ದೇವೇಗೌಡರ ಪರ ಪಾದಯಾತ್ರೆ

ಬುಧವಾರ, ಏಪ್ರಿಲ್ 24, 2019
28 °C
ಮಾಜಿ ಶಾಸಕ ರಫೀಕ್ ಅಹಮ್ಮದ್, ಜೆಡಿಎಸ್ ಮುಖಂಡ ಗೋವಿಂದರಾಜು ನೇತೃತ್ವ

ದೇವೇಗೌಡರ ಪರ ಪಾದಯಾತ್ರೆ

Published:
Updated:
Prajavani

ತುಮಕೂರು: ನಗರದಲ್ಲಿ ಅಲ್ಪಸಂಖ್ಯಾತ ಮತದಾರರು ಹೆಚ್ಚಿರುವ 8,9,10 ಮತ್ತು 14ನೇ ವಾರ್ಡ್‌ಗಳಲ್ಲಿ ಮೈತ್ರಿ ಅಭ್ಯರ್ಥಿ ಎಚ್.ಡಿ.ದೇವೇಗೌಡರ ಪರ ಮಾಜಿ ಶಾಸಕ ಡಾ.ರಫೀಕ್ ಅಹಮ್ಮದ್ ಮತ್ತು ಜೆಡಿಎಸ್‌ನ ಗೋವಿಂದರಾಜು ನೇತೃತ್ವದಲ್ಲಿ ಎರಡು ಪಕ್ಷಗಳ ಕಾರ್ಯಕರ್ತರು ಪಾದಯಾತ್ರೆ ಮೂಲಕ ಮತಯಾಚಿದರು.

ಮಹಾನಗರ ಪಾಲಿಕೆ ಸದಸ್ಯರು ಪ್ರಚಾರಕ್ಕೆ ಸಾಥ್ ನೀಡಿದ್ದರು. ಬಿಜಿ ಪಾಳ್ಯ ಸರ್ಕಲ್‌ನಿಂದ ಯಾತ್ರೆ ಆರಂಭಿಸಿದರು. ಪಾಲಿಕೆ ಸದಸ್ಯರಾದ ನಯಾಜ್, ಪ್ರಭಾಮಣಿ ಸುಧೀಶ್ವರ್, ನೂರ್‌ಉನ್ನಿಸಾ ಬಾನು, ನಾಸೀರಾ ಬಾನು ಇದ್ದರು. ಪೂರ್ ಹೌಸ್ ಕಾಲೊನಿ, ವಿನೋಬನಗರ, ಕುರಿಪಾಳ್ಯ, ಜಯಪುರ ಬಡಾವಣೆಗಳ ಬೀದಿಗಳಲ್ಲಿ ಸಂಚರಿಸಿದರು.

ರಫೀಕ್ ಅಹಮ್ಮದ್, ‘ಈ ವಾರ್ಡ್‌ಗಳಲ್ಲಿ 24 ಸಾವಿರಕ್ಕೂ ಹೆಚ್ಚು ಮತದಾರರಿದ್ದಾರೆ. ಈ ವಾರ್ಡುಗಳಲ್ಲಿ ಕಾಂಗ್ರೆಸ್ ಪಕ್ಷದ ಸದಸ್ಯರಿದ್ದಾರೆ. ಇವರ ನೇತೃತ್ವದಲ್ಲಿ ಪಾದಯಾತ್ರೆ ನಡೆಸಿ, ಜಾತ್ಯತೀತ ವ್ಯಕ್ತಿಯಾಗಿರುವ ಎಚ್.ಡಿ.ದೇವೇಗೌಡರಿಗೆ ಮತ ನೀಡುವಂತೆ ಮನವಿ ಮಾಡಲಾಗುತ್ತಿದೆ. ಅಪಾರ ಸಂಖ್ಯೆಯ ಕಾರ್ಯಕರ್ತರು ನಮ್ಮೊಂದಿಗೆ ಇದ್ದಾರೆ’ ಎಂದರು.

ಸಂಜೆ 4.30ಕ್ಕೆ ಕುರಿಪಾಳ್ಯದಲ್ಲಿ ಪಾದಯಾತ್ರೆ ಮುಕ್ತಾಯವಾಯಿತು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ರಾಮಕೃಷ್ಣ, ಉಪಾಧ್ಯಕ್ಷ ಅಪ್ತಾಬ್ ಅಹಮದ್, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಆಟೊ ರಾಜು, ಮೆಹಬೂಬ್ ಪಾಷಾ, ಉಪಮೇಯರ್ ರೂಪಶ್ರೀ, ಉಬೇದುಲ್ಲಾ ಷರೀಫ್, ಶಫಿ, ಜೆಡಿಎಸ್ ಮುಖಂಡರುಗಳು ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !