ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾವಗಡ: ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿ ಕೊಲೆ

Published 26 ಏಪ್ರಿಲ್ 2024, 14:11 IST
Last Updated 26 ಏಪ್ರಿಲ್ 2024, 14:11 IST
ಅಕ್ಷರ ಗಾತ್ರ

ಪಾವಗಡ: ತಾಲ್ಲೂಕಿನ ಭೂಪೂರು ತಾಂಡದಲ್ಲಿ ಗುರುವಾರ ರಾತ್ರಿ ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಜಗಳ ವ್ಯಕ್ತಿಯೊಬ್ಬನ ಕೊಲೆಗೆ ಕಾರಣವಾಗಿದೆ.

ಇದೇ ಗ್ರಾಮದ ಗೋಪಾಲನಾಯ್ಕ(40) ಹತ್ಯೆಯಾದವರು. ಮೃತರ ಸಂಬಂಧಿಗಳಾದ ತರುಣ್ ನಾಯ್ಕ, ಹೇಮಂತನಾಯ್ಕ, ಶ್ರೀರಂಗಪುರ ತಾಂಡದ ನಾಗರಾಜನಾಯ್ಕ ಅವರಿಗೆ ತೀವ್ರ ಗಾಯಗಳಾಗಿವೆ.

ಆರೋಪಿ ನಾಗರಾಜನಾಯ್ಕ ಸಹ ಗಾಯಗೊಂಡಿದ್ದಾನೆ

ಗ್ರಾಮದ ಕಟ್ಟೆಯ ಬಳಿ ಕುಳಿತಿದ್ದ ಗೋಪಾಲನಾಯ್ಕ ಸಂಬಂಧಿಕರಿಗೆ ಆರೋಪಿ ನಾಗರಾಜನಾಯ್ಕ್‌ನ ದ್ವಿಚಕ್ರ ವಾಹನ ತಗುಲಿಸಿದೆ. ಇದೇ ಕಾರಣಕ್ಕೆ ಜಗಳ ನಡೆದಿದೆ. ಗ್ರಾಮಸ್ಥರು ಜಗಳ ಬಿಡಿಸಿ ಕಳುಹಿಸಿದ್ದಾರೆ.

ಆರೋಪಿ ನಾಗರಾಜನಾಯ್ಕ ಮನೆ ಮುಂದೆ ಗೋಪಾಲನಾಯ್ಕ ಹೋಗುತ್ತಿದ್ದಾಗ ಮತ್ತೆ ಜಗಳ ಆರಂಭವಾಗಿದೆ. ಆಗ ನಾಗರಾಜನಾಯ್ಕನು ಗೋಪಾಲನಾಯ್ಕ ಮತ್ತು ಅವರ ಸಂಗಡಿಗರ ಮೇಲೆ ಹಲ್ಲೆ ನಡೆಸಿದ್ದಾನೆ.

ತೀವ್ರವಾಗಿ ಗಾಯಗೊಂಡ ಗೋಪಾಲನಾಯ್ಕ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.

ಪೊಲೀಸರು ಆರೋಪಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ತಿರುಮಣಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT