ತುಮಕೂರು: ಜಿಲ್ಲೆಯಲ್ಲಿ ವಿಧಾನಸಭೆ ಚುನಾವಣೆ ಸಮಯದಲ್ಲಿ ಮಾದರಿ ನೀತಿ ಸಂಹಿತೆ ಕಟ್ಟುನಿಟ್ಟು ಜಾರಿ ಹಾಗೂ ಚುನಾವಣಾ ಕಾರ್ಯಗಳಿಗೆ 19 ನೋಡಲ್ ಅಧಿಕಾರಿಗಳನ್ನು ಒಳಗೊಂಡ ತಂಡ ರಚನೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಇಲ್ಲಿ ಬುಧವಾರ ತಿಳಿಸಿದರು.
ವಿವಿಧ 19 ನೋಡಲ್ ತಂಡಗಳಿಗೆ ಅಧಿಕಾರಿಗಳು ನೇತೃತ್ವ ವಹಿಸಲಿದ್ದು, ಇವರ ಜತೆಗೆ ಇತರೆ ಅಧಿಕಾರಿ, ಸಿಬ್ಬಂದಿ ಕೆಲಸ ನಿರ್ವಹಿಸಲಿದ್ದಾರೆ. ಜಿಲ್ಲೆಯ ಎಲ್ಲೆಡೆ ಸರ್ಕಾರ, ಜನಪ್ರತಿನಿಧಿಗಳ ಪ್ರಚಾರ ಸಾಮಗ್ರಿಗಳನ್ನು ತೆರವು ಕಾರ್ಯ ಈಗಾಗಲೇ ಆರಂಭವಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
35 ಚೆಕ್ ಪೋಸ್ಟ್: ಅಂತರರಾಜ್ಯ ಗಡಿಯಲ್ಲಿ 12, ಅಂತರ ಜಿಲ್ಲಾ 17, ಜಿಲ್ಲೆಯ ಇತರೆಡೆಗಳಲ್ಲಿ 16 ಸೇರಿದಂತೆ ಒಟ್ಟು 45 ಚೆಕ್ ಪೋಸ್ಟ್‌ಗಳನ್ನು ತೆರೆಯಲಾಗುತ್ತಿದೆ. ಈ ಚೆಕ್ ಪೋಸ್ಟ್‌ಗಳಲ್ಲಿ ಕಟ್ಟುನಿಟ್ಟಿನ ತಪಾಸಣೆ ಮಾಡಲಾಗುತ್ತದೆ. ಹಣ, ವಸ್ತುಗಳು ಸೇರಿದಂತೆ ಅಕ್ರಮವಾಗಿ ಏನನ್ನೂ ಸಾಗಿಸಲು ಅವಕಾಶ ನೀಡದಂತೆ ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದರು.
ಸೂಕ್ಷ್ಮ ಮತಗಟ್ಟೆ: ಜಿಲ್ಲೆಯ ಎಲ್ಲಾ 11 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 2,683 ಮತಗಟ್ಟೆಗಳಿದ್ದು, ಅವುಗಳಲ್ಲಿ 507 ಸೂಕ್ಷ್ಮ, ಅತಿಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದೆ. ಪ್ರತಿ ಕ್ಷೇತ್ರಕ್ಕೆ ತಲಾ 5ರಂತೆ ಮಹಿಳಾ ಸಿಬ್ಬಂದಿ ಕಾರ್ಯ ನಿರ್ವಹಿಸುವ ಮಹಿಳಾ ಮತಗಟ್ಟೆ, ತಲಾ 2ರಂತೆ ಯುವ ಅಧಿಕಾರಿಗಳಿರುವ ಯುವ ಮತಗಟ್ಟೆ, ತಲಾ ಒಂದು ಅಂಗವಿಕಲರ ಮತಗಟ್ಟೆ ತೆರೆಯಲಾಗುತ್ತದೆ ಎಂದು ವಿವರಿಸಿದರು.
ಮನೆಯಲ್ಲೇ ವೃದ್ಧರ ಮತದಾನ: 80 ವರ್ಷ ಮೇಲ್ಪಟ್ಟವರು ಹಾಗೂ ಅಂಗವಿಕಲರು ಬಯಸಿದರೆ ಮನೆಯಿಂದಲೇ ಮತದಾನ ಮಾಡಲು ಈ ಬಾರಿ ಅವಕಾಶ ಕಲ್ಪಿಸಲಾಗಿದೆ. 80 ವರ್ಷ ಮೇಲ್ಪಟ್ಟ 55,827, ಅಂಗವಿಕಲ 29,720 ಮತದಾರರು ಇದ್ದಾರೆ. ನಮೂನೆ–12ಡಿ ಮೂಲಕ ಅರ್ಜಿ ಸಲ್ಲಿಸಿದರೆ ಅಂತಹವರಿಗೆ ಅಂಚೆ ಮತಪತ್ರಗಳನ್ನು ನೀಡಲಾಗುತ್ತದೆ. ಮತದಾನದ ದಿನ ಮತಗಟ್ಟೆ ಸಿಬ್ಬಂದಿ ಅಂಚೆ ಮತಪತ್ರಗಳನ್ನು ಸಂಗ್ರಹಿಸುತ್ತಾರೆ. ಇಲ್ಲವಾದರೆ ನೇರವಾಗಿ ಮತಗಟ್ಟೆಗೆ ಬಂದು ಮತದಾನ ಮಾಡುವ ಅವಕಾಶವೂ ಇದೆ ಎಂದು ಹೇಳಿದರು.
ವಾಟ್ಸ್ಆ್ಯಪ್ ಗ್ರೂಪ್‌ಗಳಲ್ಲಿ ವೋಟು ಕೇಳಬಹುದು. ಆದರೆ ಅಭ್ಯರ್ಥಿ, ಪಕ್ಷವನ್ನು ಟೀಕಿಸುವುದು, ಅವಹೇಳನ ಮಾಡುವುದು, ವ್ಯಕ್ತಿಗತ ನಿಂದನೆ ಮಾಡಿದರೆ ಗ್ರೂಪ್ ಅಡ್ಮಿನ್ ಹಾಗೂ ಅಂತಹ ಗ್ರೂಪ್‌ಗೆ ಮಾಹಿತಿ ಹಾಕಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ. ವಿದ್ಯಾಕುಮಾರಿ, ಪಾಲಿಕೆ ಆಯುಕ್ತ ಎಚ್.ವಿ. ದರ್ಶನ್, ಹೆಚ್ಚುವರಿ ಜಿಲ್ಲಾಧಿಕಾರಿ ಶಿವಾನಂದ ಬಿ. ಕರಾಳೆ ಉಪಸ್ಥಿತರಿದ್ದರು.
**
ಚುನಾವಣೆ ಸಂಬಂಧ ದೂರು ಸಲ್ಲಿಸಲು ಕಂಟ್ರೋಲ್ ರೂಂ
ವಿಧಾನಸಭಾ ಕ್ಷೇತ್ರ;ದೂರವಾಣಿ ಸಂಖ್ಯೆ
ಚಿಕ್ಕನಾಯಕನಹಳ್ಳಿ;08133–267242
ತಿಪಟೂರು;08134–251039
ತುರುವೇಕೆರೆ;08139–287325
ಕುಣಿಗಲ್;08132–220121
ತುಮಕೂರು ನಗರ;0816–2272200
ತುಮಕೂರು ಗ್ರಾಮಾಂತರ;0816–2006574
ಕೊರಟಗೆರೆ;08138–232153
ಗುಬ್ಬಿ;08131–222234
ಶಿರಾ;08135;295617
ಪಾವಗಡ;08136;200577
ಮಧುಗಿರಿ;08137–200500
ಜಿಲ್ಲಾಧಿಕಾರಿ ಕಚೇರಿ;0816–1950
**
ಮತದಾರರ ವಿವರ
ವಿಧಾನಸಭಾ ಕ್ಷೇತ್ರ;ಪುರುಷ;ಮಹಿಳೆ;ಇತರ;ಯುವ ಮತದಾರ;ಒಟ್ಟು
ಚಿಕ್ಕನಾಯಕನಹಳ್ಳಿ;1,07,673;1,09,200;1;4,355;2,16,874
ತಿಪಟೂರು;88,957;94,178;1;41,32;1,83,136
ತುರುವೇಕೆರೆ;90,308;90,882;1;3,532;1,81,191
ಕುಣಿಗಲ್;98,941;97,747;3;4,114;1,96,691
ತುಮಕೂರು ನಗರ;1,25,169;1,29,823;26;4,054;2,55,018
ತುಮಕೂರು ಗ್ರಾಮಾಂತರ;1,02,066;1,04,019;18;4,239;2,06,103
ಕೊರಟಗೆರೆ;1,01,348;1,01,611;18;3,720;2,02,977
ಗುಬ್ಬಿ;89,904;89,883;11;3,051;1,79,798
ಶಿರಾ;1,12,054;1,09,847;11;4,612;2,21,912
ಪಾವಗಡ;98,489;93,588;10;3,251;1,92,087
ಮಧುಗಿರಿ;96,312;95,299;4;3,677;1,91,615
ಒಟ್ಟು;11,11,221;11,16,077;104;42,737;22,27,402
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.