ಪಾವಗಡ: ತಾಲ್ಲೂಕಿನ ಕರೆಕ್ಯಾತನಹಳ್ಳಿ ಬಳಿ ಶನಿವಾರ ಅಪರಿಚಿತ ವಾಹನ ದ್ವಿಚಕ್ರ ವಾಹನದ ಮೇಲೆ ಹರಿದ ಪರಿಣಾಮ ಬೈಕ್ ಸವಾರ ಅರಸೀಕೆರೆ ಗ್ರಾಮದ ಜೆಸಿಬಿ ಚಾಲಕ ಕುಮಾರ್ (22) ಮೃತಪಟ್ಟಿದ್ದಾರೆ.
ಅರಸೀಕೆರೆ ಕಡೆಗೆ ಬೈಕ್‌ನಲ್ಲಿ ಹೋಗುತ್ತಿದ್ದಾಗ ಅಪರಿಚಿತ ವಾಹನ ಡಿಕ್ಕಿ ಹೊಡೆದು ಕೆಳಗೆ ಬಿದ್ದಿದ್ದ ದ್ವಿಚಕ್ರ ವಾಹನ ಸವಾರನ ತಲೆಯ ಮೇಲೆ ಹರಿದಿದೆ. ಅರಸೀಕೆರೆ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದರು. ಪ್ರಕರಣ ದಾಖಲಾಗಿದೆ.