ತುರುವೇಕೆರೆ: ತಾಲ್ಲೂಕಿನ ದಂಡಿನಶಿವರ ಹೋಬಳಿಯ ಕೊಂಡಜ್ಜಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡಗೊರಾಘಟ್ಟ ಗ್ರಾಮದ ಪೋಷಿತ್ ಶೆಟ್ಟಿ (4) ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಮಂಗಳವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ದೊಡ್ಡಗೊರಾಘಟ್ಟದ ಚಂದನ್ ಶೆಟ್ಟಿಯವರ ಮಗು ಪೋಷಿತ್ ಶೆಟ್ಟಿ ಮನೆಯ ಮುಂಭಾಗ ಆಟವಾಡುವ ವೇಳೆ ಮನೆಗೆ ಹೊಂದಿಕೊಂಡಿರುವ ತೋಟಕ್ಕೆ ಹಾಕಲಾಗಿದ್ದ ವಿದ್ಯುತ್ ತಂತಿಬೇಲಿಯ ಮೇಲೆ ತುಂಡಾಗಿ ಬಿದ್ದಿದ್ದ ತಂತಿ ಸ್ಪರ್ಶಿಸಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಸ್ಥಳಕ್ಕೆ ಸಿಪಿಐ ಲೋಹಿತ್ ಕುಮಾರ್, ಮೂರ್ತಿ, ಬೆಸ್ಕಾಂನ ಎಇಇ ಎನ್.ಸಿ.ರಾಜಶೇಖರ್, ಶಾಖಾಧಿಕಾರಿ ಜಾನ್ ಮಧುಕರ್ ಭೇಟಿ ನೀಡಿದರು. ದಂಡಿನಶಿವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.