ಗುರುವಾರ , ಆಗಸ್ಟ್ 18, 2022
25 °C

ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಉದ್ಯಮಿ ಚಂದ್ರಶೇಖರ್ ನೇಮಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರ (ಟೂಡಾ) ನೂತನ ಅಧ್ಯಕ್ಷರನ್ನಾಗಿ ಉದ್ಯಮಿ ಎಚ್.ಜಿ.ಚಂದ್ರಶೇಖರ್ ಅವರನ್ನು ನೇಮಕ ಮಾಡಲಾಗಿದೆ.

ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷರನ್ನಾಗಿ ಉದ್ಯಮಿ ಚಂದ್ರಶೇಖರ್ ನೇಮಕ

ಅಧ್ಯಕ್ಷರ ಜತೆಗೆ ನೂತನ ಸದಸ್ಯರನ್ನಾಗಿ ಎಚ್.ಎಚ್.ಜಗದೀಶ್, ಹೊನ್ನುಡಿಕೆ ಮಾಯರಂಗಣ್ಣ, ಸಿ.ಎಚ್.ನಾಗರತ್ನ, ಎಲ್‌.ಪಿ.ಸುದೀಂದ್ರ ಅವರನ್ನು ನೇಮಿಸಲಾಗಿದೆ.

2020 ಆಗಸ್ಟ್ 28ರಲ್ಲಿ ಬಾವಿಕಟ್ಟೆ ನಾಗಣ್ಣ ಅವರನ್ನು ಟೂಡಾ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದು, ಸುಮಾರು 1 ವರ್ಷ 10 ತಿಂಗಳು ಕೆಲಸ ನಿರ್ವಹಿಸಿದ್ದರು. ಹಿಂದೆ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಬಾವಿಕಟ್ಟೆ ನಾಗಣ್ಣ ಅವರನ್ನು ನೇಮಕ ಮಾಡಲಾಗಿತ್ತು. ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾದ ನಂತರ ವಿವಿಧ ನಿಗಮ ಮಂಡಳಿಗಳಿಗೆ ಹಿಂದಿನ ಅಧ್ಯಕ್ಷರು, ಸದಸ್ಯರನ್ನು ಬದಲಿಸಿ ಹೊಸದಾಗಿ ನೇಮಕ ಮಾಡಲು ನಿರ್ಧರಿಸಲಾಗಿತ್ತು. ರಾಜ್ಯದಲ್ಲಿ ಕೆಲ ದಿನಗಳ ಹಿಂದೆ ಕೆಲವು ನಿಗಮಗಳಿಗೆ ಹೊಸ ಅಧ್ಯಕ್ಷರನ್ನು ನೇಮಕ ಮಾಡಲಾಗಿತ್ತು. ಜಿಲ್ಲೆಯಲ್ಲಿನ ನೇಮಕ ಸಾಧ್ಯವಾಗಿರಲಿಲ್ಲ. ಈಗ ಟೂಡಾ ಅಧ್ಯಕ್ಷರನ್ನು ಬದಲಾವಣೆ ಮಾಡಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು