ಮಂಗಳವಾರ, ಮಾರ್ಚ್ 21, 2023
29 °C

ಕಾರು ಅಪಘಾತ: ಇಬ್ಬರು ಯುವಕರು ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ನಗರದಿಂದ ಬೆಂಗಳೂರಿಗೆ ತೆರಳುವಾಗ ಕಾರು ಅಪಘಾತವಾಗಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಒಬ್ಬರಿಗೆ ಗಂಭೀರ ಗಾಯವಾಗಿರುವ ಘಟನೆ ನೆಲಮಂಗಲ ಸಮೀಪದ ಟಿ.ಬೇಗೂರು ಬಳಿಯ ತಾಳೆಕೆರೆ ಹತ್ತಿರ ನಡೆದಿದೆ.

ಉದಯ್ (23) ಮತ್ತು ಪವನ್ (24) ಮೃತರು. ಮಣಿ ಅವರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಂಗಳೂರಿಗೆ ಲಸಿಕೆ ಹಾಕಿಸಿಕೊಳ್ಳಲು ತೆರಳುವಾಗ ಕಾರು ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿದೆ. ಮೃತರು ತುಮಕೂರಿನ‌ ಚಿಕ್ಕಪೇಟೆಯವರು.

ಪೊಲೀಸ್‌ ವಾಹನಕ್ಕೆ ಕಲ್ಲು ತೂರಾಟ

ಗುಬ್ಬಿ: ಸಿ.ಎಸ್ ಪುರ ಹೋಬಳಿ
ಚಿಕ್ಕ ಕುನ್ನಾಲ ಗ್ರಾಮದಲ್ಲಿ ಪೊಲೀಸ್ ಜೀಪ್ ಮೇಲೆ ದುಷ್ಕರ್ಮಿಗಳ ಶನಿವಾರ ಸಂಜೆ ಕಲ್ಲು, ಸೋಡಾ ಬಾಟಲ್  ಎಸೆದಿದ್ದಾರೆ.

ಪೊಲೀಸ್ ಜೀಪ್‌ನ ಗ್ಲಾಸು ಪುಡಿಯಾಗಿದೆ. ಎಎಸ್‌ಐ ಕುಮಾರಸ್ವಾಮಿ ಅವರ ಕೈಗೆ ಪೆಟ್ಟು ಬಿದ್ದಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಥಳಕ್ಕೆ ಡಿವೈಎಸ್‌ಪಿ ಕುಮಾರಸ್ವಾಮಿ, ಅಡಿಷನಲ್ ಎಸ್‌ಪಿ ಉದೇಶ್ ಕುಮಾರ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಪೂರ್‌ವಾಡ್ ಸ್ಥಳಕ್ಕೆ ಸ್ಥಳಕ್ಕೆ ಭೇಟಿ ನೀಡಿದ್ದರು. ದುಷ್ಕರ್ಮಿಗಳು ತಲೆಮರೆಸಿಕೊಂಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ವಿದ್ಯುತ್ ಕಂಬಕ್ಕೆ ಟ್ರ್ಯಾಕ್ಟರ್ ಡಿಕ್ಕಿ: ಚಾಲಕ ಸಾವು

ಆನೆಸಿದ್ರಿ (ಹಿರಿಯೂರು): ತಾಲ್ಲೂಕಿನ ಆನೆಸಿದ್ರಿ ಬಳಿ ಶುಕ್ರವಾರ ರಾತ್ರಿ ಟ್ರ್ಯಾಕ್ಟರ್ ಟ್ರೈಲರ್ ವಿದ್ಯುತ್
ಕಂಬಕ್ಕೆ ಡಿಕ್ಕಿಯಾಗಿ ರಸ್ತೆ ಪಕ್ಕದ
ತಗ್ಗಿಗೆ ಉರುಳಿ ಬಿದ್ದ ಪರಿ
ಣಾಮವಾಗಿ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಶಿರಾ ತಾಲ್ಲೂಕು ಹುಣಿಸೆಹಳ್ಳಿಯ ನಾಗರಾಜು (21) ಮೃತಪಟ್ಟವರು. ಇವರು ಆನೆಸಿದ್ರಿ ಗೊಲ್ಲರ
ಹಟ್ಟಿಯಿಂದ ಕಾಟನಾಯಕನ
ಹಳ್ಳಿಗೆ ಹೋಗುತ್ತಿದ್ದರು.
ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು