡಿ, ‘ಮೈಸೂರಿನ ಸುತ್ತೂರು ರಾಜೇಂದ್ರ ಸ್ವಾಮೀಜಿಗಳಿಂದ 1986ರಲ್ಲಿ ಪ್ರಾರಂಭಗೊಂಡ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಇಂದು ತಾಲ್ಲೂಕು, ಜಿಲ್ಲೆ, ರಾಜ್ಯಮಟ್ಟದಲ್ಲಿ ಘಟಕಗಳನ್ನು ಹೊಂದಿದೆ. ಶರಣ ಚಿಂತನೆ, ಸಂಸ್ಮರಣೆಯ ಉದ್ದೇಶಗಳನ್ನು ಇಟ್ಟುಕೊಂಡು ನಿರಂತರವಾಗಿ ಚಟುವಟಿಗಳನ್ನು ನಡೆಸುತ್ತಾ ಬಂದಿದೆ ಎಂದರು.

ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಜಿ.ಸಿದ್ಧರಾಮಯ್ಯ ಮಾತನಾಡಿ, ‘ಶರಣ ಧರ್ಮ ಮಾನವೀಯ ಮೌಲ್ಯಗಳನ್ನು ಪ್ರತಿಬಿಂಬಿಸುವ ಹಾಗೂ ಬದುಕಿನ ಕಲೆಗಳನ್ನು ಕಲಿಸುವ ನಿಧಿ. ‌ವ್ಯಕ್ತಿ ನಿಷ್ಠೆಗಿಂತ ಸಮಷ್ಠಿ ಪ್ರಜ್ಞೆ ಬೆಳಸಿಕೊಂಡು ವಿಶ್ವ ಮಾನವತೆಯ ಕಡೆಗೆ ಸಾಗುವ ಗುಣವನ್ನು ಬೆಳೆಸಿಕೊಳ್ಳಬೇಕಿದೆ’ ಎಂದರು.

‘ಶರಣವಾಣಿ’ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಯಿತು. ಹೊನ್ನವಳ್ಳಿಯ ಕೆ.ಪಿ.ಎಸ್. ಶಾಲೆಯ ಪ್ರಾಂಶುಪಾಲ ಎಂ.ಡಿ.ಶಿವಕುಮಾರ್, ವಕೀಲೆ ಶೋಭಾ ಜಯದೇವ, ನಿವೃತ್ತ ಪ್ರಾಂಶುಪಾಲ ಸಿ.ಎಸ್.ಶಂಕರಲಿಂಗಪ್ಪ, ಎಸ್.ಚನ್ನಬಸವಯ್ಯ, ಅಖಿಲ ಭಾರತ ವೀರಶೈವ ಮಹಾಸಭಾ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಆರ್.ಸಂಗಮೇಶ್, ಕೊಬ್ಬರಿ ವರ್ತಕ ಟಿ.ಎನ್.ಪರಮ
ಶಿವಯ್ಯ, ಕಸಾಪ ಅಧ್ಯಕ್ಷ ಕೆ.ಬಾಲಕೃಷ್ಣ, ನಿವೃತ್ತ ಉಪನ್ಯಾಸಕ ತ.ಶಿ.ಬಸವಮೂರ್ತಿ, ಎಸ್.ದಕ್ಷಿಣಮೂರ್ತಿ, ನಿವೃತ್ತ ಎಇಒ ಎಚ್.ಡಿ.ಪರಶುರಾಮ ನಾಯ್ಕ, ರಂಭಾಪುರಿ ಶಾಲೆಯ ಮುಖ್ಯಶಿಕ್ಷಕ ನವೀನ್, ಬಾಲಕಿಯ ಸರ್ಕಾರಿ ಪ್ರೌಢಶಾಲೆಯ ಉಪ ಪ್ರಾಂಶುಪಾಲ ಎಂ.ಎಸ್.ಚನ್ನೇಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT