ಮಲೆನಾಡಿನ ಭಾಗಕ್ಕೆ ಸೀಮಿತವಾಗಿದ್ದ ಏಲಕ್ಕಿ, ಮೆಣಸು, ಜಾಕಾಯಿ ಬೆಳೆಗಳ ಘಮಲು ಈಗ ಬಯಲು ಸೀಮೆ ತುಮಕೂರಿಗೂ ಹರಡಿದೆ. ಲಾಭದಾಯಕ ಬೆಳೆಯ ಕಡೆಗೆ ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ ಇಲ್ಲಿನ ರೈತರು. ತುಮಕೂರು ತಾಲ್ಲೂಕಿನ ಬ್ರಹ್ಮಸಂದ್ರ ಗ್ರಾಮದ ಸಂತೋಷ್ ಹೊಸ ಪ್ರಯತ್ನ ಎಂಬಂತೆ ಬಯಲು ಸೀಮೆಯಲ್ಲಿ ಏಲಕ್ಕಿ ಬೆಳೆದಿದ್ದಾರೆ. ತಮ್ಮ ಎರಡೂವರೆ ಎಕರೆ ಪ್ರದೇಶದಲ್ಲಿ ನಾಟಿ ಮಾಡಿದ್ದು, ಈಗ ಉತ್ತಮ ಇಳುವರಿ ನಿರೀಕ್ಷೆಯಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.